ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದ ಸಾಕ್ಷ್ಯಾಧಾರನಾಗಿ ಬಂದಿದ್ದ ಅನಾಮಧೇಯ ವ್ಯಕ್ತಿಯನ್ನು ಇವತ್ತು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. ನಿನ್ನೆ 19 ಗಂಟೆಗಳ ಕಾಲ ವಿಚಾರಣೆಯನ್ನ ನಡೆಸಲಾಗಿದೆ. ಪ್ರಣಬ್ ಮೊಹಂತಿ ಅವರೇ ವಿಚಾರಣೆಯನ್ನ ನಡೆಸಲಾಗಿದೆ. ಆತ ಗುರುತಿಸಿದ ಜಾಗದಲ್ಲಿ ನೂರಾರು ಶವಗಳು ಸಿಗದೆ ಇರುವ ಕಾರಣ ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಇನ್ನು ಮಾಸ್ಕ್‌ಮ್ಯಾನ್ ಅರೆಸ್ಟ್ ಆದ ಬೆನ್ನಲ್ಲೇ ಆತನ ಹೆಸರು ಕೂಡ ರಿವೀಲ್ ಆಗಿದೆ. ಚಿನ್ನಯ್ಯ ಎಂಬುದು ಆತನ ಹೆಸರಾಗಿದೆ. ಕೋರ್ಟ್ ಗೆ ಹಾಜರು ಪಡಿಸುವುದಕ್ಕೂ ಮುನ್ನ ಚಿನ್ನಯ್ಯನನ್ನ ವೈದ್ಯಕೀಯ ಪರೀಕ್ಷೆಯನ್ನ ನಡೆಸಿದ್ದಾರೆ. ಆರೋಗ್ಯದಲ್ಲಿ ಏನು ಏರುಪೇರು ಇಲ್ಲ ಎಂಬುದನ್ನ ದೃಢಪಡಿಸಿಕೊಂಡು ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಬೆಳ್ತಂಗಡಿಯ ಆಸ್ಪತ್ರೆಯಲ್ಲಿ ಚಿನ್ನಯ್ಯನನ್ನು ವೈದ್ಯಕೀಯ ಪರೀಜ್ಷೆ ನಡೆಸಿದ್ದಾರೆ. ಕೋರ್ಟ್ ಗೂ ಹಾಜರಾಗಿದ್ದಾರೆ.
ಇನ್ನು ದೂರುದಾರನ ವಿಚಾರಣೆಯನ್ನ ಪ್ರಣಬ್ ಮೊಹಂತಿ ನಡೆಸಿದ್ದು, ಶಾಕಿಂಗ್ ವಿಚಾರವೊಂದು ಹೊರಗೆ ಬಂದಿದೆ. ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ಕೋರ್ಟ್ ಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಕೋರ್ಟ್ ಬಳಿ ಬಿಗಿಭದ್ರತೆಯನ್ನ ಕಲ್ಪಿಸಲಾಗಿದೆ. ಪೊಲೀಸರು, ವಕೀಲರು ಜಿತೆಗೆ ಇವತ್ತಿನ ಕಾರ್ಯಕಲಾಪಕ್ಕೆ ಸಂಬಂಧಿಸಿದವರನ್ನು ಮಾತ್ರ ಕೋರ್ಟ್ ಒಳಗೆ ಬಿಡಲಾಗಿದೆ. ಚಿನ್ನಯ್ಯನನ್ನು ಕೋರ್ಟ್ ಗೆ ಹಾಜರು ಪಡಿಸಿದ್ದಾರೆ. ಈ ಮೊದಲು ಕೋರ್ಟ್ ಗೆ ಬಂದು ತಾನೂ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿದಾಗ ಸರ್ಕಾರ ಎಸ್ಐಟಿಯನ್ನು ರಚಿಸಿತ್ತು. ಆದರೆ ಆತ ಹೇಳಿದಂತೆ ಶವಗಳು ಸಿಗಲಿಲ್ಲ. ಹೀಗಾಗಿ ಆತನನ್ನು ಬಂಧಿಸಿ, ನಿಜಾಂಶ ಹೊರ ತರುವ ಪ್ರಯತ್ನವಾಗ್ತಿದೆ.


















