Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ರಭಾವಿ ಮಠಗಳಿಗೆ ಹೆಚ್ಚಿನ ಅನುದಾನ, ನಮ್ಮಂತಹ ಮಠಗಳಿಗೆ ಅನುದಾನವನ್ನು ನೀಡುತ್ತಿಲ್ಲ : ಡಾ.ಪ್ರಣವಾನಂದ ಶ್ರೀಗಳು

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜ. 16 : ರಾಜ್ಯ ಸರ್ಕಾರ ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವುದರ ಮೂಲಕ ಕುಲ ಕಸುಬುಗಳನ್ನು ನಿರ್ಲಕ್ಷ ಮಾಡುತ್ತಿದೆ, ಇದರಿಂದ ಒಂದು ಜನಾಂಗವೇ ನಾಶವಾಗುವ ಹಂತವನ್ನು ತಲುಪಿದೆ ಈ ಹಿನ್ನಲೆಯಲ್ಲಿ ಕುಲ ಕಸುಬುಗಳಿಗೆ ಹೆಚ್ಚಿನ ರೀತಿಯ ಒತ್ತನ್ನು ನೀಡಬೇಕು ಅದೇ ರೀತಿ ಕಾಂತರಾಜ್ ವರದಿಯನ್ನು ಸರ್ಕಾರ ಸ್ವೀಕಾರ ಮಾಡಿ ಅದನ್ನು ಅಂಗೀಕಾರ ಮಾಡುವಂತೆ ಸರ್ಕಾರವನ್ನು ಅತಿ ಹಿಂದುಳಿದ ಮಠಾಧೀಶರ ಮಹಾಸಭಾದ ರಾಜ್ಯಾಧ್ಯಕ್ಷರಾದ ಡಾ.ಪ್ರಣವಾನಂದ ಶ್ರೀಗಳು ಆಗ್ರಹಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದ ಕೇತೇಶ್ವರ ಮಠದಲ್ಲಿ ನಿನ್ನೆ ಸಭೆಯನ್ನು ನಡೆಸಿದ ಅತಿ ಹಿಂದುಳಿದ ಮಠಾಧೀಶರು ನಮ್ಮ ಸಮುದಾಯಕ್ಕೆ ಸರ್ಕಾರ ಹೆಚ್ಚಿನ ಒತ್ತನ್ನು ನೀಡಬೇಕಿದೆ ಬರೀ ಮೇಲ್ವರ್ಗಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ ಇದರಿಂದ ಹಿಂದುಳಿದ ನಮ್ಮಂತಹ ಸಮುದಾಯದವರು ನಿರ್ಲಕ್ಷಕ್ಕೆ ಒಳಗಾಗುತ್ತಿದ್ದಾರೆ. ಸರ್ಕಾರ ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಿರುವುದರಿಂದ ಕುಲ ಕಸುಬುಗಳಾದ ಕುಂಬಾರಿಕೆ, ಕಮ್ಮಾರಿಕೆ, ಚಮ್ಮಾರಿಕೆ, ಅಕ್ಕಸಾಲಿಗ, ಸೇಂದಿ ಇಳಿಸುವುದು ಸೇರಿದಂತೆ ಇತರೆ ಕುಲ ಕಸುಬುಗಳು ಕಣ್ಮರೆಯಾಗುತ್ತಿವೆ, ಇವುಗಳನ್ನು ಉಳಿಸಿಕೊಳ್ಳಬೇಕಿದೆ ಇದಕ್ಕೆ ಸರ್ಕಾರದ ಸಹಾಯ ಅಗತ್ಯ ಇದೆ ಎಂದರು.

ಪ್ರತಿಯೊಂದು ಜಿಲ್ಲೆಯಲ್ಲಿ ಅವರದ್ದೇ ಆದ ಕುಲ ಕಸುಬುಗಳು ಇವೆ. ಅವುಗಳನ್ನು ಉಳಿಸಿಕೊಳ್ಳುವುದು ನಮ್ಮ ಹೊಣೆಗಾರಿಕೆಯಾಗಿದೆ. ಸರ್ಕಾರವೂ ಸಹಾ ಪ್ರಭಾವಿ ಮಠಗಳಿಗೆ ಮಾತ್ರ ಹೆಚ್ಚಿನ ಅನುದಾನವನ್ನು ನೀಡುತ್ತಿದೆ, ನಮ್ಮಂತಹ ಮಠಗಳಿಗೆ ಅನುದಾನವನ್ನು ನೀಡುತ್ತಿಲ್ಲ ಅಲ್ಲದೆ ನಮ್ಮನ್ನು ಕಣ್ಣೆತ್ತಿ ಸಹಾ ನೋಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತ ಪಡಿಸಿದ ಡಾ.ಪ್ರಣವಾನಂದ ಶ್ರೀಗಳು, ಮುಂದಿನ ದಿನದಲ್ಲಿ ಲೋಕಸಭಾ ಚುನಾವಣೆ ಬರುತ್ತಿದ್ದು, ಈ ಸಮಯುದಲ್ಲಿ ನಮ್ಮ ಸಮುದಾಯವರನ್ನು ಜಾಗೃತಿ ಮೂಡಿಸಲಾಗುತ್ತಿದೆ ಅಂಬೇಡ್ಕರ್ ನೀಡಿರುವ ಅಸ್ತ್ರ ಮತವನ್ನು ಮಾರಿ ಕೊಳ್ಳದೆ ಒಳ್ಳೇಯವರಿಗೆ ಮತವನ್ನು ದಾನ ಮಾಡಿ ಎಂದು ತಿಳಿಸುವ ಕಾರ್ಯವನ್ನು ಮುಂದಿನ ದಿನಮಾನದಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಸರ್ಕಾರ ವಿವಿಧ ರೀತಿಯ ನಿಗಮಗಳನ್ನು ಸ್ಥಾಪನೆ ಮಾಡುತ್ತಿದೆ ಆದರೆ ಅದಕ್ಕೆ ಅನುದಾನವನ್ನು ನೀಡುತ್ತಿಲ್ಲ, ಇದರಿಂದ ಯಾವ ಪ್ರಯೋಜನವಾಗುವುದಿಲ್ಲ, ಸರ್ಕಾರ ಅನುದಾನವನ್ನು ನೀಡುವುದರ ಮೂಲಕ ನಿಗಮದಿಂದ ಸಮುದಾಯಗಳಿಗೆ ಪ್ರಯೋಜನವನ್ನು ನೀಡಬೇಕಿದೆ. ಎಂದು ತಿಳಿಸಿ ರಾಜ್ಯದ ಮೂರು ಪಕ್ಷಗಳು ಸಹಾ ನಮ್ಮ ಅತಿ ಹಿಂದುಳಿದ ಸಮುದಾಯಗಳನ್ನು ನಿರ್ಲಕ್ಷ ಮಾಡಿವೆ. ನಮ್ಮನ್ನು ಚುನಾವಣೆ ಸಮಯದಲ್ಲಿ ಮಾತ್ರ ಉಪಯೋಗ ಮಾಡಿಕೊಂಡು ನಂತರ ಬೀಸಾಡುತ್ತಿದ್ದಾರೆ ಇದು ತಪ್ಪಬೇಕು ನಮಗೂ ಸಹಾ ಸರಿಯಾದ ರೀತಿಯಲ್ಲಿ ಪ್ರಾತಿನಿದ್ಯವನ್ನು ನೀಡಬೇಕೆಂದು ಮೂರು ಪಕ್ಷದ ಮುಖಂಡರನ್ನು ಆಗ್ರಹಿಸಿದರು.

ಅತಿ ಹಿಂದುಳಿದ ಮಠಾಧೀಶರ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಬಸವನಾಗ್ತಿದೇವ ಶ್ರೀಗಳು ಮಾತನಾಡಿ, ನಹಮ್ಮ ಸಮುದಾಯಗಳನ್ನು ಆಳುವ ಪಕ್ಷಗಳು ಕಡೆಗಣಿಸಿದ್ದಾರೆ, ಇದರ ಬಗ್ಗೆ ಜನ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಗ್ರಾಮಾಂತರ ಮಟ್ಟದಿಂದ ಮಾಡಲಾಗುವುದು. ಶಿಕ್ಷಣ ವಂಚಿತ ಸಮುದಾಯಗಳಿಗೆ ಶಿಕ್ಷಣವನ್ನು ಕೂಡಿಸುವ ಕಾರ್ಯವನ್ನು ಮಾಡಬೇಕಿದೆ. ನಮ್ಮನ್ನು ಕೂಲಿಗಳಂತೆ ನಡೆಸಿಕೊಳ್ಳುತ್ತಿದ್ದಾರೆ. ನಮ್ಮಲ್ಲಿನ ನೂನ್ಯತೆಯನ್ನು ಸರಿಪಡಿಸಿಕೊಳ್ಳುವುದರ ಮೂಲಕ ಮುಖ್ಯವಾಹಿನಿಗೆ ಬರುವ ಪ್ರಯತ್ನವನ್ನು ಮಾಡಲಾಗುವುದು ಎಂದರು.

ಸರ್ಕಾರ ಈ ಹಿಂದೆ ಕಾಂತರಾಜ್ ರವರಿಂದ ಅರ್ಥೀಕ ಸಮಾಜಿಕ ಶೈಕ್ಷಣಿಕ ವರದಿಯನ್ನು 175 ಕೋಟಿ ವೆಚ್ಚ ಮಾಡಿ ತಯಾರಿಸಿತ್ತು. ಅದರೆ ಅದು ಈವರೆವಿಗೂ ಸರ್ಕಾರಕ್ಕೆ ಬಂದಿಲ್ಲ ಈ ಕೂಡಲೇ ಮುಖ್ಯಮಂತ್ರಿಗಳು ಈ ವರಿದಯನ್ನು ಸ್ವೀಕಾರ ಮಾಡಿ ಅದನ್ನು ಅಂಗೀಕರಿಸಿ ಜಾರಿ ಮಾಡಬೇಕಿದೆ ಇದ್ದಲ್ಲದೆ ಸರ್ಕಾರಿ ನೌಕರಿಯಲ್ಲಿರುವ ನಮ್ಮ ಸಮುದಾಯದ ನೌಕರರ ಮೇಲೆ ವಿವಿಧ ರೀತಿಯ ಕಿರುಕುಳ ನಡೆಯುತ್ತಿದೆ ಇದರ ಬಗ್ಗೆಯೂ ಸಹಾ ಮುಖ್ಯಮಂತ್ರಿಗಳು ಇದರ ಬಗ್ಗೆ ಗಮನ ನೀಡುವುದರ ಮೂಲಕ ನಮ್ಮ ಸಮುದಾಯದವರ ಮೇಲೆ ನಡೆಯುವ ದೌರ್ಜನ್ಯವನ್ನು ತಪ್ಪಿಸುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ದೊಡೇಂದ್ರ ಶ್ರೀಗಳು, ಸರ್ದಾರ್ ಸೇವಾಲಾಲ್ ಶ್ರೀಗಳು, ಬಸವಮೂರ್ತಿ ಕುಂಬಾರ ಗುಂಡಯ್ಯ ಶ್ರೀಗಳು, ಕರುಣಾಕರ ಸ್ವಾಮಿಗಳು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಂದು ಟೀಂ ಇಂಡಿಯಾದ ಉಪನಾಯಕನಾಗಿದ್ದ ಕೆ ಎಲ್ ರಾಹುಲ್ ಈ ಬಾರಿ ತಂಡದಿಂದಾನೇ ಔಟ್..!

ಟ20 ವೇಳೆ ಶ್ವಕಪ್ ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡಲಾಗಿದ್ದಿ, ಕನ್ನಡಿಗ ಕೆ ಎಲ್ ರಾಹುಲ್ ಗೆ ಸ್ಥಾನವನ್ನೇ ನೀಡಿಲ್ಲ. ತಂಡಿದಿಂದ ಹೊರಗೆ ಉಳಿದಿದ್ದಾರೆ. ಈ ಬಾರಿಯ ಐಪಿಎಲ್ ಮ್ಯಾಚ್ ನೆಲ್ಲಾ ಯಾರೆಲ್ಲಾ ಉತ್ತಮ ಪ್ರದರ್ಶ‌

ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ಹಾಗೂ ರೇವಣ್ಣರಿಗೆ ನೋಟೀಸ್ ನೀಡಿದ ಎಸ್ಐಟಿ..!

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿ ತನಿಖೆ ನಡೆಸುತ್ತಿದೆ. ವಿಡಿಯೋದಲ್ಲಿ ಗುರುತು ಸಿಕ್ಕವರನ್ನು ಕರೆಸಿ , ವಿಚಾರಣೆ ನಡೆಸುತ್ತಿದ್ದಾರೆ. ರಾಜಕೀಯ ನಾಯಕರ ಕೆಸೆರೆಚಾಟದ ನಡುವೆ ತನಿಖೆ ತೀವ್ರಗೊಂಡಿದೆ. ಎಡಿಜಿಪಿ ಬಿಜಯ್

ಚಿತ್ರದುರ್ಗ | ಮೇ 1ರಂದು ವಿದ್ಯುತ್ ವ್ಯತ್ಯಯ

ಚಿತ್ರದುರ್ಗ. ಏ.30: ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ ಪಂಡರಹಳ್ಳಿ ಲೈನ್‍ನ ಟ್ಯಾಪಿಂಗ್ ಪಾಯಿಂಟ್‍ನಿಂದ ಪಂಡರಹಳ್ಳಿ 66/11 ಕೆವಿ ವಿ.ವಿ ಕೇಂದ್ರದವರೆಗೆ ಡ್ರೇಕ್ ಕಂಡಕ್ಟರ್ ಬಳಸಿ ಉದ್ದೇಶಿತ 66 ಕೆವಿ ಲೈನ್ ಮತ್ತು ಕೊಯೊಟ್ ಕಂಡಕ್ಟರ್ ಬಳಸಿ

error: Content is protected !!