Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದಲ್ಲಿ ವಿಜೃಂಭಣೆಯಿಂದ ನಡೆದ ಪಾಂಡುರಂಗ ವಿಠಲ ರಥೋತ್ಸವ

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

 

ಸುದ್ದಿಒನ್,ಚಿತ್ರದುರ್ಗ. ಮೇ. 12 : ತ್ಯಾಗರಾಜ ಬೀದಿಯಲ್ಲಿ ಪಾಂಡುರಂಗ ವಿಠಲ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.

ತಾಡಪತ್ರಿ ವಂಶಕ್ಕೆ ಒಲಿದು ಬಂದಿರುವ ಮೂರ್ತಿ ಪಾಂಡುರಂಗ ವಿಠಲ ದೇವಸ್ಥಾನದಲ್ಲಿ ಶ್ರದ್ದಾ ಭಕ್ತಿಯಿಂದ ಪೂಜೆ ಸಲ್ಲಿಸಿದ ನಂತರ ಪಾಂಡುರಂಗವಿಠಲನನ್ನು ರಥದಲ್ಲಿ ಕೂರಿಸಿದ ಬಳಿಕ ರಥವನ್ನು ನೆರೆದಿದ್ದವರು ಸ್ವಲ್ಪ ದೂರ ಎಳೆದು ಭಕ್ತಿ ಸಮರ್ಪಿಸಿದರು.

ಪ್ರತಿ ವರ್ಷದಂತೆ ವೈಶಾಖ ಶುದ್ದ ಪೂರ್ಣಿಮೆಯಂದು ಜರುಗಿದ ರಥೋತ್ಸವದಲ್ಲಿ ಉಡುಪಿಯ ಪೇಜಾವರ ಶ್ರೀಪಾದಂಗಳವರು, ಟಿ.ಎಸ್.ಗೋಪಾಲಕೃಷ್ಣ ಟಿ.ಪಿ.ವಿಠಲರಾವ್, ಸುಧೀಂದ್ರ, ಟಿ.ಸಿ.ಶ್ರೀನಿವಾಸ್ ಸೇರಿದಂತೆ ನೂರಾರು ಭಕ್ತರು ಹಾಜರಿದ್ದರು.‌ ರಥೋತ್ಸವದ ವೇಳೆ ಮಹಿಳೆಯರು ಪಾಂಡುರಂಗವಿಠಲನನ್ನು ಸ್ಮರಿಸುತ್ತಿದ್ದರೆ. ಪುರುಷರು ಜಾಗಟೆ ಬಾರಿಸುತ್ತಿದ್ದರು. ರಥವನ್ನು ಬಾಳೆಕಂಬ, ವಿವಿಧ ಬಗೆಯ ಹೂವು ಹಾಗೂ ಹಾರಗಳಿಂದ ಅಲಂಕರಿಸಲಾಗಿತ್ತು. ರಥದ ಮುಂಭಾಗ ಹೋಮ ನಡೆಯಿತು.

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...