ಬೆಂಗಳೂರು; ಕಿರಯತೆರೆ ಈಗ ಮೊದಲಿನಂತೆ ಇಲ್ಲ. ಬಹಳ ದೊಡ್ಡ ಮಟ್ಟಕ್ಕೆ ಬೆಳೆದಿದೆ. ಸಿನಿಮಾದಂತೆ ಅದ್ದೂರಿ ವೆಚ್ಚದಲ್ಲಿ ರೆಡಿಯಾಗ್ತಾ ಇದೆ. ಅದೇ ಥರ ಇತ್ತೀಚೆಗಷ್ಟೇ ಸಿಕ್ಕಾಪಟ್ಟೆ ಸದ್ದು ಮಾಡಿದ್ದಂತ ಧಾರಾವಾಹಿ ಅಂದ್ರೆ ಅದು ಕರ್ಣ. ನಿನ್ನೆ ಅಂದ್ರೆ ಸೋಮವಾರದಿಂದ ಆರಂಭವಾಗಬೇಕಿದ್ದ ಧಾರಾವಾಹಿ ಆರಂಭವಾಗಿಲ್ಲ. ಇದಕ್ಕೆ ನಟ ಕಿರಣ್ ರಾಜ್ ವೀಕ್ಷಕರ ಕ್ಷಮೆ ಕೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕಿರಣ್ ರಾಜ್, ನಾನು ಇವತ್ತು ಕರ್ಣನಾಗಿ ನಿಮ್ಮ ಮನೆಗೆ ಬರಬೇಕಿತ್ತು. ಆದರೆ ಕೆಲ ಕಾರಣಗಳಿಂದ ಅದು ಆಗಲಿಲ್ಲ. ಹೀಗಾಗಿ ಎಲ್ಲಾ ವೀಕ್ಷಕರ ಬಳಿ ಕ್ಷಮೆ ಕೇಳುತ್ತೇನೆ. ನೀವೂ ಕೊಟ್ಟ ಪ್ರೀತಿ, ಪ್ರತಿಕ್ರಿಯೆಯಿಂದ ಒಳ್ಳೆಯ ಪ್ರಾಜೆಕ್ಟ್ ಅನ್ನು ನಿಮ್ಮ ಮುಂದೆ ಇಡುವ ಕುತೂಹಲ ನಮ್ಮಲ್ಲೂ ಇತ್ತು. ಮೊದಲ ಎಪಿಸೋಡ್ ಯಾವಾಗ ಲಾಂಚ್ ಆಗುತ್ತೆ, ವೀಕ್ಷಕರ ರೆಸ್ಪಾನ್ಸ್ ಹೇಗಿರುತ್ತೆ ಅಂತ ಕಾಯ್ತಾ ಇದ್ದೆವು. ಎರಡು ವರ್ಷಗಳ ನಂತರ ಕಮ್ ಬ್ಯಾಕ್ ಆಗ್ತಾ ಇದ್ದ ಕುತೂಹಲವಿತ್ತು. ನನಗೆ ಗೊತ್ತಿರುವ ಪ್ರಕಾರ ಕಾನೂನು ಸಮಸ್ಯೆಯೊಂದು ಆಗಿದೆ. ಅದೆಲ್ಲ ಬೇಗ ಸರಿಯಾಗುತ್ತೆ ಎಂಬ ನಂಬಿಕೆ ಇದೆ ಎಂದು ಕಿರಣ್ ರಾಜ್ ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಮತ್ತೊಂದು ಚಾನೆಲ್ ಕಡೆಯಿಂದ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ವಿರುದ್ಧ ಕಾನೂನು ಹೋರಾಟ ನಡೆಯುತ್ತಿದೆ ಎನ್ನಲಾಗಿದೆ. ಹೀಗಾಗಿ ಪ್ರಸಾರವಾಗಬೇಕಿದ್ದ ಸಮಯಕ್ಕೆ ಧಾರಾವಾಹಿ ಪ್ರಸಾರವಾಗಿಲ್ಲ. ಅದರಲ್ಲೂ ಕಿರಣ್ ರಾಜ್ ಹಾಗೂ ಭವ್ಯಾ ಅವರ ಪ್ರೋಮೋಗೇನೆ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಕ್ಕಿತ್ತು. ಅವರಿಬ್ಬರ ಕಾಂಬಿನೇಷನ್ ಅನ್ನು ತೆರೆಮೇಲೆ ನೋಡಲು ವೀಕ್ಷಕರು ಕಾಯ್ತಾ ಇದ್ರು. ಈಗ ನೋಡಿದ್ರೆ ಸಮಸ್ಯೆಯೊಂದು ಕಾಡಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















