ಮೈಸೂರು : ಸಿದ್ದರಾಮಯ್ಯ ಅವರು ಇತ್ತೀಚೆಗೆ ವರುಣಾದಲ್ಲಿ ಪ್ರಚಾರದ ವೇಳೆ ಬೊಮ್ಮಾತಿ ವಿರುದ್ಧ ಹರಿಹಾಯ್ದಿದ್ದರು. ರಾಜ್ಯದಲ್ಲಿ ಲಿಂಗಾಯತ ಚೀಫ್ ಮಿನಿಸ್ಟರ್ ಇದ್ದಾರಲ್ಲ. ಅವರೇ ಭ್ರಷ್ಟಾಚಾರ ಮಾಡಿ ಹಾಳು ಮಾಡಿರುವುದು ಎಂದು ಹೇಳಿದ್ದರು. ಈ ಹೇಳಿಕೆ ಬಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಆ ವಿವಾದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ತೆರೆ ಎಳೆದಿದ್ದಾರೆ.
ಇಂದು ಈ ಸಂಬಂಧ ಮಾತನಾಡಿದ ಅವರು, ನಾನು ಹಾಗೇ ಹೇಳಿದ್ದಲ್ಲ. ಬೊಮ್ಮಾಯಿ ಭ್ರಷ್ಟ ಸಿಎಂ ಅಂತ ಹೇಳಿದ್ದು. ಬಸವರಾಜ್ ಬೊಮ್ಮಾಯಿ ಅಂತ ಮಾತ್ರ ಹೇಳಿದ್ದು. ಲಿಂಗಾಯತರು ಅಂತ ನಾನು ಹೇಳಿಲ್ಲ. ಲಿಂಗಾಯತ ಸಮುದಾಯದಲ್ಲಿ ಬಹಳ ಜನ ಹಾನೆಸ್ಟ್ ಸಿಎಂ ಗಳಿದ್ದಾರೆ. ವೀರೇಂದ್ರ ಪಾಟೀಲ್, ನಿಜಲಿಂಗಪ್ಪ ಸೇರಿದಂತೆ ಹಲವರಿದ್ದಾರೆ.
ಇವರೆಲ್ಲಾ ಹಾನೆಸ್ಟ್ ಆಗಿನೇ ಇದ್ದರು. ಆದರೆ ಬಸವರಾಜ್ ಬೊಮ್ಮಾಯಿ ಇದ್ದಾರಲ್ಲ, ಅವರು ಕರೆಪ್ಟ್ ಎಂದಿದ್ದು. ಈ ಚುನಾವಣಾ ಸಮಯದಲ್ಲಿ ಈ ವಿಚಾರವನ್ನು ತಿರುಚಿಲಾಭ ಪಡೆದುಕೊಳ್ಳುತ್ತಿದ್ದಾರೆ. ನನಗೆ ಲಿಂಗಾಯತರ ಬಗ್ಗೆ ಅಪಾರ ಗೌರವವಿದೆ. ನಮ್ಮ ಪಕ್ಷದಲ್ಲಿ ಅವರಿಗೆ ಯಾಕೆ ಹೆಚ್ಚು ಸೀಟು ಕೊಟ್ಟಿದ್ದು. ಕಳೆದ ಬಾರಿಗಿಂತ ಈ ಬಾರಿ ಇನ್ನು ಹೆಚ್ಚಿನ ಸೀಟು ಕೊಟ್ಟಿದ್ದೀವಿ ಎಂದಿದ್ದಾರೆ.





GIPHY App Key not set. Please check settings