Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪಿಎಂ ಕಿಸಾನ್ ಆರ್ಥಿಕ ನೆರವು: ದಾಖಲೆ ಸಲ್ಲಿಸಲು ಸೂಚನೆ

Facebook
Twitter
Telegram
WhatsApp

ಚಿತ್ರದುರ್ಗ,(ಜನವರಿ.06) : ಪಿಎಂ ಕಿಸಾನ್ ಯೋಜನೆಯಡಿ ನಿಯತಕಾಲಿಕವಾಗಿ ಫಲಾನುಭವಿಗಳ ಅರ್ಹತೆ ಪರಿಶೀಲಿಸಿ ಖಾತ್ರಿ ಪಡಿಸುವುದು ಅವಶ್ಯಕವಾಗಿರುತ್ತದೆ.

ಆದ್ದರಿಂದ fruitspmk.karnataka.gov.in ನಲ್ಲಿ ನೋಂದಾಣಿಯಾಗಿರುವ ರೈತ ಫಲಾನುಭವಿಗಳು ನವೀಕೃತ ಭೂಮಿ ದತ್ತಾಂಶ ಮತ್ತು ತಂತ್ರಾಂಶ ಆಧಾರಿತ ಪರಿಶೀಲನೆ ನಡೆಸಿ ಕೆಲ ರೈತರ ವಿವರಗಳನ್ನು ಮರು ಪರಿಶೀಲನೆ  ಮಾಡುವುದು ಅವಶ್ಯಕವಾಗಿದೆ. ಆದ್ದರಿಂದ ರೈತರ ವಿವರಗಳನ್ನು ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ.
ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಹ ದಾಖಲೆಗಳನ್ನು ಸಲ್ಲಿಸಿ ಮುಂದಿನ ಪಿಎಂ ಕಿಸಾನ್ ಯೋಜನೆಯ ಆರ್ಥಿಕ ಸಹಾಯವನ್ನು ಪಡೆಯಬಹುದು.

ಪಿಎಂ ಕಿಸಾನ್ ಯೋಜನೆಯ ಆರ್ಥಿಕ ಸಹಾಯ ಪಡೆಯಲು ಜಮೀನಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಇತರೆ ಅಗತ್ಯ ದಾಖಲೆಗಳೊಂದಿಗೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಮಾಡತಕ್ಕದ್ದು.
ಪಿಎಂಕೆ ಖಾತೆಯನ್ನು ಹೊಂದಿರುವವರು ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿಯನ್ನು ಮಾಡಿಸಿಕೊಳ್ಳಲು ಸೂಚಿಸಿದೆ.

ಫಲಾನುಭವಿಗಳು http://pmkisan.gov.in ಗೆ ಭೇಟಿ ನೀಡಿ ಆಧಾರ್ ಸಂಖ್ಯೆಯನ್ನು ಮೊಬೈಲ್ ಸಂಖ್ಯೆಗೆ ನಮೂದಿಸಬೇಕು. ಬರುವ ಒಟಿಪಿ ಸಂಖ್ಯೆಗೆ ನಮೂದಿಸಿ ಉಚಿತವಾಗಿ ಇ-ಕೆವೈಸಿ ಮಾಡಿಸಬಹುದು. ಜೊತೆಗೆ ರೈತರು ಹತ್ತಿರದ ಸಾಮಾನ್ಯ ಸೇವಾ ಸಿಂಧು ಕೇಂದ್ರಕ್ಕೆ ಭೇಟಿ ನೀಡಿ ಬಯೋಮೆಟ್ರಿಕ್ ಉಪಕರಣದಲ್ಲಿ ಬೆರಳು ನಮೂದಿಸಿ ಇ-ಕೆವೈಸಿ ಮಾಡಬಹುದು. ಈ ಪ್ರಕ್ರಿಯೆಗಾಗಿ ಸಿಎಸ್‍ಸಿ ಕೇಂದ್ರದವರಿಗೆ ಶುಲ್ಕ ಪಾವತಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರಾದ ಡಾ. ಪಿ.ರಮೇಶ್‍ಕುಮಾರ್ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಾಜ್ಯದ ಗಮನ ಸೆಳೆಯಲು ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ : ಕುಮಾರಸ್ವಾಮಿಗೆ ಡಿಕೆಶಿ ಟಾಂಗ್

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ನಿನ್ನೆಯಿಂದ ಡಿಸಿಎಂ ಡಿಕೆ ಶಿವಕುಮಾರ್ ಅವರ ಹೆಸರು ಓಡಾಡುತ್ತಿದೆ. ಅವರೇ ಪೆನ್ ಡ್ರೈವ್ ಹಂಚಿರುವುದು ಅಂತ ಜೆಡಿಎಸ್ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಕುಮಾರಸ್ವಾಮಿ ಅವರಿಗೆ

ವಿಶ್ವ ರೆಡ್‍ಕ್ರಾಸ್ ದಿನಾಚರಣೆ | ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಚಿತ್ರದುರ್ಗ ಮೇ. 08 :  ವಿಶ್ವ ರೆಡ್‍ಕ್ರಾಸ್ ದಿನಾಚರಣೆಯ ಅಂಗವಾಗಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಚಿತ್ರದುರ್ಗ ಶಾಖೆ ಹಾಗೂ ಎಸ್.ಜಿ.ಸುರಕ್ಷಾ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಮೇ. 8 ರ ಇಂದು ಕಾಲೇಜಿನಲ್ಲಿ

ಚಿತ್ರದುರ್ಗ ಜಿಲ್ಲೆಯ ರೈತರಿಗೆ ಉಪಯುಕ್ತ ಮಾಹಿತಿ | ಬೆಳೆ ಪರಿಹಾರ ಪಾವತಿ ಸಂಬಂಧ ಸಹಾಯವಾಣಿ ಆರಂಭ : ಇಲ್ಲಿದೆ ತಾಲ್ಲೂಕುವಾರು ಮಾಹಿತಿ

ಚಿತ್ರದುರ್ಗ. ಮೇ.08:   ಬೆಳೆ ಪರಿಹಾರ ಪಾವತಿ ಸಂಬಂಧ ಮಾಹಿತಿ ಪಡೆದುಕೊಳ್ಳಲು ರೈತರಿಗೆ ಅನುಕೂಲವಾಗುವಂತೆ ಜಿಲ್ಲಾಧಿಕಾರಿ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ  ಹಾಗೂ ಜಿಲ್ಲೆಯ 6 ತಾಲ್ಲೂಕು ಕಚೇರಿಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

error: Content is protected !!