Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಾಸನಾಂಬೆಯ ದರ್ಶನಕ್ಕೆ ಕೊನೆ ದಿನ : ಹರಿದು ಬಂದ ಭಕ್ತ ಸಾಗರ ಎಷ್ಟು..?

---Advertisement---

ಹಾಸನ: ಹಾಸನಾಂಬೆ ಎಂದರೆ ಭಕ್ತಿ ಭಾವ ಜಾಸ್ತಿ. ವರ್ಷಕ್ಕೊಮ್ಮೆ ದರ್ಶನ ಕೊಡುವ ತಾಯಿಯ ಪವಾಡ ಕಡಿಮೆ ಏನಲ್ಲ. ವರ್ಷಕ್ಕೆ ಒಮ್ಮೆ ಅದರಲ್ಲೂ ಬರೀ 13 ದಿನಗಳ ಕಾಲ ಭಕ್ತರ ದರ್ಶನಕ್ಕೆ ಅವಕಾಶ ಇರುತ್ತದೆ. ಹೀಗಾಗಿ ವರ್ಷವಿಡಿ ಕಾಯುವ ಭಕ್ತರು ನಾ ಮುಂದು ತಾ ಮುಂದು ಅಂತ ತಾಯಿಯ ದರ್ಶನಕ್ಕೆ ಮುಂದಾಗುತ್ತಾರೆ. ಇಂದು ತಾಯಿಯ ದರ್ಶನಕ್ಕೆ ಕೊನೆಯ ದಿನ. ಹಬ್ಬದ ರಜೆ ಬೇರೆ ಇದೆ. ಹೀಗಾಗಿ ಭಕ್ತರ ಸಾಲು 8 ಕಿಲೋ ಮೀಟರ್ ಅಷ್ಟು ಉದ್ದವಾಗಿದೆ.

ಅದರಲ್ಲೂ ಈ ದೀಪಾವಳಿ ಹಬ್ಬದಿಂದ ನಾಲ್ಕು ದಿನ ರಜೆ ಸಿಕ್ಕ ಹಿನ್ನಲೆ ಹಾಸನಕ್ಕೆ ಬಂದ ಜನಸಂಖ್ಯೆಯು ಹೆಚ್ಚಳವಾಗಿದೆ. ಹೀಗಾಗಿಯೇ ಭದ್ರತೆ ಹೆಚ್ಚು ಮಾಡುವಂತೆ ಎಸ್ಪಿ ಕೂಡ ಮನವಿ ಮಾಡಿಕೊಂಡಿದ್ದರು. ಇಂದು ಮತ್ತೆ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ. ಅದರಲ್ಲೂ ನಿನ್ನೆ ರಾತ್ರಿಯಿಂದಾನು ಸರತಿ ಸಾಲಿನಲ್ಲಿ ನಿಂತಯ ಜನ ಕಾಯುತ್ತಿದ್ದರು. ತಾಯಿಯ ದರ್ಶನಕ್ಕೆ ಬಿಡುತ್ತಿದ್ದಂತೆ ಬೆಳಗ್ಗೆಯಿಂದಾನೂ ಕ್ಯೂ ನಲ್ಲಿದ್ದಾರೆ ಜನ.

ಮಧ್ಯರಾತ್ರಿಯಿಂದಾನೇ ಜನ ಕ್ಯೂನಲ್ಲಿ ನಿಂತಿದ್ದಾರೆ. ಇಂದು ಕೊನೆಯ ದಿನವಾದ ಕಾರಣ ಜನ ಸಂಖ್ಯೆ ಜಾಸ್ತಿಯಾಗಿದೆ. ಅದರಲ್ಲೂ ಅಕ್ಟೋಬರ್ 10 ರಿಂದ ಅಕ್ಟೋಬರ್ 20ರವರೆಗೆ 23 ಲಕ್ಷಕ್ಕೂ ಅಧಿಕ ಭಕ್ತರು ಬಂದಿದ್ದಾರೆ. ಹಾಸನಾಂಬೆ ಜಾತ್ರೆಯ ಇತಿಹಾಸದಲ್ಲಿಯೇ ಇದು ಮೊದಲ ಬಾರಿಗೆ ಇಷ್ಟೊಂದು ಜನ ಬಂದಿರುವುದು. ಅದರಲ್ಲೂ ಬ್ರಹ್ಮಾಂಡ ಗುರೂಜಿಗಳು ಬೇರೆ ಮುಂದಿನ ವರ್ಷದಿಂದ ಈ ಅವಕಾಶ ಸಾಧ್ಯವಿಲ್ಲ ಎಂದಿದ್ದಾರೆ. ಹೀಗಾಗಿ ಈ ವರ್ಷ ಹಾಸನಾಂಬೆಯನ್ನು ಕಣ್ತುಂಬಿಕೊಂಡು ಬಿಡೋಣಾ ಎಂದು ಎಲ್ಲರು ಧಾವಿಸುತ್ತಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now