Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸೌಹಾರ್ದತೆ ಪಾಲನೆಯಾದಾಗ ಮಾತ್ರ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯ : ಫಾದರ್ ಎಂ.ಎಸ್.ರಾಜು

Facebook
Twitter
Telegram
WhatsApp

ಚಿತ್ರದುರ್ಗ: ಅಧಿಕಾರ, ದರ್ಪ, ದೌರ್ಜನ್ಯದಿಂದ ಮೆರೆಯುವವರಿಗೆ ಎಲ್ಲಾ ಜಾತಿ, ಧರ್ಮದವರು ಸೌಹಾರ್ದತೆ ಪ್ರೀತಿಯ ಮೂಲಕ ಉತ್ತರ ಕೊಡಬೇಕೆಂದು ಫಾದರ್ ಎಂ.ಎಸ್.ರಾಜು ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಭಾನುವಾರ ಅಂಕುರ ಪ್ರಕಾಶನ ಚಂದ್ರಕಾಂತ ವಡ್ಡುರವರ ಸೌಹಾರ್ದ ಕರ್ನಾಟಕ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಸೌಹಾರ್ದತೆ ಎನ್ನುವುದು ಪುಸ್ತಕದ ರೂಪದಲ್ಲಿ ಇದ್ದರೆ ಸಾಲದು. ಅದು ಪ್ರತಿಯೊಬ್ಬರ ಜೀವನದಲ್ಲಿಯೂ ಪಾಲನೆಯಾದಾಗ ಮಾತ್ರ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯ. ನಮ್ಮತನ, ಶ್ರಮ, ಅಸ್ತಿತ್ವ ಎಲ್ಲವೂ ಹದಗೆಟ್ಟಿದೆ. ಪ್ರಜಾಪ್ರಭುತ್ವದಲ್ಲಿ ಸೌಹಾರ್ದತೆ ಎನ್ನುವುದು ಹಾಳಾಗುತ್ತಿದೆ. ಮೂಢನಂಬಿಕೆಯಲ್ಲಿ ಬದುಕುತ್ತಿದ್ದೇವೆ. ಯಾವುದೇ ಒಂದು ವ್ಯವಸ್ಥೆಗೆ ಹೆದರಿ ಫಲಾಯನವಾಗಬಾರದು. ಹೋರಾಡಿ ಅನೇಕರಿಗೆ ಮಾದರಿಯಾಗಬೇಕೆಂದು ಹೇಳಿದರು.

ಎಲ್ಲಾ ದಾರ್ಶನಿಕರು, ಗುರುಗಳು ನಮ್ಮ ನೆಲದಲ್ಲಿ ಜನಿಸಿದ್ದಾರೆ. ಜಡ್ಡುಗಟ್ಟಿ ಮಂದಮತಿಗಳಾಗಿದ್ದೇವೆ. ಸೌಹಾರ್ದತೆ ಕಾರ್ಯತತ್ಪರತೆಯಾಗಬೇಕು. ಮನುಷ್ಯ ಮನುಷ್ಯನನ್ನು ನೆರೆಹೊರೆಯವರನ್ನು ಪ್ರೀತಿಸಬೇಕು ಆಗ ಸೌಹಾರ್ದತೆಗೆ ನಿಜವಾದ ಅರ್ಥ ಬರುತ್ತದೆ ಎಂದರು.

ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಮಾತನಾಡುತ್ತ ಸೌಹಾರ್ಧತೆ ಎನ್ನುವುದು ಎಲ್ಲಾ ಜಾತಿ ಧರ್ಮದವರಿಗೆ ಮನವರಿಕೆಯಾಗಬೇಕು. ಯಾವುದೇ ಜಾತಿ ಭೇದವಿಲ್ಲದೆ ಎಲ್ಲರೂ ಸೌಹಾರ್ಧತೆಯಿಂದ ಬದುಕುತ್ತಿದ್ದೇವೆ. ನಡೆದುಕೊಳ್ಳುವ ರೀತಿ ಬಹಳ ಮುಖ್ಯ. ನಾನು ಓದುವಾಗ ಯಾವ ಜಾತಿ, ಧರ್ಮ ಎಂದು ಯಾರು ಕೇಳುತ್ತಿರಲಿಲ್ಲ, ಹಿಂದೂ, ಮುಸ್ಲಿಂ, ಸಿಖ್, ಜೈನ್, ಕ್ರಿಶ್ಚಿಯನ್ ಎನ್ನವ ಅಸಮಾನತೆ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಕೋಮುವಾದ, ಜಾತಿವಾದ ಜಾಸ್ತಿಯಾಗುತ್ತಿದೆ. ಇಂತಹ ಸಂದರ್ಭಕ್ಕೆ ಕರ್ನಾಟಕ ಸೌಹಾರ್ಧ ಪುಸ್ತಕ ಹೊರಬಂದಿರುವುದು ಸಮಯೋಚಿತವಾಗಿದೆ ಎಂದು ಗುಣಗಾನ ಮಾಡಿದರು.

ಎ.ಐ.ಎಂ.ಎಸ್.ಎಸ್.ನ ಸುಜಾತ ಮಾತನಾಡಿ ಸೌಹಾರ್ಧತೆ ಎನ್ನುವುದು ನಮ್ಮೊಳಗೆ ನಮಗೆ ಸ್ಪೂರ್ತಿಯಾಗಬೇಕು. ಕೋಮುಗಲಭೆ, ಜಾತಿವಾದ ಎನ್ನುವುದು ಜಾತಿ ಧರ್ಮಗಳ ನಡುವಿನ ಸೌಹಾರ್ಧತೆಯನ್ನು ಮುರಿಯುತ್ತಿದೆ. ಪ್ರಮುಖರು, ದೊಡ್ಡವರು ಎನಿಸಿಕೊಂಡವರಿಂದಲೆ ಸೌಹಾರ್ಧತೆಗೆ ಧಕ್ಕೆಯಾಗುತ್ತಿದೆ ಎಂದು ವಿಷಾಧಿಸಿದರು.
ಉಪನ್ಯಾಸಕ ಜಗದೀಶ್ ಸೌಹಾರ್ಧ ಕರ್ನಾಟಕ ಪುಸ್ತಕ ಕುರಿತು ಮಾತನಾಡಿದರು.
ಕೃತಿಕಾರ ಚಂದ್ರಕಾಂತ ವಡ್ಡು ವೇದಿಕೆಯಲ್ಲಿದ್ದರು.

ಜಿ.ಎಸ್.ಉಜ್ಜಿನಪ್ಪ, ಅಶೋಕ್ ಸಂಗೇನಹಳ್ಳಿ, ಡಾ.ಕರಿಯಪ್ಪ ಮಾಳಿಗೆ, ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ರೈತ ಮುಖಂಡ ಟಿ.ನುಲೇನೂರು ಶಂಕರಪ್ಪ ಇನ್ನೂ ಮೊದಲಾದವರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗಣೇಶ್‍ನಾಯ್ಕ ನಿಧನ

  ಸುದ್ದಿಒನ್, ಚಿತ್ರದುರ್ಗ, ಮೇ. 14 : ಮುರುಘಾಮಠದ ಸಮೀಪವಿರುವ ಅಗಸರಹಳ್ಳಿಯ ವಾಸಿ ಗಣೇಶ್‍ನಾಯ್ಕ(55) ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಮನೆಯಲ್ಲಿ ಎದೆನೋವು ಕಾಣಿಸಿಕೊಂಡಾಗ ಕೂಡಲೆ ಜಿಲ್ಲಾಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದರು. ಮೃತರು

ಟೀಂ ಇಂಡಿಯಾದ ಕೋಚ್ ಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ : ಏನೆಲ್ಲಾ ಕ್ವಾಲಿಟಿ ಬೇಕು ಗೊತ್ತಾ..?

  ಐಪಿಎಲ್ ಮುಗಿದ ಬಳಿಕ ಟಿ-20 ವಿಶ್ವಕಪ್ ಶುರುವಾಗಲಿದೆ. ಟೀಂ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಮುಂದುವರೆಯುವುದು ಅನುಮಾನ. ಜೂನ್ ನಲ್ಲಿ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಮುಗಿಯಲಿದೆ.‌ ಬಿಸಿಸಿಐ ಹೊಸ ಕೋಚ್

ಸಹಕಾರಿ ಸಂಘಗಳಲ್ಲಿಯೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ನೀಡಿ : ರಾಜ್ಯ ಸಾಮಾಜಿಕ ಸಂಘರ್ಷ ಸಮಿತಿ ಒತ್ತಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್,  ಚಿತ್ರದುರ್ಗ ಮೇ. 14 :  ರಾಜ್ಯ ಸರ್ಕಾರ ಜಿ.ಪಂ. ತಾ.ಪಂ. ಗ್ರಾ.ಪಂ. ಹಾಗೂ ಮಹಾನಗರಪಾಲಿಕೆ, ನಗರಸಭೆ, ಪಟ್ಟಣ

error: Content is protected !!