Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ತಾಲ್ಲೂಕಿನ ಈ ಊರುಗಳಲ್ಲಿ ಏಪ್ರಿಲ್ 23ರಂದು ವಿದ್ಯುತ್ ವ್ಯತ್ಯಯ

---Advertisement---

 

ಚಿತ್ರದುರ್ಗ. ಏ.21:  ಬೆಸ್ಕಾಂ ಚಿತ್ರದುರ್ಗ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ಭರಮಸಾಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿರುವ 12.5 ಎಂ.ವಿ.ಎ ಪರಿವರ್ತಕದ ದುರಸ್ಥಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಇದೇ ಏ.23ರಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಭರಮಸಾಗರ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎನ್.ಜೆ.ವೈ ಮತ್ತು ಐ.ಪಿ. ಮಾರ್ಗಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ಅಡಚಣೆ ಯಾಗುವ ಪ್ರದೇಶಗಳು: 66/11 ಕೆವಿ ಭರಮಸಾಗರ ವಿವಿ ಕೇಂದ್ರದಿಂದ ಸರಬರಾಜಾಗುವ 11ಕೆವಿ ಮಾರ್ಗಗಳಲ್ಲಿ ವಿದ್ಯುತ್ ಅಡಚಣೆಯಾಗುತ್ತದೆ. ಎಫ್-4 ಕೊಳಹಾಳ್ ಎನ್.ಜೆ.ವೈ ಮತ್ತು ಎಫ್-10 ಅಡವಿಗೊಲ್ಲರಹಳ್ಳಿ ಎನ್.ಜೆ.ವೈ ಮಾರ್ಗಗಳು, ಎಫ್-1 ಹೆಗ್ಗೆರೆ, ಎಫ್-2 ಎಮ್ಮೆಹಟ್ಟಿ, ಎಫ್-3 ನಲ್ಲಿಕಟ್ಟಿ ಮತ್ತು ಎಫ್-9 ಬಹದ್ದೂರಗಟ್ಟ ಐ.ಪಿ. ಮಾರ್ಗಗಳು.
ವಿದ್ಯುತ್ ವ್ಯತ್ಯಯ ಆಗುವ ಪ್ರದೇಶಗಳು: 66/11 ಕೆವಿ ಭರಮಸಾಗರ ವ್ಯಾಪ್ತಿಯ ಕೊಳಹಾಳ್, ಎಮ್ಮೆಹಟ್ಟಿ, ಚಿಕ್ಕಬೆನ್ನೂರು, ಬಸವನಶಿವನಕೆರೆ, ಬೇಡರಶಿವನಕೆರೆ, ಹಂಪನೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಚಿತ್ರದುರ್ಗ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...