Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಮ್ಯಾಗೆ ಅಶ್ಲೀಲ ಮೆಸೇಜ್ ಕೇಸ್ : ಚಿತ್ರದುರ್ಗ, ಬಳ್ಳಾರಿಯ ಇಬ್ಬರು ಅರೆಸ್ಟ್..!

---Advertisement---

 

ಬೆಂಗಳೂರು: ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಬಗ್ಗೆ ನಟಿ ರಮ್ಯಾ ಹಾಕಿದ್ದ ಪೋಸ್ಟ್ ತೀರಾ ಕೆಳಮಟ್ಟದ ಕಮೆಂಟ್ ಗಳನ್ನ ಹಾಕಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಬಂದ ಕೆಟ್ಟ ಕಮೆಂಟ್ ಗಳ ವಿರುದ್ಧ ಸಿಡಿದೆದ್ದ ರಮ್ಯಾ, ಕಮೀಷನರ್ ಗೆ ದೂರು ನೀಡಿದ್ದರು. ಇದೀಗ ಈ ಕೇಸ್ ಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅದು ಚಿತ್ರದುರ್ಗ ಹಾಗೂ ಬಳ್ಳಾರಿ ಮೂಲದವರು ಎಂಬುದು ಗೊತ್ತಾಗಿದೆ.

ಸಿಸಿಬಿ ಪೊಲೀಸರು ಈ ಕೇಸ್ ಗೆ ಸಂಬಂಧಿಸಿದಂತೆ ಮೂವರನ್ನ ವಿಚಾರಣೆ ಮಾಡ್ತಾ ಇದ್ದು, ಬಳ್ಳಾರಿ, ಚಿತ್ರದುರ್ಗದ ಇಬ್ಬರು ಆರೋಪಿಗಳನ್ನ ಅರೆಸ್ಟ್ ಮಾಡಲಾಗಿದೆ. ಅಶ್ಲೀಲ ಕಮೆಂಟ್ ಹಾಕಿದ್ದವರ ಐಪಿ ಅಡ್ರೆಸ್ ಮೂಲಕ ಇಬ್ಬರನ್ನು ಅರೆಸ್ಟ್ ಮಾಡಿದ್ದು ತನಿಖೆ ನಡೆಸುತ್ತಿದ್ದಾರೆ. ನಿನ್ನೆಯಷ್ಟೇ ರಮ್ಯಾ ಅವರಿಗೆ ಒಂದಷ್ಟು ಜನ ಮೆಸೇಜ್ ಮಾಡಿ, ನಮ್ಮನ್ನ ಕ್ಷಮಿಸಿ ಎಂದು ಕೇಳಿದ್ದರಂತೆ. ಇದೀಗ ಪೊಲೀಸರ ಅತಿಥಿಯಾಗಿದ್ದಾರೆ ಕೆಲವರು.

ರಮ್ಯಾ ಅವರು ದೂರು ಕೊಟ್ಟ ಬಳಿಕ ಪೊಲೀಸರು ಹುಡುಕಾಟ ಶುರು ಮಾಡಿದಾಗ ಐಪಿ ಅಡ್ರೆಸ್ ನಲ್ಲಿ ನೋಡಿದಾಗ ಅದರಲ್ಲಿ ಸಾಕಷ್ಟು ಫೇಕ್ ಅಕೌಂಟ್ ಗಳೇ ಇದ್ದವು. ಆದರೂ ಕಮೆಂಟ್ ಮಾಡಿದವರನ್ನ ಹುಡುಕಿದ ಪೊಲೀಸರು, ಕೋಲಾರ, ಚಿತ್ರದುರ್ಗ, ಬಳ್ಳಾರಿಯ ಮೂಲದವರನ್ನ ಹುಡುಕಿ ತನಿಖೆ ನಡೆಸುತ್ತಿದ್ದಾರೆ. ಮೂವರಲ್ಲಿ ಬಳ್ಳಾರಿ ಹಾಗೂ ಚಿತ್ರದುರ್ಗದ ಮೂಲದ ವ್ಯಕ್ತಿಯನ್ನ ಅರೆಸ್ಟ್ ಮಾಡಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ. ಅದಕ್ಕೂ ಮುನ್ನ ಅರೆಸ್ಟ್ ಆದವರ ಕುಟುಂಬದವರು ರಮ್ಯಾ ಅವರಿಗೆ ಕ್ಷಮೆ ಕೇಳಿದ್ದಾರೆ. ರಮ್ಯಾ ಈ ಕ್ಷಮೆಯ ಅಕೌಂಟ್ ಗಳನ್ನ ರಮ್ಯಾ ಅವರು ಪೊಲೀಸರಿಗೆ ನೀಡಿದ್ದರು. ಅದರ ಆಧಾರದ ಮೇಲೆ ವಶಕ್ಕೆ ಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...