ಬೆಂಗಳೂರು: ಇಂದು ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆಗೆ ಎಲ್ಲಾ ಸಿದ್ಧತೆಗಳು ನಡೆದಿವೆ. ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಶಾಸಕರು ಈಗಾಗಲೇ ಕೋಪಗೊಂಡಿರುವುದು ಬೆಳಕಿಗೆ ಬಂದಿದೆ. ಆ ಮೂಲಕ ನೇರವಾಗಿಯೇ ವಾಗ್ದಾಳಿ ನಡೆಸುವುದನ್ನು ನೋಡಿದ್ದೇವೆ. ಶಾಸಕರ ಕೋಪ ಈ ಸಚಿವ ಸಂಪುಟದಲ್ಲಿ ಶಮನವಾಗುತ್ತಾ ಎಂಬ ಪ್ರಶ್ನೆಗೆ ಡಿಸಿಎಂ ಡಿಕೆ ಶಿವಕುಮಾರ್ ಉತ್ತರಿಸಿದ್ದಾರೆ.
ಅಸಮಾಧಾನ ಎಲ್ಲೂ ಇರಲಿಲ್ಲ. ಅವರು ಪಾರ್ಟಿ ವಿಚಾರದಲ್ಲಿ, ಸಂಘಟನೆ ವಿಚಾರದಲ್ಲಿ ಅವರ ಜವಾಬ್ದಾರಿ ಫಿಕ್ಸ್ ಮಾಡ್ತಾ ಇದ್ದಾರೆ. ಏನೇನು ಮಾಡಬೇಕು, ಯಾರ್ಯಾರ ಜವಾಬ್ದಾರಿ ಏನು ಅನ್ನೋದನ್ನ. ಈಗಿನಿಂದಲೇ ಎಲೆಕ್ಷನ್ ಗೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದನ್ನು ಅವರು ರೆಡಿ ಮಾಡ್ತಾರೆ ಎಂದಿದ್ದಾರೆ.
ರಾಮನಗರದ ಶಾಸಕ ಇಕ್ಬಾಲ್ ಅವರು ಇತ್ತೀಚೆಗೆ ಒಂದು ಹೇಳಿಕೆಯನ್ನ ನೀಡಿದ್ದರು. ಡಿಕೆ ಶಿವಕುಮಾರ್ ಸಿಎಂ ಆಗ್ಬೇಕು ಅಂತ. ಇಕ್ಬಾಲ್ ಅವರಿಗೆ ನೋಟೀಸ್ ಕೊಡುವ ವಿಚಾರಕ್ಕೆ ಮಾತನಾಡಿದ ಡಿಕೆ ಶಿವಕುಮಾರ್, ಅವರಿಗೂ ನೋಟೀಸ್ ಕೊಡ್ತೀನಿ, ಬೇರೆಯವರಿಗೂ ನೋಟೀಸ್ ಕೊಡಲೇಬೇಕಾಗುತ್ತದೆ. ಶಿಸ್ತು ಬಹಳ ಮುಖ್ಯ. ನಾನ್ಯಾರಿಗೂ ನನ್ನ ಹೆಸರೇಳಿ ಸಿಎಂ ಮಾಡಿ ಅಂತ ಹೇಳಿಲ್ಲ. ಅದೆಲ್ಲ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿ ಈಗಾಗಲೇ ಇರಬೇಕಾದರೆ ಯಾರೂ ಅಪಸ್ವರ ತೆಗೆಯಬಾರದು. ನನ್ನಂಥವರು ನೂರಾರು ಜನ ಕಷ್ಟಪಟ್ಟಿದ್ದಾರೆ. ನಾನೊಬ್ಬನೆ ಪಟ್ಟಿಲ್ಲ. ಸಾವಿರಾರು ಜನ, ಲಕ್ಷಾಂತರ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಮೊದಲು ಅವರ ಬಗ್ಗೆ ನಾವೂ ಯೋಚನೆ ಮಾಡಬೇಕು ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಹಿರಂಗವಾಗಿ ತಮ್ಮ ಹೇಳಿಕೆಯನ್ನ ನೀಡುತ್ತಿರುವುದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆಯನ್ನ ನೀಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












