Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶಾಮನೂರು ಶಿವಶಂಕರಪ್ಪ ಪ್ರತಿನಿಧಿಸುತ್ತಿದ್ದ ಕ್ಷೇತ್ರದ ಬಗ್ಗೆ ಸಚಿವ ಜಮೀರ್ ಶಾಕಿಂಗ್ ನ್ಯೂಸ್..!

---Advertisement---

ದಾವಣಗೆರೆ: 94 ವರ್ಷವಾದರು ರಾಜಕಾರಣದಲ್ಲಿ ಆಕ್ಟೀವ್ ಆಗಿದ್ದವರು ಶಾಮನೂರು ಶಿವಶಂಕರಪ್ಪ. ಆದರೆ ವಯೋ ಸಹಜ ಅನಾರೋಗ್ಯದಿಂದ ನಿಧನರಾದರು. ಸದ್ಯ ಅವರಿಂದ ತೆರವಾದ ದಾವಣಗೆರೆ ಕ್ಷೇತ್ರಕ್ಕೆ ಬೈ ಎಲೆಕ್ಷನ್ ನಡೆಯಲಿದೆ. ಈಗಾಗಲೇ ಅವರ ಕುಟುಂಬಸ್ಥರು ಅಂದ್ರೆ ಅವರ ಸೊಸೆ, ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರು, ಹೈಕಮಾಂಡ್ ನಿರ್ಧಾರದಂತೆ ನಾವೂ ನಡೆಯುತ್ತೇವೆ. ನಮ್ಮದೇ ಕುಟುಂಬಕ್ಕೆ ಕೊಟ್ಟರು ಖುಷಿ. ಅವರಿಗೂ ಜನರ ನಾಡಿ ಮಿಡಿತ ಗೊತ್ತಿದೆ ಅಂತ ಪರೋಕ್ಷವಾಗಿ ಹೇಳಿದ್ದರು. ಈ ಬೆನ್ನಲ್ಲೇ ಸಚಿವ ಜಮೀರ್ ಅಹ್ಮದ್ ಹೊಸ ಬಾಂಬ್ ಹಾಕಿದ್ದಾರೆ.

ದಾವಣಗೆರೆಗೆ ಭೇಟಿ ನೀಡಿರುವ ಜಮೀರ್, ಶಾಮನೂರು ಶಿವಶಂಕರಪ್ಪ ಅವರು ನನ್ನ ಬಳಿ ಹೇಳಿದ್ದರು. ಇದು ಕೊನೆಯ ಚುನಾವಣೆ ನನ್ನದು. ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟು, ಗೆಲ್ಲಿಸಿಕೊಂಡು ಬರ್ತೇನೆ ಅಂತ ಅವರೇ ಹೇಳಿದ್ದರು. ಬಹಳ ಹಿರಿಯ ಮುಖಂಡರು ನನ್ನತ್ರ ಬಂದಿದ್ದರು. ಶಾಮನೂರು ಶಿವಶಂಕರಪ್ಪ ಅವರೇ ಈ ಬಗ್ಗೆ ಹೇಳಿದ್ದರು ಎಂಬ ಮಾತನ್ನ ಹೇಳಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಹೇಳಿರುವ ಹೇಳಿಕೆಯ ವಿಡಿಯೋ ಕ್ಲಿಪ್ ಕೂಡ ಇದೆ. ಈ ಸಂಬಂಧ ಹೈಕಮಾಂಡ್ ನಿರ್ಧಾರ ಮಾಡಬೇಕಿದೆ.

ಇದೇ ವೇಳೆ ಬಳ್ಳಾರಿ ಬ್ಯಾನರ್ ಗಲಾಟೆಯ ಬಗ್ಗೆ ಮಾತನ್ನಾಡಿದ್ದು, ಈ ಘಟನೆ ಆಗುವುದಕ್ಕೆ ಬಿಜೆಪಿಯವರೇ ಚಾಲನೆ ಕೊಟ್ಟಿದ್ದು. ಆ ಬ್ಯಾನರ್ ಕಿತ್ತಾಕಿದ್ರೆ ಏನೇನು ಸಮಸ್ಯೆ ಆಗ್ತಾ ಇರಲಿಲ್ಲ. ಆ ಬ್ಯಾನರ್ ಕಟ್ಟಿದವರ ಮನೆ ಮುಂದೆ ಅಲ್ಲ ಸಾರ್ವಜನಿಕ ಸ್ಥಳದಲ್ಲಿ ಕಟ್ಟಿದ್ದಿದ್ದು. ಅವರದ್ದೇ ಸರ್ಕಾರ ಇದೆಯಲ್ಲ ಸಿಬಿಐ ತನಿಖೆಯನ್ನೇ ಮಾಡಿಸಲಿ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...