in

ವಾಸಣ್ಣನವರ ವ್ಯಕ್ತಿತ್ವ ಮತ್ತು ಸಜ್ಜನಿಕೆಯ ರಾಜಕಾರಣಕ್ಕೆ ನಮ್ಮ ಬೆಂಬಲ : ಶಶಿಧರ್

suddione whatsapp group join

 

ವರದಿ ಮತ್ತು ಫೋಟೋ ಕೃಪೆ
ಕೋಟೆ ರಂಗಸ್ವಾಮಿ, ಗುಬ್ಬಿ
ಮೊ.ನಂ : 9901953364

ಗುಬ್ಬಿ : ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನ ಸಂಪರ್ಕಕ್ಕೆ ಸಿಗುವ ವ್ಯಕ್ತಿ ವಾಸಣ್ಣನವರು ಮಾತ್ರ ಎಂದು ಮುಖಂಡ  ಶಶಿಧರ್ ತಿಳಿಸಿದರು.

ತಾಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕಾರ್ಯಕ್ರಮದಲ್ಲಿ ಮಾತನಾಡಿ ಜೆಡಿಎಸ್ ನಲ್ಲಿ ಜಿಲ್ಲಾ ಯೂತ್ ಘಟಕದ ಉಪಾಧ್ಯಕ್ಷನಾಗಿ ಪಕ್ಷ ಸಂಘಟನೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದು ಕುಮಾರಸ್ವಾಮಿ ಅವರ ಮೋಸದ ರಾಜಕಾರಣದಿಂದ ಬೇಸತ್ತು ರಾಜೀನಾಮೆ ಸಲ್ಲಿಸಿ ವಾಸಣ್ಣನವರ ವ್ಯಕ್ತಿತ್ವ ಮತ್ತು ಸಜ್ಜನಿಕೆಯ ರಾಜಕಾರಣ ಮನಗಂಡು ಬೆಂಬಲಿಸುವುದಾಗಿ ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಸಿದ್ದಲಿಂಗಯ್ಯ ಮಾತನಾಡಿ ವಾಸಣ್ಣನವರು ನಮ್ಮ ಭಾಗಕೆ 6 ಕೋಟಿ ಅಧಿಕ ಅನುದಾನ ಬಿಡುಗಡೆಗೊಳಿಸಿ ಸಿಸಿ ರಸ್ತೆ ಬಾಕ್ಸ್ ಚರಂಡಿ ಓವರ್ ಟ್ಯಾಂಕ್ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿವೆ ಇಂತಹ ಅಭಿವೃದ್ಧಿ ಹರಿಕಾರ ನಮ್ಮ ವಾಸಣ್ಣನವರನ್ನು ಜನರು ಯಾವತ್ತೂ ಕೈಬಿಡುವುದಿಲ್ಲ ಅತ್ಯಧಿಕ ಮತಗಳಿಂದ ಗೆಲ್ಲುತ್ತಾರೆ ಎಂದು ತಿಳಿಸಿದರು.

ಮುಖಂಡ ಮಾರ ಶೆಟ್ಟಿಹಳ್ಳಿ ಬಸವರಾಜ್ ಮಾತನಾಡಿ ಯಾವುದೇ ಸಂಘರ್ಷಗಳಾಗದಂತೆ ಎಲ್ಲಾ ಜನಾಂಗವನ್ನು ಸರಿ ಸಮಾನವಾಗಿ ಕಂಡಿದ್ದಾರೆ ಎಲ್ಲಾ ಜನಾಂಗವು ಸಹ ವಾಸಣ್ಣನವರ ಪರವಾಗಿ ಇದೆ ಎಂದರು.

ದೊಡ್ಡಕೆಂಪಯ್ಯಮಾತನಾಡಿ ವಾಸಣ್ಣನವರಿಗೆ ಜನ ಬೆಂಬಲ ಹಾಗೂ ಜನಾಶೀರ್ವಾದ ಇದೆ ಯಾರಿಗೂ ಹೆದರುವ ಅವಶ್ಯಕತೆ ವಾಸಣ್ಣನವರನ್ನು ಮಂತ್ರಿ ಮಾಡಿ ಕೆಂಪು ಲೈಟಿನ ಕಾರನ್ನು ಕೊಟ್ಟು ಅಧಿಕಾರ ಮಾಡಲು ಬಿಡದೆ ಕುಮಾರಸ್ವಾಮಿಯವರು ತಾಲೂಕಿನ ಜನತೆಗೆ ಮೋಸ ಮಾಡಿದ್ದಾರೆ ಎಂದು  ತಿಳಿಸಿದರು.

ಕುಂದರನಹಳ್ಳಿ ನಟರಾಜ್ ಮಾತನಾಡಿ ಈ  ಭಾಗದ ಎಲ್ಲಾ ಕಾರ್ಯಕರ್ತರು ಸಹ ವಾಸಣ್ಣನವರನ್ನು ಬೆಂಬಲಿಸಲು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇವೆ ನಮ್ಮ ಗುರಿ ವಾಸಣ್ಣನವರನ್ನು ಗೆಲ್ಲಿಸುವುದು ಬಿಟ್ಟರೆ ಸುಳ್ಳು ವದಂತಿಗಳಿಗೆ  ತಲೆಕೆಡಿಸಿಕೊಳ್ಳುವುದಿಲ್ಲ  ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಾಸಣ್ಣ ಅಭಿಮಾನಿ ಬಳಗದ ಮುಖಂಡ ಕೆ ಆರ್ ವೆಂಕಟೇಶ್, ಜಯಣ್ಣ, ಗುರುಪ್ರಸಾದ್, ಸಣ್ಣರಂಗಯ್ಯ, ರಾಜಣ್ಣ, ಚಿಕ್ಕಣ್ಣ, ದೊಡ್ಡಕೆಂಪಯ್ಯ,  ಮುಂತಾದವರು ಇದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಶಾರುಖ್ ಖಾನ್ ಯಾರು ಎಂದ ಬೆನ್ನಲ್ಲೇ ಅಸ್ಸಾಂ CMಗೆ ಕಾಲ್ ಮಾಡಿದ ನಟ : ಏನು ಕೇಳಿದರೂ ಗೊತ್ತಾ..?

ಮಂಗಳೂರಿನಲ್ಲಿ ತಗಲಾಕಿಕೊಂಡ 23 ಲಕ್ಷ ವಂಚಿಸಿದವ..!