ಹಿರಿಯೂರು, ಜೂನ್. 20 : ಇಲ್ಲಿನ ಉಪವಿಭಾಗದ ವ್ಯಾಪ್ತಿಯ ಹಿಂಡಸಘಟ್ಟ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಇದೇ ಜೂನ್ 21ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಹಿಂಡಸಘಟ್ಟ 66/11 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದಲ್ಲಿ 1ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಿರ್ವಹಿಸುವ ಪ್ರಯುಕ್ತ ಜೂನ್ 21ರಂದು ಬೆಳಿಗ್ಗೆ 10 ರಿಂದ 5 ರವರೆಗೆ ಗೋಕುಲನಗರ, ಅರಿಶಿಣಗುಂಡಿ, ಹಾಲ್‌ಮಾದೇನಹಳ್ಳಿ, ಶೇಷಪ್ಪನಹಳ್ಳಿ, ಯಲ್ಲದಕೆರೆ, ಬಡಗೊಲ್ಲರಹಟ್ಟಿ, ಚಿಗಲಿಕಟ್ಟಿ, ವೀರವ್ವನಾಗತಿಹಳ್ಳಿ, ನಾಯಕರಕೊಟ್ಟಿಗೆ, ಸೀಗೇಹಟ್ಟಿ, ಪಿಲಾಜನಹಳ್ಳಿ, ಕಾತ್ರಿಕೇನಹಳ್ಳಿ, ಪರಮೇನಹಳ್ಳಿ, ಉಡುವಳ್ಳಿ, ರಂಗಾಪುರ, ಮಾಳಗೊಂಡನಹಳ್ಳಿ, ಮಾದೇನಹಳ್ಳಿ ಮುಸ್ಲಿಂ ಕಾಲೋನಿ, ದಿಂಡಾವರ, ಲಾಯರ್ ದಾಸರಹಳ್ಳಿ, ಮಾವಿನಮಡು ಹಾಗೂ ಸುತ್ತಮುತ್ತಲಿನ ಗ್ರಾಮದ ಗ್ರಾಹಕರು, ರೈತರು, ಸಾರ್ವಜನಿಕರು ಸಹಕರಿಸಬೇಕು ಎಂದು ಹಿರಿಯೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ಪೀರ್‌ಸಾಬ್ ತಿಳಿಸಿದ್ದಾರೆ
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















