ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಹಾವೇರಿ: ಬೆಂಗಳೂರಿನ ಏರ್ಪೋರ್ಟ್ ನಲ್ಲಿ ಮುಸ್ಲಿಮರು ನಮಾಜ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಯಾಗ್ತಾ ಇದೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾರ್ವಜನಿಕರು ಏರ್ಪೋರ್ಟ್ ಸಿಬ್ಬಂದಿ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ನಮಾಜ್ ಮಾಡುವುದಕ್ಕೆಂದು ಬೇರೆ ಕೊಠಡಿ ಇದ್ದರು ಕೂಡ ಹೀಗೆ ಸಾರ್ವಜನಿಕವಾಗಿ ನಮಾಜ್ ಮಾಡಲು ಬಿಟ್ಟಿದ್ದೇಕೆ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಇದರ ಬೆನ್ನಲ್ಲೇ ಮಾಜಿ ಸಚಿವ ಆಂಜನೇಯ ಆಡಿದ ಮಾತುಗಳು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಹಾವೇರಿಯಲ್ಲಿ ಮಾತನಾಡಿದ ಆಂಜನೇಯ, ಅದು ಪ್ರಾರ್ಥನೆ ಮಾಡುವುದು, ಕೋಲು ಹಿಡಿದುಕೊಂಡು ಹೋಗುವುದಲ್ಲ. ಗೊತ್ತಾಯ್ತಾ, ಏನು ನಮಾಜ್ ಮಾಡಬಾರದಾ..? ಪ್ರಾರ್ಥನೆ ಮಾಡಿರುವುದು. ಜನಗಳನ್ನೆಲ್ಲ ಕರೆದು ಮೈಕ್ ಹಿಡಿದುಕೊಂಡು ಮಾಡ್ತಾರಾ..? ಅವರಲ್ಲಿರುವ ಶ್ರದ್ಧೆಯನ್ನಾದರೂ ನೋಡಿ ಕಲಿತುಕೊಳ್ಳಿ ಬೇರೆಯವರೆಲ್ಲಾ. ನಮಾಜ್ ಗೆ ಟೈಮ್ ಆಯ್ತು ಅಂದ್ರೆ ಬಸ್ ಸ್ಟಾಪ್ ಇದ್ರೆ ಬಸ್ ಸ್ಟಾಪ್ ನಲ್ಲಿಯೇ ಮಾಡ್ತಾರೆ.
ಏನು ಇವ್ರ ಥರ ನಾಮ ಹಾಕಿಕೊಂಡು, ಪೂಜೆ ಇಟ್ಟುಕೊಂಡು, ಹಾಕಯ್ಯ ತಟ್ಟೆಗೆ ಅಂತ ಕೇಳಿಲ್ಲ. ಅವರೇನು ಮೂರ್ಖರಲ್ಲ. ಮಸೀದಿ ಇದೆ ಅಲ್ಲೋಗಿ ಮಾಡ್ತಾರೆ. ದಾರಿಯಲ್ಲಿ ಯಾಕೆ ಮಾಡ್ತಾರೆ..? ಅವರು ಕರೆಕ್ಟ್ ಆಗಿದ್ದಾರೆ. ಅವರ ಆಚರಣೆ ಬೇರೆ ಇವರ ಆಚರಣೆ ಬೇರೆ. ಯಾರ ಆಚರಣೆಗೂ ಧಕ್ಕೆಯಾಗಬಾರದು. ತೊಂದ್ರೆ ಕೊಡುವಂತಹ ಕೆಲಸವನ್ನು ಮಾಡಬಾರದು. ಯಾವುದೋ ಒಂದು ವರ್ಗದ ವಿರುದ್ಧ ಶಕ್ತಿ ಪ್ರದರ್ಶನ ಮಾಡಬಾರದು. ಗಣೇಶನ ಹಬ್ಬದಲ್ಲಿ ಬ್ರ್ಯಾಂಡಿ ಅಂಗಡಿಗಳು ಫುಲ್ ರಶ್ ಇರುತ್ತವೆ. ಗಣೇಶ ಹಬ್ಬದಲ್ಲಿ ಹೂ, ಹಣ್ಣಿನ ವ್ಯಾಪಾರ ಆಗಲ್ಲ. ಬದಲಾಗಿ ಹೈಕ್ಲಾಸ್ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳು ಹೌಸ್ಫುಲ್ ಆಗುತ್ತವೆ ಎಂದು ಹೆಚ್.ಆಂಜನೇಯ ಅಭಿಪ್ರಾಯ ತಿಳಿಸಿದ್ದಾರೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್