Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ರತಿ ತಿಂಗಳು 5 ನೇ ತಾರೀಖಿನೊಳಗೆ ವೇತನ ಪಾವತಿಯಾಗದಿದ್ದರೆ ಸಾಮೂಹಿಕ ರಜೆ : 108 ಅಂಬುಲೆನ್ಸ್ ನೌಕರರ ಸಂಘದ ಉಪಾಧ್ಯಕ್ಷ ಮಂಜುನಾಥ್ ಎಚ್ಚರಿಕೆ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಮಾ.20 : ಚಿತ್ರದುರ್ಗ ಜಿಲ್ಲೆಯಾದ್ಯಂತ ಆರೋಗ, ಕವಚ 108 ರ ಅಡಿಯಲ್ಲಿ ಸುಮಾರು 24 ಅಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿದು ಈ ಸೇವೆಯಲ್ಲಿ ಇಎಂ.ಟಿ ಪೈಲಟ್ 128 ಚಾಲಕರು ಸುಮಾರು 127 ಸಿಬ್ಬಂದಿಗಳು ಹಗಲಿರುಳು ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿದ್ದು ಸದರಿ ಸಿಬ್ಬಂದಿಗಳಿಗೆ ಡಿಸೆಂಬರ್-2023 ರಿಂದ ಮಾರ್ಚ್-2024ರ ವರೆಗೆ ವೇತನ ಪಾವತಿಯಾಗಿಲ್ಲದ ಕಾರಣ ಸಿಬ್ಬಂದಿಗಳ ಕುಟುಂಬ ನಿರ್ವಹಣೆ ತುಂಬ ಕಷ್ಟಕರವಾಗಿದೆ. ಈ ಹಿಂದೆ ಸರ್ಕಾರದ ಅಧಿಕಾರಿಗಳು ಮತ್ತು ಸಂಸ್ಥೆಯ ಅಧಿಕಾರಿಗಳಿಗೆ ಹಲವಾರು ಬಾರಿ ನಮ್ಮ ಅಳಲನ್ನು ತೋಡಿಕೊಂಡಿದ್ದು ನಮ್ಮ ಸಮಸ್ಯೆಗೆ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ಸುವರ್ಣ ಕರ್ನಾಟಕ ಆರೋಗ್ಯ ಕವಚ(108) ನೌಕರರ ಸಂಘದ ಉಪಾಧ್ಯಕ್ಷರಾದ ಮಂಜುನಾಥ್ ದೂರಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಮಾರು 5 ವರ್ಷಗಳಿಂದ ಇದೇ ಪರಿಸ್ಥಿತಿ ಮುಂದುವರೆಯುತ್ತಿದ್ದು, 3ರಿಂದ4 ತಿಂಗಳಿಗೆ ಒಂದು ಸಾರಿ ವೇತನ ಪಡೆಯಲು ಪರದಾಡುವಂತಾಗಿದೆ. ಈ ಮೊದಲು ಆಗಸ್ಟ್ 2022ರ ವರೆಗೆ ಇ.ಎಂ.ಟಿಗೆ ರೂ.15509 ಮತ್ತು ಪೈಲಟ್‌ಗೆ ರೂ 15731 ರೂಪಾಯಿಗಳನ್ನು ವೇತನ ರೂಪದಲ್ಲಿ ಪಡೆದುಕೊಳ್ಳುತ್ತಿದ್ದೆವು, ತದನಂತರ 2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಾಕಿ ಇದ್ದ 3 ವರ್ಷಗಳ ಹೆಚ್ಚುವರಿ ವೇತನ (ಇಂಕ್ರಿಮೆಂಟ್ 45%) ಸೇರಿ ಇ.ಎಂ.ಟಿಗೆ 36608 ರೂ ಮತ್ತು ಪೈಲಟ್‌ಗೆ 35603 ರೂಪಾಯಿಗಳು ವೇತನ ರೂಪದಲ್ಲಿ ದೊರೆಯುತ್ತಿತ್ತು. ಈ ಹೆಚ್ಚುವರಿ ಹೊಸ ವೇತನವನ್ನು ಕೇವಲ 6 ತಿಂಗಳುಗಳ ಕಾಲ ಮಾತ್ರ ನೀಡಿದ್ರು ಏಕಾಏಕಿ ಕಡಿತಗೊಳಿಸಿದ್ದಾರೆ.

ಸೆಪ್ಟೆಂಬರ್-2022 ರಿಂದ ಫೆಬ್ರವರಿ-2023ರವರೆಗೆ ನೀಡಿ ಯಾವುದೇ ಕಾರಣವನ್ನು ನೀಡದೇ ಇ.ಎಂ.ಟಿಗೆ 4000 ರೂಗಳು ಪೈಲಟ್ 6000 ರೂಗಳನ್ನು ಏಕಾಏಕಿ ಕಡಿತಗೊಳಿಸಿ ಮಾರ್ಚ-2023 ರಿಂದ ಇ.ಎಂ.ಟಿಗೆ 32774 ರೂಗಳು ಮತ್ತು ಪೈಲಟ್ 29221 ರೂಗಳನ್ನು ನೀಡುತ್ತಿದ್ದಾರೆ ಎಂದರು.

ನಮಗೆ ಬರಬೇಕಾಗಿರುವ ಎರಡು ವರ್ಷದ (2022-23,2023-24)ರ ಹೆಚ್ಚುವರಿ ವೇತನವನ್ನು ಸಹ ಪಾವತಿ ಮಾಡಿರುವುದಿಲ್ಲ. ಈ ಎಲ್ಲಾ ಗೊಂದಲಗಳಿಗೂ ಆರೋಗ್ಯ ಸಚಿವರು. ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಆಯುಕ್ತರು ಮತ್ತು ಉಪನಿರ್ದೇಶಕರು ಹಾಗೂ ಸಂಸ್ಥೆಯ ಮುಖ್ಯಸ್ಥರು ಮತ್ತು ನಮ್ಮ ರಾಜ್ಯ ಪದಾಧಿಕಾರಿಗಳನ್ನೊಳಗೊಂಡಂತೆ ಒಂದು ಸಭೆಯನ್ನು ಆಯೋಜಿಸುವುದರ ಮುಖಾಂತರ ಎಲ್ಲಾ ಗೊಂದಲಗಳಿಗೆ ಇತಿಶ್ರೀ ಹಾಡಿ ಮುಂದಿನ ದಿನಮಾನಗಳಲ್ಲಿ ಪ್ರತಿ ತಿಂಗಳು 5ನೇ ತಾರೀಖಿನ ಒಳಗಾಗಿ ವೇತನ ಪಾವತಿಯಾಗುವಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದು, 10 ದಿನದೊಳಗಾಗಿ ಈ ಸಮಸ್ಯೆಗೆ ಪರಿಹಾರ ಸಿಗದಿದ್ದ ಪಕ್ಷದಲ್ಲಿ ಈ ಸೇವೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗಳು ಸಾಮೂಹಿಕ ರಜೆ ಪಡೆದುಕೊಳ್ಳುವುದರ ಮುಖಾಂತರ ಸೇವೆಯನ್ನು ಸ್ಥಗಿತಗೊಳಿಸಲಾಗುವುದು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾದ ಪಕ್ಷದಲ್ಲಿ ಸಂಸ್ಥೆಯ ಅಧಿಕಾರಿ ವರ್ಗದವರು ನೇರ ಹೊಣೆಯಾಗಿರುತ್ತಾರೆಂದು ಎಂದು ಎಚ್ಚರಿಸಿದ್ದಾರೆ.

ಸುವರ್ಣ ಕರ್ನಾಟಕ ಆರೋಗ್ಯ ಕವಚ(108) ನೌಕರರ ಸಂಘದ ಜಿಲ್ಲಾಧ್ಯಕ್ಷ ಕರಿಯಪ್ಪ, ಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಚಿತ್ರಲಿಂಗಪ್ಪ. ಗೌರವಾಧ್ಯಕ್ಷ ಲೋಕೇಶ್, ಜಿಲ್ಲಾ ಉಪಾಧ್ಯಕ್ಷ ಶಿವಮೂರ್ತಿ, ಜಂಟಿ ಕಾರ್ಯದರ್ಶಿ ಸುಂದರೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸ್ವಂತ ಹಣದಿಂದ ರಸ್ತೆ ರಿಪೇರಿ ಮಾಡಿಸಿದ ವಿನೋದ್ ರಾಜ್

ಸ್ಯಾಂಡಲ್ ವುಡ್ ನಟ ವಿನೋದ್ ರಾಜ್ ಕನ್ನಡ ಇಂಡಸ್ಟ್ರಿಯಿಂದ ದೂರವಾಗಿ ಬಹಳ ವರ್ಷಗಳೇ ಕಳೆದವು. ಒಂದೆರಡು ಸಿನಿಮಾ ಮಾಡಿ, ನಟನೆಯಿಂದ ದೂರವಾದರೂ. ಡ್ಯಾನ್ಸ್ ಮಾಡುವುದರಲ್ಲಿ ವಿನೋದ್ ರಾಜ್ ಎತ್ತಿದ ಕೈ. ಆದರೆ ಅವರನ್ನು ಸ್ಯಾಂಡಲ್

ಚಿತ್ರದುರ್ಗ | ಲೋಕಾಯುಕ್ತ ಬಲೆಗೆ ಬಿದ್ದ ಬಯಲು ಸೀಮೆಯ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ

ಸುದ್ದಿಒನ್, ಚಿತ್ರದುರ್ಗ, ಮೇ. 06  : ಗುತ್ತಿಗೆದಾರನ  ಕಾಮಗಾರಿ ಬಿಲ್ ಪಾವತಿ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಚಿತ್ರದುರ್ಗ ಬಯಲು ಸೀಮೆಯ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಬಸವರಾಜಪ್ಪ ನಾಲ್ಕು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ

ಕರ್ನಾಟಕದಲ್ಲಿಯೇ ತೀರ್ಥಹಳ್ಳಿಯಲ್ಲಿ ಬೆಳೆಯುವ ಅಡಿಕೆ ಬೆಸ್ಟ್ : ಸಂಶೋಧನೆಯಲ್ಲಿ ಬಯಲಾಯ್ತು ಸತ್ಯ

  ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಅಡಿಕೆಯನ್ನು ಬೆಳೆಯುತ್ತಾರೆ. ಆದರೆ ರಾಜ್ಯದೆಲ್ಲೆಡೆ ಆಲ್ಮೋಸ್ಟ್ ಎಲ್ಲಾ ಜಿಲ್ಲೆಯಲ್ಲೂ ಅಡಿಕೆ ತೋಟವನ್ನು ಮಾಡಿರುತ್ತಾರೆ. ಆದರೆ ಅಡಿಕೆಯ ಗುಣಮಟ್ಟದ ವಿಚಾರಕ್ಕೆ ಬಂದರೆ ತೀರ್ಥಹಳ್ಳಿಯ ಅಡಿಕೆ ಉತ್ತಮ ಎನ್ನಲಾಗುತ್ತದೆ. ಕೃಷಿ

error: Content is protected !!