Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

National Moon Day : ಇಂದು ರಾಷ್ಟ್ರೀಯ ಚಂದ್ರನ ದಿನ : ಎಚ್.ಎಸ್.ಟಿ.ಸ್ವಾಮಿ ಅವರ ವಿಶೇಷ ಲೇಖನ…!

---Advertisement---

 

ವಿಶೇಷ ಲೇಖನ
ಎಚ್.ಎಸ್.ಟಿ.ಸ್ವಾಮಿ
ಕಾರ್ಯದರ್ಶಿ, ಚಿತ್ರದುರ್ಗದ ಸೈನ್ಸ್ ಫೌಂಡೇಶನ್,
ಚಿತ್ರದುರ್ಗ, ಮೊ : 94485 65534

ಸುದ್ದಿಒನ್, ಚಿತ್ರದುರ್ಗ, ಜುಲೈ. 20 : ಇತಿಹಾಸವನ್ನು ಅವಲೋಕಿಸಿದರೆ ಜುಲೈ 20 ನ್ನು ಒಂದು ಪ್ರಮುಖ ದಿನವೆಂದು ಆಚರಿಸಲಾಗುತ್ತಿದೆ. ಭೂಮಿಯಿಂದ ಸುಮಾರು 3 ಲಕ್ಷ 80 ಸಾವಿರ ಕಿ.ಮೀ.ದೂರದಲ್ಲಿರುವ
ಚಂದ್ರನನ್ನು ತಲುಪಲು ಶತಮಾನಗಳಿಂದ ಅನೇಕ ಪ್ರಯತ್ನಗಳು ಮತ್ತು ಪ್ರಯೋಗಗಳನ್ನು ಮಾಡಲಾಗಿದೆ. ಅಂತಿಮವಾಗಿ, ಈ ಕನಸು ಜುಲೈ 20, 1969 ರಂದು ನನಸಾಯಿತು. ಇದು ಚಂದ್ರನ ಮೇಲೆ ಮೊದಲು ಕಾಲಿಟ್ಟ ದಿನ. ಅದಕ್ಕಾಗಿಯೇ ಇದನ್ನು ರಾಷ್ಟ್ರೀಯ ಚಂದ್ರ ದಿನ ಎಂದು ಕರೆಯಲಾಗುತ್ತದೆ. ಚಂದ್ರನ ಮೇಲೆ ಮೊದಲ ಬಾರಿಗೆ ಈ ಅದ್ಬುತ ನಡೆದದ್ದು 56 ವರ್ಷಗಳ ಹಿಂದೆ. ಆಗ ನಡೆದ
ಕಾರ್ಯಾಚರಣೆಯಲ್ಲಿ ಅಪೊಲೊ-11 ಮೊದಲ ಬಾರಿಗೆ ಪುರುಷರನ್ನು ಚಂದ್ರನ ಮೇಲೆ ಇಳಿಸಿತು. ಕಮಾಂಡರ್ ನೀಲ್ ಆರ್ಮ್ ಸ್ಟ್ರಾಂಗ್, ಆಲ್ಡ್ರಿನ್ ಹಾಗೂ ಮೈಕೆಲ್ ಕಾಲಿನ್ಸ್ ಈ ನೌಕೆಯಲ್ಲಿದ್ದರು. 1969 ರಲ್ಲಿ ಈ ದಿನ ನೀಲ್ ಆರ್ಮ್ ಸ್ಟ್ರಾಂಗ್ ಅವರು ಚಂದ್ರನ ಮೇಲೆ ಮೊದಲ ಹೆಜ್ಜೆ ಇಡುತ್ತಿದ್ದಂತೆ ಇಡೀ ಭೂಮಿಗೆ ಹೇಳಿದ ಮಾತಿದು, “ಮಾನವನಿಗೆ ಒಂದು ಸಣ್ಣ ಹೆಜ್ಜೆ, ಮನುಕುಲಕ್ಕೆ ಒಂದು ದೈತ್ಯ ಹೆಜ್ಜೆ” 1971 ರಲ್ಲಿ ಆಗಿನ ಅಮೆರಿಕಾ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು, ಚಂದ್ರನ ಮೇಲೆ ಮಾನವನ ಮೊದಲ ಇಳಿಯುವಿಕೆಯ ವಾರ್ಷಿಕೋತ್ಸವದ ನೆನಪಿಗಾಗಿ ರಾಷ್ಟ್ರೀಯ ಚಂದ್ರನ ದಿನವೆಂದು ಘೋಷಿಸಿದರು.

ಆಗ ನಡೆದ ಈ ಕಾರ್ಯಕ್ರಮದಲ್ಲಿ ಯೋಜನೆಯ ಯಶಸ್ಸಿನ ಬಗ್ಗೆ ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ನೇರಪ್ರಸಾರದ ಮೂಲಕ ತಿಳಿಸಲಾಯಿತು. ಈ ಯೋಜನೆ ಪೂರ್ಣಗೊಂಡ ನಂತರ ನಾಸಾ ಲ್ಯಾಂಡಿಂಗ್ ಅನ್ನು “ಸಾರ್ವಕಾಲಿಕ ಏಕೈಕ ದೊಡ್ಡ ತಾಂತ್ರಿಕ ಸಾಧನೆ” ಎಂದು ಬಣ್ಣಿಸಿತ್ತು. ಜುಲೈ 20 ಅಮೆರಿಕಾದ ಇತಿಹಾಸದಲ್ಲಿ ಮಾತ್ರವಲ್ಲದೆ ಜಗತ್ತಿನ ಇತಿಹಾಸದಲ್ಲೂ ಅತ್ಯಂತ ಮಹತ್ವದ ದಿನಗಳಲ್ಲಿ ಒಂದಾಗಿದೆ. ಇದು ಮೊದಲ ಮಾನವಸಹಿತ ಹಾರಾಟವಾಗಿತ್ತು. ಮೂವರು ಗಗನಯಾನಿಗಳು ಚಂದ್ರನ ಮೇಲ್ಮೈ ಮೇಲೆ ಕಾಲಿಡುವವರೆಗೂ ಜಗತ್ತು ಉಸಿರು ಬಿಗಿ ಹಿಡಿದುಕೊಂಡಿತ್ತು. ಆದಾಗ್ಯೂ ಯೋಜನೆಯ ಎಲ್ಲಾ ವ್ಯವಸ್ಥೆಗಳು ಸರಿಯಾಗಿ ನಡೆಯಲಿಲ್ಲ. ಏಕೆಂದರೆ ನಾಸಾ ತನ್ನ ಅಪೊಲೊ ಕಾರ್ಯಕ್ರಮವನ್ನು ಅಪೊಲೊ-17 ರೊಂದಿಗೆ ಕೊನೆಗೊಳಿಸಿತ್ತು. ಇದು ಕೊನೆಯ ಚಂದ್ರನ ಲ್ಯಾಂಡಿಂಗ್ ಕಾರ್ಯಾಚರಣೆಯಾಗಿತ್ತು. ಇತ್ತೀಚೆಗೆ ಚಂದ್ರನ ಮೇಲೆ ಅನೇಕರು ಹೋಗಿಬಂದಿದ್ದಾರೆ. ನಮ್ಮ ಭಾರತದ ಇಸ್ರೋ ಸಹಾ ಚಂದ್ರಯಾನ – 3 ನ್ನು ಚಂದ್ರನ ನಮಗೆ ಕಾಣದ ಮೇಲ್ಮೈ ಮೇಲೆ ಇಳಿಸಿ ದೊಡ್ಡ ಸಾಧನೆಯನ್ನೇ ಮಾಡಿದೆ. ಇನ್ನೂ ಅನೇಕ ಚಂದ್ರಯಾನ..4, ಶುಕ್ರಯಾನ, ಮಂಗಳಯಾನ ಹೀಗೇ ಅನೇಕ ಬಾಹ್ಯಾಕಾಶ ಯೋಜನೆಗಳು ಪ್ರಗತಿಯಲ್ಲಿವೆ.


ರಾಷ್ಟ್ರೀಯ ಚಂದ್ರ ದಿನದ ಇತಿಹಾಸ :
ಮೇ 25, 1969 ರಂದು, ಆಗಿನ ಯುಎಸ್ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರು ಅಪೋಲೋ ಬಾಹ್ಯಾಕಾಶ ಕಾರ್ಯಕ್ರಮದ ಉಡಾವಣೆಯನ್ನು ಘೋಷಿಸಿದರು. ಚಂದ್ರನಿಗೆ ಮಾನವಸಹಿತ ಬಾಹ್ಯಾಕಾಶ ನೌಕೆಯನ್ನು
ಕಳುಹಿಸಲಾಗುವುದು ಎಂದು ಅವರು ಹೇಳಿದರು. ಅದರ ನಂತರ, ರೇಂಜರ್ 7 ಎಂಬ ಮಾನವರಹಿತ ಕಾರ್ಯಾಚರಣೆಯನ್ನು ಚಂದ್ರನಿಗೆ ಕಳುಹಿಸಲಾಯಿತು. ಇದು ಚಂದ್ರನ ಕಪ್ಪು ಮತ್ತು ಬಿಳಿ ಕ್ಲೋಸ್-ಅಪ್ ಫೋಟೋಗಳನ್ನು ಜಗತ್ತಿಗೆ ತೋರಿಸಿತು. ಅದರ ನಂತರ, ನಾಸಾ ಅಪೋಲೋ 8 ಮಿಷನ್ ಮೂಲಕ ಗಗನಯಾತ್ರಿಗಳನ್ನು ಚಂದ್ರನಿಗೆ ಕಳುಹಿಸಿತು. ಈ ಕಾರ್ಯಕ್ರಮದಲ್ಲಿ, ಅವರು ಚಂದ್ರನ ಮೇಲೆ ಕಾಲಿಡಲಿಲ್ಲ, ಆದರೆ ಅವರು ಚಂದ್ರನನ್ನು 10 ಬಾರಿ ಸುತ್ತಿದರು. ಅದರ ನಂತರ, ಅಪೋಲೋ 11 ಚಂದ್ರನ ಮೇಲೆ ಇಳಿಯಿತು. ಮೊದಲ ಬಾರಿಗೆ, ಮೂರು ಗಗನಯಾತ್ರಿಗಳು ಚಂದ್ರನ ಮೇಲೆ ಕಾಲಿಟ್ಟರು. ಅದರ ನಂತರ, ನಾಸಾ ಚಂದ್ರನ ಮೇಲೆ ವಸಾಹತುಗಳನ್ನು ನಿರ್ಮಿಸುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ವಿಚಿತ್ರವೆಂದರೆ, 1972 ರಲ್ಲಿ ಅಪೋಲೋ 17 ಮಿಷನ್‌ನೊಂದಿಗೆ ನಾಸಾ ಈ ಯೋಜನೆಗಳಿಗೆ ಪೂರ್ಣ ವಿರಾಮ ಹಾಕಿತು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...