ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936
ಚಿತ್ರದುರ್ಗ ನಗರದ ಪಶ್ಚಿಮ ಭಾಗದಲ್ಲಿ ಹೊಳಲ್ಕೆರೆ ರಸ್ತೆಯಲ್ಲಿ ಇರುವ ಶ್ರೀ ಬರಗೇರಮ್ಮದೇವಿ ದೇವಾಲಯವು ಅತ್ಯಂತ ಪ್ರಾಚೀನವಾದ ನಗರದ ನವದುರ್ಗೆಯಲ್ಲಿ ಒಂದಾದ ದೇವರಾಗಿದೆ. ಈ ಸ್ಥಳವು ನೇರಲಗೊಂದಿ ಕಂದಾಯ ಗ್ರಾಮವಾಗಿದ್ದರೂ ಇಂದು ನಗರದ ಒಂದು ಪ್ರಮುಖ ಪ್ರದೇಶವಾಗಿದೆ. ಇಲ್ಲಿರುವ ಸ್ವಚ್ಛಂದ ವಾತಾವರಣ, ಎದುರಿಗೆ ಕಾಣುವ ವಿಶಾಲವಾಗಿ ಹರಡಿರುವ ಕೋಟೆ ಬೆಟ್ಟ ಪ್ರದೇಶ, ಗಿಡ ಮರಗಳ ತಂಪಾದ ಆಹ್ಲಾದಕರ ವಾತಾವರಣವು ಆಧ್ಯಾತ್ಮಿಕ ಶಾಂತಿಗೆ ನೆಲೆಯಾಗಿದೆ.
ಚಿತ್ರದುರ್ಗದ ಕೋಟೆಯ ಹೊರವಲಯದಲ್ಲಿ ಇರುವ ದೇವಾಲಯಗಳಲ್ಲಿ ಈ ದೇವರ ದೇವಾಲಯ ಅತ್ಯಂತ ಪ್ರಮುಖವಾದುದು. ಈ ದೇವಾಲಯ 16ನೇ ಶತಮಾನಕ್ಕೆ ಸೇರಿದುದು ಎಂದು ಇತಿಹಾಸ ತಜ್ಞರಾದ ಪ್ರೊಫೆಸರ್ ಲಕ್ಷ್ಮಣ್ ತೆಲಗಾವಿ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಚಿತ್ರದುರ್ಗದ ಕೋಟೆಯನ್ನು ಮುತ್ತಿಗೆ ಹಾಕಲು ಬಂದ ಶ್ರೀರಂಗಪಟ್ಟಣದ hyder ಸೇನೆಯು ಈ ದೇವಾಲಯದ ಬಳಿಯಲ್ಲಿ ಬೀಡು ಬಿಟ್ಟಿದ್ದರ ಬಗ್ಗೆ ದಾಖಲೆ ದೊರೆಯುತ್ತದೆ. ದೇವಾಲಯಕ್ಕೆ ಸಾವಿರಾರು ಭಕ್ತರು ಪ್ರತಿ ಮಂಗಳವಾರ ಶುಕ್ರವಾರ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ, ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ಹಾಗೂ ಮಳೆ ಅಲಂಕಾರ ನಡೆಯುತ್ತದೆ. ಮಾನಸಿಕ ಖಿನ್ನತೆ,ಮಾಟ ಗಾಳಿ ಸೋಂಕು… ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಹಾಗೂ ಮುಕ್ತಿ ಪಡೆಯಲು ದೇವಾಲಯದ ಹೊರಭಾಗದಲ್ಲಿ ಭಕ್ತರು ದಿನಗಟ್ಟಲೆ ಉಳಿದುಕೊಳ್ಳುತ್ತಾರೆ.
ಈ ದೇವಿಯು ಅತ್ಯಂತ ಪ್ರಭಾವಶಾಲಿಯಾಗಿದ್ದು ಮನಸ್ಸಿನ ಆಸೆಗಳನ್ನು ಈಡೇರಿಸುವ ಖ್ಯಾತಿ,ತಮ್ಮ ಕೆಲಸಗಳು ಆಗುವ ಬಗ್ಗೆ ದೇವರಿಂದ ಭಕ್ತರು ಹೂವನ್ನು ಪ್ರಸಾದ ರೂಪದಲ್ಲಿ ಹೇಳಿಕೆ ಪಡೆಯುತ್ತಾರೆ.ಪ್ರತಿವರ್ಷ ದೇವಾಲಯದ ಮುಂಭಾಗದಲ್ಲಿ ಸಿಡಿ ಉತ್ಸವ ಕೆಂಡೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗುತ್ತದೆ. ಚಿತ್ರದುರ್ಗ ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತರು ತಮ್ಮ ಮನೆಯಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವ ಮುಂಚೆ ಈ ದೇವರ ದರ್ಶನ ಪಡೆಯುತ್ತಾರೆ ಹಾಗೂ ಉತ್ಸವ ಮೂರ್ತಿಯನ್ನು ತಮ್ಮ ಮನೆಗೆ ಕರೆದು ಪೂಜಿಸುತ್ತಾರೆ.
ಗರ್ಭಗೃಹದಲ್ಲಿ ದೇವಿಯ ಜೊತೆಗೆ ವೀರಗಲ್ಲು ಸಹ ಇದ್ದು ಅದನ್ನು ಪೂಜಿಸಲಾಗುತ್ತದೆ. ದೇವಾಲಯದ ಎದುರು ಭಾಗದಲ್ಲಿ ನಾಗರಕಲ್ಲುಗಳು ಹಾಗೂ ಮಹಾಸತಿ ಕಲ್ಲುಗಳನ್ನು ಪ್ರತಿಷ್ಠಾಪಿಸಲಾಗಿದ್ದು ಪೂಜಿಸಲಾಗುತ್ತದೆ. ದೇವಾಲಯದ ಹತ್ತಿರದಲ್ಲಿ ಮದುವೆ ಮುಂತಾದ ಶುಭ ಸಮಾರಂಭಗಳು ಜರುಗುತ್ತವೆ. ಬಂದ ಭಕ್ತರಿಗೆ ಪ್ರಸಾದವನ್ನು ಅನ್ನ ಸಂತರ್ಪಣೆ ವ್ಯವಸ್ಥೆ ಇರುತ್ತದೆ.
ಎಲ್ಲಾ ಧಾರ್ಮಿಕ ಆಚರಣೆಗಳು ಹಾಗೂ ಹಬ್ಬಗಳನ್ನು ಈ ದೇವಾಲಯದ ಈ ವಿಶೇಷವಾಗಿ ಅದ್ದೂರಿಯಾಗಿ ನಡೆಸಲಾಗುತ್ತದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















