ರಕ್ತ ನೋಡಿದ ಭಯಕ್ಕೆ ಸ್ಟ್ರೋಕ್ ಆಗಿ ನಟಿ ಪವಿತ್ರಾ ಸಾವು : ಜೊತೆಗಿದ್ದ ನಟ ಹೇಳಿದ್ದೇನು..?

1 Min Read

ಭವಿಷ್ಯದಲ್ಲಿ ಒಳ್ಳೆಯ ಪೋಷಕ ನಟಿಯಾಗುವ ಎಲ್ಲಾ ಲಕ್ಷಣವನ್ನು ಹೊತ್ತುಕೊಂಡಿದ್ದವರು ಪವಿತ್ರಾ ಜಯರಾಂ. ಅದರಲ್ಲೂ ಸೀರಿಯಲ್ ನ ಖಳನಟಿಗೆ ಹೇಳಿ ಮಾಡಿಸಿದಂತಿದ್ದರು‌. ತ್ರಿಯನಿ ಧಾರಾವಾಹಿಯಲ್ಲಿ ಖಳನಟಿಯಾಗಿ ಎಲ್ಲರ ಮನಸ್ಸು ಗೆದ್ದಿದ್ದರು. ಆದರೆ ಅವರು ಕಾರು ಅಪಘಾತದಿಂದ ಸಾವನ್ನಪ್ಪಿದ್ದು, ನಿನ್ನೆ ಮಂಡ್ಯದಲ್ಲಿ ಅಂತ್ಯಕ್ರಿಯೆ ನೆರವೇರಿದೆ‌.

ಅಂತ್ಯಕ್ರಿಯೆ ಬಳಿಕ ಮಾತನಾಡಿದ ಪತಿ, ಕಾರು ಅಪಘಾತದಿಂದಾಗಿ ಪವಿತ್ರಾ ಸಾಯಲಿಲ್ಲ. ನಾವೂ ಮೂರು ಜನ ಬೆಂಗಳೂರಿನಿಂದ ಹೈದ್ರಬಾದ್ ಗೆ ಹೊರಟಿದ್ದೆವು. ಬೆಂಗಳೂರಿನಲ್ಲಿ ಜೋರು ಮಳೆಯಿದ್ದ ಕಾರಣ ಮೆಹಬೂಬ ನಗರ ತಲುಪುವಷ್ಟರಲ್ಲಿ ರಾತ್ರಿ 12.30 ಆಗಿತ್ತು. ಅಪಘಾತ ಆಗಿದ್ದು ನಿಜ ಆದರೆ ಯಾರಿಗೂ ದೊಡ್ಡಮಟ್ಟಕ್ಕೆ ಗಾಯಗಳಾಗುವಷ್ಟು ಅಪಘಾತವಾಗಿರಲಿಲ್ಲ‌. ನನಗೆ ಕೊಂಚ ತಲೆಗೆ, ಕೈಗೆ ಪೆಟ್ಟಾಗಿತ್ತು. ರಕ್ತ ಬರುತ್ತಿತ್ತು. ಪವಿತ್ರಾ ಅದನ್ನು ನೋಡಿ ಶಾಕ್ ಆಗಿದ್ದರು. ಆ ಕ್ಷಣದಲ್ಲಿ ಅವರಿಗೆ ಸ್ಟ್ರೋಕ್ ಆಗಿದೆ. ಅದರಿಂದಾನೇ ಸಾವನ್ನಪ್ಪಿದ್ದು. ವೈದ್ಯರು ಕೂಡ ಅದನ್ನೇ ಹೇಳಿದ್ದಾರೆ. ಸಡನ್ ಸ್ಟ್ರೋಕ್ ಆಗಿದ್ದರಿಂದ ಸಾವನ್ನಪ್ಪಿದ್ದಾರೆ ಎಂದಜ.

ಪವಿತ್ರಾಗೆ ನಟ ದರ್ಶನ್ ಸಿನಿಮಾದಲ್ಲಿ ನಟಿಸುವ ಅವಕಾಶವಿತ್ತು. ಹೀಗಾಗಿ ಸಹಿ ಮಾಡಲು ಬೆಂಗಳೂರಿಗೆ ಬಂದಿದ್ದೆವು. 25, 26ಕ್ಕೆ ಚಿತ್ರೀಕರಣಕ್ಕೆ ಬರಬೇಕಿತ್ತು. ಅದೇ ಸಮಯಕ್ಕೆ ತೆಲುಗಿನ ಜೆಮಿನಿ ವಾಹಿನಿ ಕಾರ್ಯಕ್ರಮದ ಒಪ್ಪಂದಕ್ಕೂ ಸಹಿ ಹಾಕಬೇಕಿತ್ತು. ಹೋಗಿ ಸಹಿ ಹಾಕಿ ಬಂದು ಬಿಡೋಣಾ ಎಂದು ಹೊರಟೆವು‌. ಅಪಘಾತ ನಡೆದಾಗ ಆಕೆ ಇನ್ನು ಉಸಿರಾಡುತ್ತಲೇ ಇದ್ದಳು. ಆದರೆ ಆಂಬುಲೆನ್ಸ್ ತಡವಾಗಿದ್ದಕ್ಕೆ ಜೀವ ಹೋಗಿದೆ. ನನಗೆ ಹೀಗೆ ಆಯ್ತಲ್ಲ ಎಂಬ ಭಯಕ್ಕೆ ಅವಳು ಪ್ರಜ್ಞೆ ತಪ್ಪಿದ್ದಳು’ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *