ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮಾರ್ಚ್.01 : ದೊಡ್ಡಪೇಟೆ ಕೆಂಚನಾರಹಟ್ಟಿಯಲ್ಲಿರುವ ಕಾಟಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಕಾಳುಹಬ್ಬ ಮಾ.3 ರಿಂದ 5 ರವರೆಗೆ ನಡೆಯಲಿದೆ.
ಸೋಮವಾರ ಬೆಳಗಿನ ಜಾವ ಕೆಂಚನಾರಹಟ್ಟಿ ದೇವಸ್ಥಾನದಿಂದ ಕಾಟಲಿಂಗೇಶ್ವರಸ್ವಾಮಿಯನ್ನು ದ್ಯಾಮವ್ವನಹಳ್ಳಿ ಗ್ರಾಮದ ಗೊಂದ್ಯಾಳಪ್ಪನ ಕಾವಲ್‍ಗೆ ಕಾಲುನಡಿಗೆ ಮೂಲಕ ಕೊಂಡೊಯ್ದು, ಶುದ್ದೀಕರಿಸಿ ಗಂಗಾಪೂಜೆಯೊಂದಿಗೆ ರುದ್ರಾಭಿಷೇಕ, ಮಹಾ ಮಂಗಳಾರತಿ ನಂತರ ಅನ್ನಸಂತರ್ಪಣೆಯಿರುತ್ತದೆ.
ಸಂಜೆ ಆರು ಗಂಟೆಗೆ ಚಿತ್ರದುರ್ಗಕ್ಕೆ ಹಿಂದಿರುಗಿ ಕೆಳಗೋಟೆಯ ಭಕ್ತಾಧಿಗಳ ಮನೆಯಲ್ಲಿ ಪೂಜೆ ಸ್ವೀಕರಿಸಲಿದೆ. ನಂತರ ರಂಗಯ್ಯನಬಾಗಿಲು ಬಳಿಯಿರುವ ರಾಮಾಂಜನೇಯ ದೇವಸ್ಥಾನದಲ್ಲಿ ಕಾಟಲಿಂಗೇಶ್ವರಸ್ವಾಮಿ ತಂಗಲಿದೆ.
ಮಾ.4 ರಂದು ರಾತ್ರಿ 8 ಗಂಟೆಗೆ ಭವ್ಯಾಲಂಕಾರದೊಂದಿಗೆ ಪೂಜೆ ಸಲ್ಲಿಸಿ ರಾಶಿ ಪೂಜೆ ಮಣೇವು ಸೇವೆ ನಂತರ ಮಹಾಮಂಗಳಾರತಿ ಅನ್ನಸಂತರ್ಪಣೆ.
5 ರಂದು ಬೆಳಿಗ್ಗೆ ದೇವಸ್ಥಾನದ ಆವರಣದಲ್ಲಿ ಗದ್ದುಗೆ ಹಾಸಿ ಅರ್ಚಕರಿಂದ ದೊಡ್ಡ ಎಡೆ ಪೂಜೆ, ನೈವೇದ್ಯ, ಗುಡಿಕಟ್ಟಿನ ಅಣ್ಣತಮ್ಮಂದಿರಿಗೆ ಪ್ರಸಾದ ವಿನಿಯೋಗಿಸಲಾಗುವುದು.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕಾಟಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಸಮಿತಿ ವ್ಯವಸ್ಥಾಪಕ ಡಿ.ಮೈಲಾರಪ್ಪ ಕೋರಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











