Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಕಳೆದ 24 ಗಂಟೆಗಳ ಮಳೆ ವರದಿ : ಡಿ.ಮರಿಕುಂಟೆಯಲ್ಲಿ ಹೆಚ್ಚು ಮಳೆ

---Advertisement---

ಚಿತ್ರದುರ್ಗ. ಮೇ.13: ಭಾನುವಾರ ರಾತ್ರಿ ಸುರಿದ ಮಳೆ ವಿವರದನ್ವಯ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಡಿ.ಮರಿಕುಂಟೆಯಲ್ಲಿ 51.6 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಪ್ರಮಾಣದ ಮಳೆಯಾಗಿದೆ.

ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 29.6 ಮಿ.ಮೀ, ಪರಶುರಾಂಪುರ 31.8 ಮಿ.ಮೀ, ನಾಯಕನಹಟ್ಟಿ 8.2 ಮಿ.ಮೀ, ತಳಕು 27.2 ಮಿ.ಮೀ ಮಳೆಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 13.2, ಚಿಕ್ಕಜಾಜೂರು 12.6 ಮಿ.ಮೀ, ಹೆಚ್.ಡಿ.ಪುರದಲ್ಲಿ 11.2 ಮಿ.ಮೀ ಮಳೆಯಾಗಿದೆ.

ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮುರಿನಲ್ಲಿ 23 ಮಿ.ಮೀ, ರಾಯಾಪುರ 15.6 ಮಿ.ಮೀ, ಬಿ.ಜಿ.ಕೆರೆ 37 ಮಿ.ಮೀ, ರಾಂಪುರ 6 ಮಿ.ಮೀ, ದೇವಸಮುದ್ರದಲ್ಲಿ 2 ಮಿ.ಮೀ ಮಳೆಯಾಗಿದೆ.

ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 6.4 ಮಿ.ಮೀ, ಬಾಗೂರು 17.2 ಮಿ.ಮೀ, ಮಾಡದಕೆರೆ 17.2 ಮಿ.ಮೀ, ಮತ್ತೋಡು 14.2 ಮಿ.ಮೀ, ಶ್ರೀರಾಂಪುರದಲ್ಲಿ 35 ಮಿ.ಮೀ ಮಳೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 14.6 ಮಿ.ಮೀ, ಚಿತ್ರದುರ್ಗ-2ರಲ್ಲಿ 21 ಮಿ.ಮೀ, ಹಿರೇಗುಂಟನೂರು 1.2 ಮಿ.ಮೀ, ಭರಮಸಾಗರ 3.4 ಮಿ.ಮೀ, ಸಿರಿಗೆರೆ 9 ಮಿ.ಮೀ, ಐನಹಳ್ಳಿಯಲ್ಲಿ 11.2 ಮಿ.ಮೀ ಮಳೆಯಾಗಿದೆ.

ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 31.2 ಮಿ.ಮೀ, ಇಕ್ಕನೂರು 15 ಮಿ.ಮೀ, ಈಶ್ವರಗೆರೆ 20.2 ಮಿ.ಮೀ, ಬಬ್ಬೂರು 11 ಮಿ.ಮೀ, ಸೂಗೂರು 31.2 ಮಿ.ಮೀ ಮಳೆಯಾಗಿದೆ.

10 ಮನೆಗಳು ಭಾಗಶಃ ಹಾನಿ : ಭಾನುವಾರ ರಾತ್ರಿ ಸುರಿದ ಮಳೆಗೆ ಜಿಲ್ಲೆಯಾದ್ಯಂತ 10 ಮನೆಗಳು ಭಾಗಶಃ ಹಾನಿಯಾಗಿದ್ದು, 2 ದೊಡ್ಡ ಜಾನುವಾರು, 3 ಸಣ್ಣ ಜಾನುವಾರು ಹಾಗೂ 6.11 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.

ಚಳ್ಳಕೆರೆ ತಾಲ್ಲೂಕಿನಲ್ಲಿ 2 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 8 ಮನೆ ಭಾಗಶಃ ಹಾನಿಯಾಗಿದ್ದು, 0.50 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಹೊಸದುರ್ಗ ತಾಲ್ಲೂಕಿನಲ್ಲಿ 1 ಮನೆ ಭಾಗಶಃ ಹಾನಿಯಾಗಿದ್ದು, 2 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.

ಹಿರಿಯೂರು ತಾಲ್ಲೂಕಿನಲ್ಲಿ 2 ದೊಡ್ಡ ಜಾನುವಾರು ಹಾಗೂ 1 ಮನೆ ಭಾಗಶಃ ಹಾನಿ, 1.61 ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 2 ಸಣ್ಣ ಜಾನುವಾರು ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment