Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸೂರ್ಯನ ಕಿರಣಗಳಿಂದ ರಕ್ಷಿಸಿಕೊಳ್ಳಲು ಸನ್ ಸ್ಕ್ರೀನ್ ಬೇಡ ಗೆಣಸು ಸಾಕು..!

---Advertisement---

ಬೇಸಿಗೆ ಬಂದಿದೆ.. ಮನೆಯಿಂದ ಹೊರ ಹೋಗೋದಕ್ಕೇನೆ ನೆತ್ತಿ ಸುಡುತ್ತಿದೆ. ನೆತ್ತಿ ಸುಡದಂತೆ ಕಾಪಾಡಿಕೊಳ್ಳಲು ಕೊಡೆ, ಸ್ಕ್ರಾಪ್ ಏನಾದ್ರೂ ಬಳಕೆ ಮಾಡಿಕೊಂಡು ನೆತ್ತಿಯ ಬಿಸಿಯಿಂದ ರಕ್ಷಿಸಿಕೊಳ್ಳಬಹುದು. ಆದರೆ ಈ ಬಿಸಿಲಿನಿಂದ ಚರ್ಮವನ್ನ ರಕ್ಷಿಸಿಕೊಳ್ಳುವುದು ಸುಲಭವಲ್ಲ. ಎಷ್ಟೇ ಕವರ್ ಮಾಡಿಕೊಂಡರುಚರ್ಮದ ಕಾಂತಿ ಹಾಳಾಗುತ್ತದೆ. ಟ್ಯಾನ್ ಆಗುತ್ತದೆ. ಈ ಬಿಸಿಲಿನಲ್ಲಿ ಚರ್ಮದ ರಕ್ಷಣೆ ಮಾಡಿಕೊಳ್ಳುವುದಕ್ಕೆ ನಾನಾ ಕಸರತ್ತನ್ನ ಮಾಡುತ್ತೇವೆ. ಸನ್ ಸ್ಕ್ರೀನ್ ಲೋಷನ್ ಸೇರಿದಂತೆ ಅನೇಕ ಕ್ರೀಮ್ ಗಳನ್ನ ಬಳಸುತ್ತೇವೆ. ಕೆಲವೊಬ್ಬರಿಗೆ ಈ ರೀತಿಯ ಕ್ರೀಮ್ ಗಳು ಸೆಟ್ ಆಗೋದಿಲ್ಲ. ಕ್ರೀಮ್ ಗಳನ್ನ ಬಿಟ್ಟು ಗೆಣಸನ್ನ ತಿನ್ನಿ. ಚರ್ಮದ ಕಾಂತಿಗೆ ಬಿಸಿಲು ಕೂಡ ಏನು ಮಾಡಲ್ಲ. ಇದರಲ್ಲಿ ಪ್ರೋಟೀನ್ ಹೆಚ್ಚಾಗಿರುವ ಕಾರಣ ಚರ್ಮದ ಕಾಂತಿ ಕೂಡ ಹೆಚ್ಚಾಗಲಿದೆ.

ಗೆಣಸಿನಲ್ಲಿ ಕ್ಯಾಲೋರಿಸ್ ಕಡಿಮೆ ಇದ್ದು, ಫೈಬರ್ ಅಂಶ ಜಾಸ್ತಿಯಿದೆ. ಇದರಿಂದ ತೂಕವನ್ನು ಕೂಡ ಸುಲಭವಾಗಿ ಇಳಿಸಬಹುದು. ಯಾಕಂದ್ರೆ ಗೆಣಸನ್ನು ತಿಂದ ಕೂಡಲೇ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಗೆಣಸಲ್ಲಿ ಪೊಟ್ಯಾಸಿಯಮ್‌ ಹೆಚ್ಚಾಗಿ ಇರುವ ಕಾರಣ, ಇದರಿಂದ ರಕ್ತದೊತ್ತಡವನ್ನ ಸರಿಪಡಿಸುತ್ತದೆ. ಸೋಡಿಯಂ ಲೆವೆಲ್ ಅನ್ನ ಸರಿ ಪಡಿಸುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಕೂಡ ದೂರವಾಗುತ್ತದೆ. ಗೆಣಸಲ್ಲಿರುವ ಬೀಟಾ ಅಂಶವೂ ತಿಂದ ಮೇಲೆ ದೇಹಸಲ್ಲಿ ವಿಟಮಿನ್ ಎ ಆಗಿ ಕನ್ವರ್ಟ್ ಆಗುತ್ತದೆ. ಇದರಿಂದ ಕಣ್ಣಿನ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು. ಹಲವು ಸಮಸ್ಯೆಗಳಿಗೆ ಒಂದೇ ಆಹಾರದಿಂದ ಪರಿಹಾರ ಸಿಗಲಿದೆ ಎಂದರೆ ಪ್ರತಿದಿನ ನಿಮ್ಮ ಆಹಾರದಲ್ಲಿ ಗೆಣಸನ್ನ ಬಳಕೆ ಮಾಡುವುದರಿಂದ ಬಹಳ ಮುಖ್ಯವಾಗಿ ಬಿಸಿಲಿನಿಂದ ಚರ್ಮವನ್ನ ತಪ್ಪಿಸಿಕೊಳ್ಳಬಹುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment