ಸುದ್ದಿಒನ್, ಹಿರಿಯೂರು, ಆಗಸ್ಟ್. 12: ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ ನಡೆಯುತ್ತಿರುವ ವಿಶ್ವ ಹಿಂದೂ ಮಹಾಗಣಪತಿ ಸಮಿತಿಯ ಅಧ್ಯಕ್ಷರಾಗಿ ಪ್ರಥಮ ದರ್ಜೆ ಗುತ್ತಿಗೆದಾರರು ಹಾಗೂ ಸಮಾಜ ಸೇವೆಕರಾದ ನಾರಾಯಣ ರೆಡ್ಡಿ ಅವರನ್ನು ಸರ್ವಾನುಮತದಿಂದ ಎರಡನೇ ಬಾರಿಗೆ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.
ಉಪಾಧ್ಯಕ್ಷರಾಗಿ ಗೋವಿಂದಾಚಾರ್ , ಕಾರ್ಯದರ್ಶಿಯಾಗಿ ಪ್ರಭಾಕರ್, ಖಜಾಂಚಿಯಾಗಿ ಬೋಜರಾಜ್, ಮುರಳಿಧರ್ ಆಯ್ಕೆ ಮಾಡಲಾಗಿದೆ.
ವೆಂಕಟೇಶ್ ಜಿ ಚೇತನ್ ನವೀನ್,ಚೇತನ್, ಮಧು, ಪ್ರಶಾಂತ್, ಚಿನ್ಮಯ್, ಟಿ ಮಂಜುನಾಥ್, ಮೇಣು, ಜಗದೀಶ್, ಧನುಷ್, ಕಿಶನ್ ರೆಡ್ಡಿ, ಮನೋಜ್, ಅಮರನಾಥ್, ರಾಜೇಂದ್ರ ದೇಸಾಯಿ,ಕಾಂತರಾಜ್ ರಾಜಣ್ಣ, ಮಂಜಣ್ಣ, ಸಂದೀಪ್ ನಾಯಕ್, ಲೋಕೇಶ್ ನಾಯಕ್ ಇದ್ದರು.
ನಾರಾಯಣ ರೆಡ್ಡಿಯವರ ಅಧ್ಯಕ್ಷತೆಯಲ್ಲಿ ಹಿಂದೂ ಮಹಾಗಣಪತಿ ಮಹೋತ್ಸವ ನಡೆದಿತ್ತು. ಯಾವುದೇ ಸಣ್ಣ ತೊಡಕು ಇಲ್ಲದಂತೆ ಬಹಳ ನಿಷ್ಠೆ, ಪ್ರಾಮಾಣಿಕತೆ ಹಾಗೂ ಶ್ರದ್ದೆಯಿಂದ ಎಲ್ಲರನ್ನೂ ಒಂದುಗೂಡಿಸಿಕೊಂಡು ಗಣೇಶೋತ್ಸವದ ಜವಾಬ್ದಾರಿ ವಹಿಸಿದ್ದರು. ನಾರಾಯಣ ರೆಡ್ಡಿಯವರು ಕೇವಲ ಗುತ್ತಿಗೆದಾರರಲ್ಲದೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ, ದಿನ ದಲಿತರಿಗೆ, ನಿರ್ಗತಿಕರಿಗೆ ಕೈಲಾದಷ್ಟು ಸಹಾಯ ಮಾಡುವ ಮೂಲಕ ಎಲೆಮರೆ ಕಾಯಿಯಂತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರು ಹಿಂದೂ ಮಹಾಗಣಪತಿ ಸಮಿತಿಯ ಮರು ಅಧ್ಯಕ್ಷರಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.









