Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

2028ಕ್ಕೆ ಕುಮಾರಣ್ಣ ಸಿಎಂ : ನಿಖಿಲ್ ಮಾತಿಗೆ ಆರ್.ಅಶೋಕ್ ಏನಂದ್ರು..?

---Advertisement---

ಮೈಸೂರು: ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆಗಳನ್ನ ಎದುರಿಸುತ್ತಿವೆ. ಮುಂದಿನ ಎಲ್ಲಾ ಚುನಾವಣೆಗಳಿಗೆ ಅದೇ ಮೈತ್ರಿ ಮುಂದುವರೆಯಲಿದೆ ಅಂತ ಈಗಾಗಲೇ ದೇವೇಗೌಡ್ರು ಕೂಡ ಹೇಳಿದ್ದಾರೆ. ಮೈತ್ರಿ ಇರುವಾಗ ಪಕ್ಷ ಅಧಿಕಾರಕ್ಕೆ ಬಂದರೂ ಅಂದರೆ ಮುಂದಿನ ಬಾರಿ 2028ರಲ್ಲಿ ಕುಮಾರಣ್ಣನೇ ಸಿಎಂ ಖುರ್ಚಿಯಲ್ಲಿ ಕುಳಿತುಕೊಳ್ಳುವುದು ಎಂಬ ಮಾತನ್ನ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದ್ದರು. ಈ ಸಂಬಂಧ ಏನಾದ್ರೂ ಮಾತುಕತೆ ಆಗಿದೆಯಾ ಎಂಬ ಪ್ರಶ್ನೆಗೆ ವಿರೋದ್ ಪಕ್ಷದ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.

ನಗುಮುಖದಲ್ಲಿಯೇ ಉತ್ತರ ಕೊಟ್ಟಿದ್ದು, ನೋಡಪ್ಪ ಅವರವರ ಪಾರ್ಟಿ ವಿಚಾರವನ್ನ ಅವರವರು ಮಾತಾಡ್ತಾರೆ. ಇದು ನಮ್ಮ ಎನ್‌ಡಿಎ. ಜೆಡಿಎಸ್ ಅಥವಾ ಬಿಜೆಪಿ ಅಂತಲ್ಲ. ಇವು ಎರಡು ಆದ ಮೇಲೆ ಎನ್‌ಡಿಎ ಟಾಪ್ ನಲ್ಲಿದೆ. ಎನ್‌ಡಿಎ ನಲ್ಲಿ ಏನು ತೀರ್ಮಾನ ಆಗುತ್ತೋ, ನಮ್ಮ ಪ್ರಧಾನ ಮಂತ್ರಿಗಳು, ನಮ್ಮ ರಾಷ್ಟ್ರೀಯ ಅಧ್ಯಕ್ಷರುಗಳು ಏನು ತೀರ್ಮಾನ ಮಾಡ್ತಾರೋ ಅದೇ ಅಂತಿಮ ಆಗುತ್ತೆ.

ಈಗ ಕೂಸು ಹುಟ್ಟುವುದಕ್ಕೂ ಮುಂಚೆಯೇ ಕುಲಾವಿ ಹೊಕೆಸಿಕೊಂಡರೆ ಏನು ಉಪಯೋಗ ಆಗಲ್ಲ. ಆದ್ದರಿಂದ ಮೊದಲು ಚುನಾವಣೆ ಗೆಲ್ಲೋಣಾ. ಆಮೇಲೆ ನಮ್ಮ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡ್ತಾರೆ. ನಮ್ಮ ಬಿಜೆಪಿ ಶಿಸ್ತು ಬದ್ಧ ಪಾರ್ಟಿ. ನೀವೂ ನೋಡಿದ್ದೀರಾ, ಬೇರೆ ಬೇರೆ ರಾಜ್ಯದಲ್ಲಿ ಮುಖ್ಯಮಂತ್ರಿ ಹೇಗೆಲ್ಲಾ ಎಲೆಕ್ಟ್ ಆಗಿದ್ದಾರೆ ಅನ್ನೋದು. ಇಡೀ ಪದರಪಂಚದಲ್ಲಿಯೇ ನಂಬರ್ ಒನ್ ಪಾರ್ಟಿ ನಮ್ಮದು. ಅವರೇ ಹೇಳ್ತಾ ಇದ್ದಾರೆ ಜಿಬಿಎ, ಜಿಲ್ಲಾ ಪಂಚಾಯತ್ ಹೊಂದಾಣಿಕೆಯಾಗಿದೆಯಾ ಅಂತ. ಈ ಸಂಬಂಧ ಯಾವುದೇ ರೀತಿಯ ಮಾತುಕತೆ ಆಗಿಲ್ಲ ಎಂಬುದನ್ನೇ ಸ್ಪಷ್ಟಪಡಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...