Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಧ್ರುವ ಸರ್ಜಾ ಅವರನ್ನ ಸಂಪರ್ಕ ಮಾಡಿದ ಮಡೆನೂರು ಮನು : ಆಕ್ಷನ್ ಪ್ರಿನ್ಸ್ ಹೇಳಿದ್ದೇನು..?

---Advertisement---

 

ಬೆಂಗಳೂರು; ಮಡೆನೂರು ಮನು ಅಂದ್ರೆ ಈಗ ಯಾರಿಗೆ ಗೊತ್ತಿಲ್ಲ ಹೇಳಿ. ಸಹನಟಿಯ ಅತ್ಯಾ*ಚಾರದ ಆರೋಪದ ಮೇಲೆ ಜೈಲು ಸೇರಿದ್ದರು. ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಇದೀಗ ಮೊದಲು ಧ್ರುವ ಸರ್ಜಾ ಅವರನ್ನ ಭೇಟಿ ಮಾಡುವುದಕ್ಕೆ ಪ್ರಯತ್ನ ಪಟ್ಟಿದ್ದಾರೆ. ಸದ್ಯಕ್ಕೆ ಸಂಪರ್ಕಕ್ಕೆ ಸಿಕ್ಕಿದ್ದು, ಕ್ಷಮೆ ಕೇಳಿದ್ದಾರೆ. ಧ್ರುವ ಅವರು ಕೂಡ ಮಡೆನೂರು ಮನು ಜೊತೆಗೆ ಮಾತನಾಡಿ, ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಮಡೆನೂರು ಮನು ಜೈಲಿಗೆ ಹೋದಾಗ ಒಂದಷ್ಟು ಆಡಿಯೋಗಳು ವೈರಲ್ ಆಗಿದ್ದವು‌. ಅದರಲ್ಲಿ ಶಿವಣ್ಣ, ದರ್ಶನ್, ಧ್ರುವ ಅವರ ಬಗ್ಗೆ ಕೆಟ್ಟದಾಗಿ ಆಡಿದ್ದ ಮಾತುಗಳೇ ಇದ್ದವು. ಹೀಗಾಗಿ ಇಡೀ ಚಿತ್ರರಂಗ ಮಡೆನೂರು ಮನು ವಿರುದ್ಧ ತಿರುಗಿ ಬಿದ್ದಿತ್ತು. ಮಡೆನೂರು ಮನು ನಮ್ಮ ಚಿತ್ರರಂಗಕ್ಕೆ ಬೇಡವೇ ಬೇಡ ಎಂಬಂಥ ನಿರ್ಧಾರರವನ್ನು ತೆಗೆದುಕೊಳ್ಳಲಾಯ್ತು. ಇದೀಗ ಧ್ರುವ ಸರ್ಜಾ ಅವರನ್ನ ಮಡೆನೂರು ಮನು ಸಂಪರ್ಕ ಮಾಡಿದ್ದಾರೆ.

ವಾಟ್ಸಾಪ್ ಮೂಲಕ ಮೆಸೇಜ್ ಮಾಡಿದ್ದು, ಅಣ್ಣಾ ನಮಸ್ತೆ. ಮಡೆನೂರು ಮನು ಮಾತನಾಡುತ್ತಾ ಇದ್ದೀನಿ. ನಾನು ನಿಜವಾಗಲೂ ಉದ್ದೇಶಪೂರ್ವಕವಾಗಿ ನಾನು ಮಾತನಾಡಿಲ್ಲ ಅಣ್ಣಾ. ನಾನು ತಪ್ಪು ಮಾಡಿಲ್ಲ. ನನ್ನಿಂದ ತಪ್ಪು ಮಾಡಿಸಿದ್ದಾರೆ. ಒಂದು ಒಳ್ಳೆಯ ಸಿನಿಮಾವನ್ನು ಎಲ್ಲರೂ ಸೇರಿಕೊಂಡು ಕೊಂದು ಬಿಟ್ಟಿದ್ದಾರೆ. ಮುಂದೆ ಏನಾಗುತ್ತೋ ನನಗೆ ಗೊತ್ತಿಲ್ಲ. ಸಿನಿಮಾದಿಂದ ಬ್ಯಾನ್ ಮಾಡುವ ಬಗ್ಗೆ ಎಲ್ಲರೂ ಹೇಳುತ್ತಿದ್ದಾರೆ. ನೀವೆಲ್ಲಾ ಮನಸ್ಸು ಮಾಡಿದ್ರೆ ನಾನು ಮತ್ತೆ ನನ್ನ ಜೀವನ ಕಟ್ಟಿಕೊಳ್ತೀನಿ ಎಂದು ಮೆಸೇಜ್ ಹಾಕಿದ್ದಾರೆ.

ಇದಕ್ಕೆ ರಿಪ್ಲೇ ಮಾಡಿರುವ ಧ್ರುವ ಸರ್ಜಾ ಅವರು, ಶಿವಣ್ಣ ಸಾರ್, ದರ್ಶನ್ ಸಾರ್ ನನಗಿಂತ ಸೀನಿಯರ್ಸ್. ಅವರ ಜೊತೆಗೆ ಮಾತನಾಡಿ. ನನ್ನ ಬಗ್ಗೆ ಯೋಚನೆ ಮಾಡಬೇಡಿ. ಡೋಂಟ್ ವರಿ. ದಯವಿಟ್ಟು ನಿಮ್ಮ ತಾಯಿ, ಹೆಂಡತಿ, ಮಕ್ಕಳ ಬಗ್ಗೆ ಕಾಳಜಿ ವಹಿಸಿ ಎಂದು ರಿಪ್ಲೆ ಮಾಡಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...