ಬೆಂಗಳೂರು.ಆಗಸ್ಟ್.20: ರಾಜ್ಯ ಸರ್ಕಾರದ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS-2.0), e-SR ಹಾಗೂ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ನೋಂದಣಿ (KASS) ತಂತ್ರಾಂಶಗಳ ಬಳಕೆ ಮತ್ತು ನಿರ್ವಹಣೆಯಲ್ಲಿ ಎದುರಾಗುವ ಸಮಸ್ಯೆಗಳ ನಿವಾರಣೆಗಾಗಿ ಆರ್ಥಿಕ ಇಲಾಖೆಯು ಅಧಿಕೃತ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಸಲ್ಲಿಸಿದ್ದ ಕೋರಿಕೆಯ ಮೇರೆಗೆ ಹೆಚ್‌ಆರ್‌ಎಂಎಸ್ ಯೋಜನಾ ವ್ಯವಸ್ಥಾಪಕರು ಈ ಪ್ರಕಟಣೆ ಹೊರಡಿಸಿದ್ದು, ನೌಕರರು ತಾಂತ್ರಿಕ ತೊಂದರೆಗಳಿದ್ದಲ್ಲಿ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು:
IVRS ಹೆಲ್ಪ್ ಡೆಸ್ಕ್ ಸಂಖ್ಯೆ (HRMS-1 & HRMS-2): 080-24413599

ವಾಟ್ಸಾಪ್ (WhatsApp) ಸಹಾಯವಾಣಿ ಸಂಖ್ಯೆ: 9141570176
ಸರ್ಕಾರಿ ನೌಕರರು ತಮ್ಮ ಸೇವಾ ವಿವರಗಳ ತಂತ್ರಾಂಶ ಬಳಕೆ ಹಾಗೂ ಸಂಜೀವಿನಿ ಯೋಜನೆ ನೋಂದಣಿಯ ವೇಳೆ ಯಾವುದೇ ಗೊಂದಲ ಅಥವಾ ತಾಂತ್ರಿಕ ಅಡಚಣೆ ಕಂಡುಬಂದಲ್ಲಿ ಈ ಸಂಖ್ಯೆಗಳ ಮೂಲಕ ನೆರವು ಪಡೆಯಬಹುದಾಗಿದೆ.











