ಲೋಕಸಭೆಗಿಲ್ಲ, ರಾಜ್ಯಸಭೆಗಿಲ್ಲ..ಟಿಕೆಟ್ ನೀಡದ ಸ್ವಪಕ್ಷದ ಮೇಲೆ ಮುದ್ದಹನುಮೇಗೌಡ ವಾಗ್ದಾಳಿ..!

suddionenews
1 Min Read

ತುಮಕೂರು: ಮಾಜಿ ಸಂಸದ ಮುದ್ದಹನುಮೇಗೌಡ ಸ್ವಪಕ್ಷದವರ ಮೇಲೆಯೇ ವಾಗ್ದಾಳಿ ನಡೆಸಿದ್ದಾರೆ. ಕುಣಿಗಲ್ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡಿಯೇ ಮಾಡುತ್ತೇನೆ. ಜನರ ಅಭಿಪ್ರಾಯ ತಿಳಿದುಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ. ತಾಲೂಕಿನಲ್ಲಿ ಪಕ್ಷಕ್ಕಾಗಿ ದುಡಿದ ಹಲವರ ಶ್ರಮವಿದೆ. 30-35 ವರ್ಷದಿಂದ ನನ್ನ ಶ್ರಮವೂ ಸ್ವಲ್ಪ ಇದೆ. ಆದರೆ ಅದು ಪ್ರಯೋಜನವಾಗಿಲ್ಲ. 4-5 ವರ್ಷದಿಂದ ಆ ಇಬ್ಬರು ಬಂದಿರುವುದು ಎಂದಿದ್ದಾರೆ.

ಇದೆ ವೇಳೆ ಹೈಕಮಾಂಡ್ ಮೇಲೆ ಹರಿಹಾಯ್ದ ಮುದ್ದಹನುಮೇಗೌಡ ಅವರು, ಲೋಕಸಭೆಗೆ ಟಿಕೆಟ್ ನೀಡುತ್ತೀನಿ ಅಂದ್ರು, ಆದರೆ ದೇವೇಗೌಡರಿಗೆ ನೀಡಿತ್ತು. ರಾಜ್ಯಸಭೆಗೆ ನೀಡುತ್ತೇವೆ ಎಂದು ಹೈಕಮಾಂಡ್ ಭರವಸೆ ನೀಡಿತ್ತು. ಆದರೆ ಜೈರಾಮ್ ಗೆ ನೀಡಿದ್ದರು. ರಾಜ್ಯಸಭೆಗೆ ಟಿಕೆಟ್ ನೀಡುವುದಾಗಿ ಹೇಳಿದ್ದ ರಾಹುಲ್ ಗಾಂಧಿ, ಕೆ ಸಿ ವೇಣುಗೋಪಾಲ್ ಕನಿಷ್ಠ ಸೌಜನ್ಯಕ್ಕಾದರೂ ಮೂರು ವರ್ಷದಿಂದ ಫೋನ್ ಕೂಡ ಮಾಡಿಲ್ಲ ಎಂದು ಬೇಸರ ಹೊರ ಹಾಕಿದರು.

ಲೋಕಸಭೆಯಲ್ಲಿ ನನಗೆ ಮಾತ್ರ ಟಿಕೆಟ್ ತಪ್ಪಿಸಿದ್ದರು. ನಮ್ಮ ಪಕ್ಷದವರೆ ಟಿಕೆಟ್ ತಪ್ಪಿಸಿದ್ದರು.‌ಈ ಬಗ್ಗೆ ಜನತಾ ಜಲಧಾರೆಯಲ್ಲಿ ದೇವೇಗೌಡರೇ ಹೇಳಿದರು. ಮುದ್ದಹನುಮೇಗೌಡರನ್ನು ಮುಗಿಸಲು ನನ್ನನ್ನು ಬಲವಂತವಾಗಿ ಅಲ್ಲು ನಿಲ್ಲಿಸಿದ್ದರು ಎಂದು. ಸಿ ಎಂ ಇಬ್ರಾಹಿಂ ನಾವೂ ಮಾಡಿಲ್ಲ ಅಂತ ಪ್ರಮಾಣ ಮಾಡಿ ಹೇಳಿ ಎಂದಾಗಲೂ ಆ ನಾಯಕ ಮಾತನಾಡಲಿಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *