Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪೆಟ್ರೋಲ್ ಲೀಟರ್ ಗೆ 5 ರೂಪಾಯಿ ಹೆಚ್ಚಳ..!

---Advertisement---

ಬೆಂಗಳೂರು: ಮೊದಲೇ ಗ್ಯಾಸ್ ಸಿಕ್ತಾ ಇಲ್ಲ, ಸಿಕ್ಕಿದ ಕಡೆ ತೆಗೆದುಕೊಳ್ಳೋಣಾ ಅಂದ್ರೆ ಅದಕ್ಕೂ ಬೆಲೆ ಜಾಸ್ತಿ ಮಾಡಿ ಕುಳಿತಿರುವಾಗ ಈಗ ಪೆಟ್ರೋಲ್ ದರವೂ ಏರಿಕೆಯಾಗಿದೆ. ಖಾಸಗಿ ಕಂಪನಿಯಾದ ನಯಾರಾ ತೈಲ ಕಂಪನಿ ಪೆಟ್ರೋಲ್ ಹಾಗೂ ಡಿಸೇಲ್ ದರವನ್ನು ಏರಿಕೆ ಮಾಡಿದೆ. ನಯಾರಾ ಪೆಟ್ರೋಲ್ ಬಂಕ್ ಗಳಲ್ಲಿ ಇಂದು ಬೆಳಗ್ಗೆಯಿಂದಲೇ ಜಾರಿಗೆ ಬರುವಂತೆ ಇಂಧನ ದರದಲ್ಲಿ ಭಾರೀ ಏರಿಕೆ ಮಾಡಲಾಗಿದೆ. ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್ ಗೆ 5 ರೂಪಾಯಿ ಹಾಗೂ ಡಿಸೇಲ್ ಬೆಲೆಯಲ್ಲಿ ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಳ ಮಾಡಲಾಗಿದೆ.

ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಬಂಕ್ ಗಳಿಗೆ ಹೋಲಿಕೆ ಮಾಡಿಕೊಂಡರೆ ನಯಾರಾ ಬಂಕ್ ಗಳಲ್ಲಿ ಈ ದರ ವ್ಯತ್ಯಾಸ ಎದ್ದು ಕಾಣುತ್ತಿದೆ. ಈಗ ನಯಾರಾ ಬಂಕ್ ನಲ್ಲಿ ದರ ಏರಿಕೆ ಮಾಡಿದ್ದರು ಸಹ ಮುಂದಿನ ದಿನಗಳಲ್ಲಿ ಬೇರೆ ಬೇರೆ ಬಂಕ್ ಗಳಲ್ಲೂ ಏರಿಕೆಯಾಗಬಹುದು ಎಂಬ ಚಿಂತೆ ಕಾಡುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಅದಾಗಲೇ ಪೆಟ್ರೋಲ್ ಡಿಸೇಲ್ ಕಡಿಮೆಯಾಗಬಹುದು ಎಂಬ ಭಯಕ್ಕೆ ಜನ, ದೊಡ್ಡ ದೊಡ್ಡ ಕ್ಯಾನ್ ತೆಗೆದುಕೊಂಡು ಹೋಗಿ ತುಂಬಿಸಿಕೊಂಡು ಬಂದಿರುವ ಘಟನೆ ನಡೆದಿದೆ. ಇದರ ನಡುವೆ ಮತ್ತೊಂದು ಪ್ಯಾಂಡಮಿಕ್ ಗೆ ರೆಡಿಯಾಗಿ ಅಂತ ಪ್ರಧಾನಿ ಮೋದಿ ಅವರೇ ಮುನ್ಸೂಚನೆ ಕೊಟ್ಟಿರೋದು ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬ ಕಲ್ಪನೆ ಶುರುವಾಗಿದೆ. ಮೊದಲೇ ಅದೆಷ್ಟೋ ಜನ ಕೆಲಸ ಕಳೆದುಕೊಂಡಿದ್ದಾರೆ, ಜೊತೆಗೆ ಬೆಲೆ ಏರಿಕೆಗಳ ನಡುವೆ ಪೆಟ್ರೋಲ್ ಡಿಸೇಲ್ ದರವೂ ಏರಿಕೆಯಾದರೆ ಜನರ ಜೀವನ ಅಧೋಗತಿ ಅಷ್ಟೇ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...