ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್ 15 : ಅಂಬೇಡ್ಕರ್ ಮುಕ್ತ ವಿಚಾರ ವೇದಿಕೆಯಿಂದ ಸರ್ಕಾರಿ ಕಲಾ ಕಾಲೇಜು ಹಿಂಭಾಗ ಮಾತಾ ರಮಾಬಾಯಿ ಅಂಬೇಡ್ಕರ್ ಸರ್ಕಲ್ ಉದ್ಗಾಟಿಸಲಾಯಿತು.

ಸಾಮಾಜಿಕ ಚಿಂತಕ ಪ್ರೊ.ಸಿ.ಕೆ.ಮಹೇಶ್ ಮಾತನಾಡಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜೀವನದಲ್ಲಿ ತಿರುವು ಕಂಡುಕೊಳ್ಳಲು ಅವರ ಪತ್ನಿ ಮಾತಾ ರಮಾಬಾಯಿ ತ್ಯಾಗವಿದೆ. ಪ್ರತಿ ದಲಿತರ ಮನೆಯಲ್ಲಿಯೂ ರಮಾಬಾಯಿಯಂತವರಿದ್ದಾರೆ. ಅವರಿಗೆ ಅವಕಾಶಗಳನ್ನು ಕೊಡಬೇಕೆಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ವ್ಯಾಸಂಗಕ್ಕಾಗಿ ಅಮೇರಿಕಾಕ್ಕೆ ಹೋಗುವುದು ಬೇಡ ಎಂದು ಕುಟುಂಬದವರೆಲ್ಲಾ ಹಠ ಹಿಡಿದು ಕುಳಿತಾಗ ಪತ್ನಿ ರಮಾಬಾಯಿ ಅಮೇಕಾರಕ್ಕೆ ತೆರಳುವಂತೆ ಡಾ.ಬಿ.ಆರ್.ಅಂಬೇಡ್ಕರ್‍ಗೆ ಉತ್ತೇಜನ ನೀಡಿದರು. ಧಾರವಾಡದಲ್ಲಿದ್ದ ಅನಾಥ ಮಕ್ಕಳ ಶಾಲೆಯಲ್ಲಿ ಊಟಕ್ಕೆ ಇಲ್ಲದಂತ ಕಷ್ಟದಲ್ಲಿ ಮಾತಾ ರಮಾಬಾಯಿ ತಮ್ಮ ಮೈಮೇಲಿದ್ದ ಚಿನ್ನದ ಒಡವೆಗಳನ್ನು ಮಾರಾಟ ಮಾಡಿ ಮಕ್ಕಳಿಗೆ ಊಟ ಹಾಕುತ್ತಾರೆ. ಅಂಬೇಡ್ಕರ್‍ರವರ ಇಡಿ ಕುಟುಂಬದ ಹೊಣೆಯನ್ನು ನಿಭಾಯಿಸಿದ ಮಹಾನ್ ತ್ಯಾಗಮಯಿ ಮಾತಾ ರಮಾಬಾಯಿ ಎಂದು ಸಿ.ಕೆ.ಮಹೇಶ್ ಸ್ಮರಿಸಿದರು.
ಡಿ.ದುರುಗೇಶಪ್ಪ, ಕೆ.ಕುಮಾರ್, ಸಿ.ಎ.ಚಿಕ್ಕಣ್ಣ, ಟಿ.ರಾಮು, ವಿಶ್ವಾನಂದ, ವೇದಾಂತ್, ಸಿದ್ದೇಶ್, ಪ್ರೊ.ಕುಮಾರ್, ಚಕ್ರವರ್ತಿ, ಶಿಕ್ಷಕಿ ಬಿ.ಟಿ.ಲೋಲಾಕ್ಷಮ್ಮ, ಚಕ್ರವರ್ತಿ, ಲೇಖಕ ಹೆಚ್.ಆನಂದಕುಮಾರ್ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.

