ಟೀಂ ಇಂಡಿಯಾದ ಕೋಚ್ ಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ : ಏನೆಲ್ಲಾ ಕ್ವಾಲಿಟಿ ಬೇಕು ಗೊತ್ತಾ..?

suddionenews
1 Min Read

 

ಐಪಿಎಲ್ ಮುಗಿದ ಬಳಿಕ ಟಿ-20 ವಿಶ್ವಕಪ್ ಶುರುವಾಗಲಿದೆ. ಟೀಂ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಮುಂದುವರೆಯುವುದು ಅನುಮಾನ. ಜೂನ್ ನಲ್ಲಿ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಮುಗಿಯಲಿದೆ.‌ ಬಿಸಿಸಿಐ ಹೊಸ ಕೋಚ್ ಗೆ ಅರ್ಜಿ ಆಹ್ವಾನಿಸಿದೆ. ರಾಹುಲ್ ದ್ರಾವಿಡ್ ಅವರು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು ಎಂದು ಜೈ ಶಾ ಹೇಳಿದ್ದರು.

ಮುಖ್ಯ ಕೋಚ್ ಗೆ ಬಿಸಿಸಿಐ ಸೋಮವಾರ ಅರ್ಜಿ ಆಹ್ವಾನಿಸಿದೆ. ಮೇ 27ರ ಸೋಮವಾರ ಸಂಜೆ 6 ಗಂಟೆಯ ಒಳಗೆ ಆಕಾಂಕ್ಷಿತರು ಅರ್ಜಿ ಸಲ್ಲಿಕೆ ಮಾಡಬಹುದು. ಕೋಚ್ ಗಳ ಆಯ್ಕೆ ಪ್ರಕ್ರಿಯೆ ಯು ಅರ್ಜಿಗಳ ಪರಿಶೀಲನೆಯ ಮೂಲಕ ನಡೆಯುತ್ತದೆ. ನಂತರ ವೈಯಕ್ತಿಕ ಸಂದರ್ಶನ ಮತ್ತು ಶಾರ್ಟ್ ಲೀಸ್ಟ್ ಮೂಲಕ ಅಭ್ಯರ್ಥಿಗಳ ಮೌಲ್ಯಮಾಪನ ಮಾಡಲಾಗುತ್ತದೆ. ಟೀಂ ಇಂಡಿಯಾದ ಮುಖ್ಯ ಕೋಚ್ ನ ಅಧಿಕಾರಾವಧಿ ಜುಲೈ 1, 2024 ರಿಂದ ಪ್ರಾರಂಭವಾಗಿ ಡಿಸೆಂಬರ್ 31, 2027ರ ವರೆಗೆ ಮುಂದುವರೆಯಲಿದೆ.

ಮುಖ್ಯ ಕೋಚ್ ಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಹಾಕುವವರಿಗೆ ಕೆಲವೊಂದಿಷ್ಟು ಅರ್ಹತೆಗಳು ಇರಬೇಕಾಗಿರುತ್ತದೆ. ಆ ಅರ್ಹತೆಗಳ ಲೀಸ್ಟ್ ಇಲ್ಲಿದೆ.

* ಕನಿಷ್ಠ 30 ಟೆಸ್ಟ್ ಅಥವಾ 50 ODI ಪಂದ್ಯಗಳನ್ನು ಆಡಿದ ಅನುಭವ ಇರಬೇಕು.

* ಟೆಸ್ಟ್ ಪಂದ್ಯವನ್ನಾಡುವ ಯಾವುದಾದರೂ ಒಂದು ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ಕನಿಷ್ಠ ಎರಡು ವರ್ಷ ಕೆಲಸ ಮಾಡಿರಬೇಕು.

*ಕನಿಷ್ಠ ಮೂರು ವರ್ಷಗಳ ಕಾಲ ಐಪಿಎಲ್ ಅಥವಾ ಅದಕ್ಕೆ ಸಮಾನವಾದ ಇಂಟರ್ನ್ಯಾಷನಲ್ ಲೀಗ್ ಅಥವಾ ಪ್ರಥಮ ದರ್ಜೆ ತಂಡ ಅಥವಾ ರಾಷ್ಟ್ರೀಯ ಎ ತಂಡದ ಸಹಾಯಕ ಸದಸ್ಯ ಅಥವಾ ಮುಖ್ಯ ಕೋಚ್ ಆಗಿ ಕೆಲಸ ಮಾಡಿರಬೇಕು.

* ವಯಸ್ಸು 60 ವರ್ಷಕ್ಕಿಂತ ಕಡಿಮೆ ಇರಬೇಕು

ಈ ಅರ್ಹತೆಗಳು ಇರುವವರು ಬಿಸಿಸಿಐಗೆ ಅರ್ಜಿ ಸಲ್ಲಿಸಬಹುದು. ಕೆಲವೊಂದು ಸುತ್ತುಗಳ ಮೂಲಕ ಮುಖ್ಯ ಕೋಚ್ ಆಗಿ ಆಯ್ಕೆ ಮಾಡಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *