ಸುದ್ದಿಒನ್, ಹಿರಿಯೂರು, ಜುಲೈ. 27 : ನಿನ್ನೆ ನಗರ ನೆಹರು ಮೈದಾನದಲ್ಲಿ ನಡೆದ ಮಾಜಿ ಶಾಸಕರು ಹಾಗೂ ರಾಜ್ಯದ ಮಾಜಿ ಸಚಿವ ದಿ. ಡಿ. ಸುಧಾಕರ್ ನುಡಿ ನಮನ ಕಾರ್ಯಕ್ರಮಕ್ಕೆ ಪತ್ರಕರ್ತರು, ಸರ್ವ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳನ್ನು ದೂರ ಇಟ್ಟು ಕೇವಲ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಎನ್ನುವ ರೀತಿಯಲ್ಲಿ ಮಾಡಿರುವುದು ದುರದೃಷ್ಟಕರ ಎಂದು ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ದಿವಂಗತ ಸುಧಾಕರ್ ಅವರು ಕಾಂಗ್ರೆಸ್ ಪಕ್ಷದ ಟಿಕೆಟ್‌ನಿಂದ ಹಿರಿಯೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಅಷ್ಟೇ ಅಲ್ಲದೆ ರಾಜ್ಯದ ಸಚಿವರು ಆಗಿದ್ದರು. ಅವರನ್ನು ಕೇವಲ ಪಕ್ಷಕ್ಕೆ ಸೀಮಿತ ಮಾಡಿ ಜನರನ್ನು ದೂರ ಇಟ್ಟು, ಆಮೇಲೆ ಸರ್ಕಾರದ ಅಧಿಕಾರ ದುರುಪಯೋಗ ಪಡಿಸಿಕೊಂಡು ಅಂಗಡಿ ಮುಂಗಟ್ಟುಗಳನ್ನು, ಆಸ್ಪತ್ರೆಗೆ ಬರುವ ಜನಸಾಮಾನ್ಯರನ್ನು ಶಾಲೆಗಳನ್ನು ಮುಚ್ಚಿಸಿ ಪ್ರತ್ಯೇಕತೆ ರೂಪಿಸಿ ಒಂದು ರೀತಿಯ ಕೋವಿಡ್ ನಲ್ಲಿಯ ಲಾಕ್ ಡೌನ್ ನೆನಪಿಸುವಂತೆ ನಗರಕ್ಕೆ ಪ್ರವೇಶ ಕೊಡುವ ನಾಲ್ಕು ದಿಕ್ಕಿನಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿ ನಗರ ಪ್ರವೇಶವನ್ನು ತಡೆದು ಬೇಕಾದವರನ್ನು ಮಾತ್ರ ಒಳಗಡೆ ಬಿಟ್ಟುಕೊಂಡು ಉಳಿದವರನ್ನು ದೂರ ಇಟ್ಟು ತಮಗೆ ತಿಳಿದ ಹಾಗೆ ಕಾರ್ಯಕ್ರಮ ನಡೆಸಿಕೊಂಡಿದ್ದಾರೆ. ನಾಳೆ ಚುನಾವಣೆ ಬಂದಾಗ ಸಹ ಇದೇ ರೀತಿ ಮಾಡುತ್ತೀರಾ ,? ಆಗ ಹಳ್ಳಿಗಳಿಗೆ ಬರುವಾಗ ಇದೇ ರೀತಿ ಪೊಲೀಸ್ ಬಂದೋಬಸ್ತ್ ತೆಗೆದುಕೊಂಡು ಬರುತ್ತೀರಾ ? ಜನಪ್ರಿಯ ಆಗಬೇಕಾದ ಕಾರ್ಯಕ್ರಮವನ್ನು ಸೀಮಿತಗೊಳಿಸಿ ಮಾಡಿರುವುದು ಅದರಲ್ಲೂ ಹಿರಿಯೂರು ತಾಲೂಕಿನ ಮುಖಂಡರುಗಳು ಸಂಘ ಸಂಸ್ಥೆಗಳವರು ಎಲ್ಲರನ್ನು ದೂರವಿಟ್ಟು ಮಾಡಿದ್ದು ದುರದೃಷ್ಟಕರ.. ಕಾರ್ಯಕ್ರಮಕ್ಕೆ ಬರುವಾಗ ರಸ್ತೆ ಅಪಘಾತವಾಗಿ 15– 16 ಜನ ಆಸ್ಪತ್ರೆ ಸೇರಿದ್ದಾರೆ ಅದರ ಹೊಣೆಗಾರಿಕೆ ಯಾರದು.? ಈ ಎಲ್ಲಾ ನಡೆದ ದುರದೃಷ್ಟಕರ ಘಟನೆಗಳಿಗೆ ಹೊಣೆಗಾರರು ಯಾರು ? ಎಲ್ಲಾ ಸಂದರ್ಭಗಳಲ್ಲೂ ರಾಜಕೀಯ ಪಕ್ಷಗಳನ್ನೇ ಮುಂದು ಮಾಡುವುದು ಜನಪರ ಚಿಂತನೆ ಅಲ್ಲ ಎನ್ನುವುದು ನಮ್ಮ ಅಭಿಪ್ರಾಯ ಇದಕ್ಕೆ ಸಂಬಂಧಪಟ್ಟವರು ಉತ್ತರ ಕೊಡುತ್ತಾರೆಯೇ ? ಕಾದು ನೋಡೋಣ ಎಂದು ಹೇಳಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











