Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆಯ ಬಿಜೆಪಿ ಅಭ್ಯರ್ಥಿ ಶ್ರೀನಿನಾಸ್ ಪತ್ನಿಗೆ ಉಡಿ ತುಂಬಿದ ಮುಸ್ಲಿಮರು

---Advertisement---

ದಾವಣಗೆರೆ: ಉಪಚುನಾವಣೆಯ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದೆ. ಮನೆಯಲ್ಲಿ ಯಾರಾದ್ರೂ ಚುನಾವಣೆಗೆ ನಿಂತರೆ ಮನೆಯವರೆಲ್ಲ ಸೇರಿ ಅವರೊಟ್ಟಿಗೆ ಪ್ರಚಾರ ಮಾಡಿ, ನಮ್ಮವರಿಗೆ ಮತ ಹಾಕಿ ಅಂತ ಕೇಳುವುದು ಸರ್ವೇ ಸಾಮಾನ್ಯ. ಅದೇ ಥರ ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಅವರ ಪತ್ನಿ ಮತಯಾಚನೆ ಮಾಡಿದ್ದಾರೆ.

ದಾವಣಗೆರೆಯಲ್ಲಿ ಮುಸ್ಲಿಮರ ಮತಗಳು ಕೂಡ ಹೆಚ್ಚಾಗಿನೆ ಇದಾವೆ. ಅದೇ ಕಾರಣಕ್ಕೆ ಸಚಿವ ಜಮೀರ್ ಅಹ್ಮದ್ ಈ ಬಾರಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ ಎಂದು ಕೇಳಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಲಾಗಿದೆ. ಇದರ ನಡುವೆ ಮುಸ್ಲಿಂ ಸಮುದಾಯದವರು ಪಕ್ಷೇತರವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸದ್ಯ ಎರಡು ಪಕ್ಷಗಳು ಮತಯಾಚನೆ ಮಾಡುತ್ತಿವೆ. ಇದರಲ್ಲಿ ಗಮನ ಸೆಳೆದದ್ದು ಶ್ರೀನಿವಾಸ್ ಅವರ ಪತ್ನಿ ಸಂದ್ಯಾ. ಮುಸ್ಲಿಂ ಮನೆಗಳಿಗೆ ಮತಯಾಚನೆಗೆಂದು ಹೋದಾಗ ಅಲ್ಲಿ, ಸಂಧ್ಯಾ ಅವರಿಗೆ ಉಡಿ ತುಂಬಿ ಕಳುಹಿಸಿದ್ದಾರೆ. ಸಂಧ್ಯಾ ಅವರು ಬಳಿಕ ಮುಸ್ಲಿಂ ಮಹಿಳೆಯರ ಕಾಲಿಗೆ‌ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ.

ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡದೆ ಇರುವುದೇ ಬಿಜೆಪಿಗರಿಗೆ ಒಂದು ಅಸ್ತ್ರವಾಗಿದೆ. ಈಗ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುವಾಗ ಕಾಂಗ್ರೆಸ್, ಮುಸ್ಲಿಮರ ಮತ ಹಾಕಿಸಿಕೊಂಡು ಮೋಸ ಮಾಡಿದೆ. ಈ ಬಾರಿ ನಮಗೆ ಮತ ನೀಡಿ, ನಮ್ಮಲ್ಲಿ ಮೋಸ ಇಲ್ಲ. ನಮ್ಮ ಮನೆ ಬಳಿ ಯಾವಾಗ ಬೇಕಾದರೂ ಬನ್ನಿ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇವೆ ಎಂದು ಮತಯಾಚನೆ ವೇಳೆ ಸಂಧ್ಯಾ ಶ್ರೀನಿವಾಸ್ ಭರವಸೆಯನ್ನು ನೀಡಿದ್ದಾರೆ. ಮನೆಗೆ ಬಂದವರಿಗೆ ಮಡಿಲು ತುಂಬಿ, ಮುಸ್ಲಿಂ ಕುಟುಂಬದವರು ಖುಷಿ ಪಟ್ಟಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...