Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಂಸತ್ತು ಕಲಾಪ: ರಕ್ಷಣಾ ಇಲಾಖೆ ತಡೆಹಿಡಿದಿದ್ದ ಪುಸ್ತಕ ರಾಹುಲ್ ಗಾಂಧಿ ಕೈಸೇರಿದ್ದು ಹೇಗೆ?

---Advertisement---

ಸಂಸತ್ತಿನಲ್ಲಿ ಭಾರೀ ಗದ್ದಲ ಗಲಾಟೆ ಉಂಟು ಮಾಡಿದ್ದು ಮಾಜಿ ಭೂಸೇನಾ ಮುಖ್ಯಸ್ಥ ಜನರಲ್ (ನಿವೃತ್ತ) ಮನೋಜ್ ಮುಕುಂದ್ ನರವಾಣೆ ಅವರ ಆತ್ಮಕಥೆಯಾದ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ( Four Stars of Destiny) ಪುಸ್ತಕ. ಆದರೆ ಇದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಕೈಸೇರಿದ್ದು ಹೇಗೆ ಎನ್ನುವ ಪ್ರಶ್ನೆ ಈಗ ಹಲವರಲ್ಲಿ ಉಂಟಾಗಿದೆ‌.

ಎರಡು ವರ್ಷಗಳ ಹಿಂದೆ ನರವಾಣಿ ಅವರ ಪುಸ್ತಕ ಬಿಡುಗಡೆಗೆ ಸಿದ್ದವಾಗಿತ್ತು. ಓದುಗರು, ಆನ್ಲೈನಲ್ಲಿ ಬುಕ್ ಕೂಡಾ ಮಾಡಿದ್ದರು. ಆದರೆ, ಎರಡು ದೇಶಕ್ಕೆ ಸಂಬಂಧಿಸಿದಂತೆ ರಹಸ್ಯವಾದ ಮತ್ತು ವಿವಾದಕಾರಿ ಮಾಹಿತಿ ಇದೆ ಎನ್ನಲಾಗುತ್ತಿರುವ ಆ ಪುಸ್ತಕದ ಬಿಡುಗಡೆಯನ್ನು ತಡೆಹಿಡಿಯಲಾಗಿತ್ತು.  , ‘ಅಧಿಕೃತ ರಹಸ್ಯ ಕಾಯಿದೆ 1923 ಅಡಿಯಲ್ಲಿ ನರವಾಣಿ ಪುಸ್ತಕಕ್ಕೆ ಅನುಮತಿ ನಿರಾಕರಣೆ ಮಾಡಲಾಗಿತ್ತು.

ಎರಡು ವರ್ಷದ ನಂತರ  ಈಗ ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರ ಕೈಯಲ್ಲಿತ್ತು. ಬಜೆಟ್ ಅಧಿವೇಶನದಲ್ಲಿ ಈ ಪುಸ್ತಕದ ವಿಚಾರವನ್ನು ರಾಹುಲ್ ಗಾಂಧಿ, ಪ್ರಸ್ತಾವಿಸುತ್ತಿದ್ದಂತೆ ಬಿಜೆಪಿ ನಾಯಕರು ಶಾಕ್ ಆದರು‌. ಬಿಡುಗಡೆಯಾಗದ ಪುಸ್ತಕದ ಬಗ್ಗೆ ಲೋಕಸಭೆಯಲ್ಲಿ ಇದನ್ನು ಪ್ರಸ್ತಾವಿಸಲು ಅವಕಾಶವಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು. ಆದರೆ, ಈ ಪುಸ್ತಕವನ್ನು ಇಟ್ಟುಕೊಂಡು, ವಿಪಕ್ಷಗಳ ಪ್ರತಿಭಟನೆ ಜೋರಾಯಿತು. ಹಾಗಾದರೆ, ಈ ಪುಸ್ತಕ ರಾಹುಲ್ ಗಾಂಧಿ ಕೈಸೇರಿದ್ದು ಹೇಗೆ?

ಈ ಪುಸ್ತಕದಲ್ಲಿ, 1962ರ ಭಾರತ ಚೀನಾ ಗಡಿ ಸಂಘರ್ಷ, ಅಗ್ನಿಪಥ್ ನೇಮಕಾತಿ ವಿವಾದ ಮುಂತಾದವು ಆ ಪುಸ್ತಕದಲ್ಲಿ ಉಲ್ಲೇಖವಾಗಿದೆ. ಈ ಪುಸ್ತಕದ ಪ್ರಕಾಶಕರು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ. ರಾಹುಲ್ ಗಾಂಧಿಗೆ ಈ ಪುಸ್ತಕವು ಯಾರ ಕಡೆಯಿಂದ ಸಿಕ್ಕಿತು ಎನ್ನುವ ಪ್ರಶ್ನೆಗೆ ಇದುವರೆಗೆ ಉತ್ತರ ಸಿಕ್ಕಿಲ್ಲ.

ರಾಹುಲ್ ಗಾಂಧಿಗೆ ಈ ಪುಸ್ತಕ ಸಿಕ್ಕಿದ್ದು ಹೇಗೆ ಎನ್ನುವ ಪ್ರಶ್ನೆಗೆ  ಎರಡು ಜನರ ಮೇಲೆ ಅನುಮಾನ ಪಡಲಾಗುತ್ತಿದೆ. ಒಂದು, ಪುಸ್ತಕದ ಪ್ರಕಾಶನ ಸಂಸ್ಥೆ ಪೆಂಗ್ವಿನ್, ಇನ್ನೊಂದು, ಈ ಪುಸ್ತಕವು ಕೆಲವೊಂದು ದೆಹಲಿಯ ಮಳಿಗೆಗೆ ಸಪ್ಲೈ ಆಗಿತ್ತು ಎಂದು ಹೇಳಲಾಗುತ್ತಿದೆ, ಅಲ್ಲಿಂದ ಏನಾದರೂ ಇದು ರಾಹುಲ್ ಗಾಂಧಿ ಕೈಸೇರಿತೇ ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now