Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮುತ್ತಪ್ಪ ರೈ ಪುತ್ರನ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ; ಈಗ ಆರೋಗ್ಯ ಹೇಗಿದೆ..? ವಕೀಲರು ಹೇಳಿದ್ದೇನು..?

---Advertisement---

 

ರಾಮನಗರ; ಮಾಜಿ ಡಾನ್ ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ನಡೆದಿದೆ. ರಿಕ್ಕಿ ರೈ ಸದ್ಯ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡಿನ ದಾಳಿಗೆ ಸಂಬಂಧಿಸಿದಂತೆ ಮಾತನಾಡಿರುವ ವಕೀಲ ನಾರಾಯಣಸ್ವಾಮಿ ಅವರು, ನಾನು ಆಸ್ಪತ್ರೆಗೆ ಹೋಗಿ ಆರೋಗ್ಯ ವಿಚಾರಿಸಿದ್ದೇನೆ. ಮೂಗಿನ ಭಾಗಕ್ಕೆ ಇಂಜುರಿ ಆಗಿದೆ. 10.30ರಿಂದ ಆಪರೇಷನ್ ಶುರು ಮಾಡಿದ್ದಾರೆ. ಸದ್ಯಕ್ಕೆ ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.

ಮೊದಲಿನಿಂದಲೂ ಮುತ್ತಪ್ಪ ರೈ ಮಗ ಎಂಬ ಕಾರಣಕ್ಕೆ ರಿಕ್ಕಿ ರೈಗೂ ಬೆದರಿಕೆ ಇತ್ತು. ಹೀಗಾಗಿಯೇ ಸೆಕ್ಯೂರಿಟಿ ಇಟ್ಟುಕೊಂಡು ಓಡಾಡ್ತಾ ಇದ್ರು. ರಿಕ್ಕಿ ರೈ, ಮುತ್ತಪ್ಪ ರೈ ಆಸ್ತಿ, ವ್ಯವಹಾರ ನೋಡಿಕೊಂಡು ಹೋಗ್ತಾ ಇದ್ರು. ಸದ್ಯ ಕೆಲವೊಬ್ಬರ ಮೇಲೆ ಅನುಮಾನ ಇದೆ ಅಂತ ದೂರು ನೀಡಲಾಗಿದೆ. ಡ್ರೈವರ್ ರಾಜು ಅನುಮಾನ ಇರುವ ವ್ಯಕ್ತಿಗಳ ಮೇಲೆ ದೂರು ಕೊಟ್ಟಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ವಿದೇಶದಿಂದ ಬಂದಿದ್ದರು.

 

ಬೆಂಗಳೂರಿನಿಂದ ಅವರು ನಿನ್ನೆ ಬಿಡದಿಗೆ ಬಂದಿದ್ದರು. ಇಲ್ಲಿದ್ದಾಗ ಹೆಚ್ಚಾಗಿ ಬಿಡದಿ ಮನೆಗೆ ಬರ್ತಾ ಇದ್ದರು. ಮುತ್ತಪ್ಪ ರೈ ಎರಡನೇ ಹೆಂಡತಿಗೆ ಸಂಬಂಧಪಟ್ಟಂತೆ ಪ್ರಾಪರ್ಟಿ ಇಶ್ಯೂ ಇತ್ತು. ಹಲವು ಕೇಸ್ ಗಳು ಇನ್ನೂ ವಿಚಾರಣಾ ಹಂತದಲ್ಲಿದೆ. ತುಂಬಾ ದಿನಗಳಿಂದ ವಾಚ್ ಮಾಡಿ ಪ್ಲ್ಯಾನ್ ಮಾಡಿಕೊಂಡು ದಾಳಿ ಮಾಡಿದ್ದಾರೆ. ಆಸ್ತಿ ವಿಚಾರಕ್ಕೆ ಸಾಕಷ್ಟು ವಾದ ಇತ್ತು. ಅವರಿಗೆ ಸಾಕಷ್ಟು ವಿರೋಧಿಗಳು ಇದ್ದರು. ಪೊಲೀಸ್ ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ವಕೀಲರು ಹೇಳಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment