ಚಿತ್ರದುರ್ಗ, ಜುಲೈ. 27 : ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟ ಗ್ರಾಮದ ಶ್ರೀ ಗುರು ಕರಿಬಸವೇಶ್ವರಜ್ಜಯ್ಯ ಸ್ವಾಮಿ ಮಠದಲ್ಲಿ ಇದೇ ಜುಲೈ 29ರಂದು ಬೆಳಿಗ್ಗೆ 10.30ಕ್ಕೆ ಸಾಹಿತಿ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರ “ಗುರು ಪೌರ್ಣಮಿ” ಕೃತಿಗಳ ಲೋಕಾರ್ಪಣೆ ಹಮ್ಮಿಕೊಳ್ಳಲಾಗಿದೆ.
ಶ್ರೀ ಗುರುಕರಿಬಸವೇಶ್ವರಜ್ಜಯ್ಯ ಸ್ವಾಮಿ ಮಠದ ಪೀಠಾಧ್ಯಕ್ಷೆ ಅಮ್ಮ ಮಹದೇವಮ್ಮ ದಿವ್ಯ ಸಾನಿಧ್ಯ ಮತ್ತು ಅಧ್ಯಕ್ಷತೆ ವಹಿಸುವರು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ಕೃತಿಗಳ ಲೋಕಾರ್ಪಣೆ ಮಾಡುವರು. ಮುಖ್ಯ ಅತಿಥಿಗಳಾಗಿ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಭಾಗವಹಿಸುವರು. ಕೃತಿಗಳ ಕುರಿತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ಆರ್.ಶಿವಕುಮಾರ್ ದಂಡಿನ, ಶಿವಮೊಗ್ಗದ ವೈದ್ಯಾಧಿಕಾರಿ ಮತ್ತು ಸಾಹಿತಿ ಡಾ.ನಾಗೇಂದ್ರ ಆಚಾರ್ಯ ಮಾತನಾಡುವರು. ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯ ಕನ್ನಡ ಭಾರತಿ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಉಪಸ್ಥಿತಿ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.








