Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: ಆಹಾರ ಸುರಕ್ಷತೆ ಇಲಾಖೆಯ 84 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ!

---Advertisement---

ಬೆಂಗಳೂರು.ಜುಲೈ.27: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗದಲ್ಲಿ ಖಾಲಿ ಇರುವ ವಿವಿಧ ವೃಂದದ ಒಟ್ಟು 84 ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ನೇರ ನೇಮಕಾತಿ ಮಾಡಲು ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜುಲೈ 27, 2026 ರಂದು ಈ ಕುರಿತು ಆದೇಶ  ಹೊರಡಿಸಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಶೀಘ್ರದಲ್ಲೇ ಅರ್ಜಿ ಸಲ್ಲಿಸುವ ಅವಕಾಶ ಸಿಗಲಿದೆ.

ಹುದ್ದೆಗಳ ವರ್ಗೀಕರಣ ಮತ್ತು ವಿವರ:

ಸರ್ಕಾರದ ಆದೇಶದಂತೆ ಮಿಚು/ಉಳಿಕೆ ವೃಂದ (RPC) ಮತ್ತು ಕಲ್ಯಾಣ ಕರ್ನಾಟಕ (KK) ವೃಂದದಡಿ ಒಟ್ಟು 84 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ:

ಆಹಾರ ಸುರಕ್ಷತಾ ಅಧಿಕಾರಿಗಳು (Food Safety Officers – FSO):

ಉಳಿಕೆ ವೃಂದ (RPC): 40

ಕಲ್ಯಾಣ ಕರ್ನಾಟಕ (KK): 19

ಒಟ್ಟು ಹುದ್ದೆಗಳು: 59

ಕಿರಿ ಯ ಆಹಾರ ವಿಶ್ಲೇಷಕರು (Junior Food Analysts):

ಉಳಿಕೆ ವೃಂದ (RPC): 15

ಕಲ್ಯಾಣ ಕರ್ನಾಟಕ (KK): 3

ಒಟ್ಟು ಹುದ್ದೆಗಳು: 18

ಅಂಕಿತಾಧಿಕಾರಿಗಳು (Designated Officers):

ಉಳಿಕೆ ವೃಂದ (RPC): 5

ಕಲ್ಯಾಣ ಕರ್ನಾಟಕ (KK): 2

ಒಟ್ಟು ಹುದ್ದೆಗಳು: 7

ಈ ಹಿಂದೆ 22 ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹೊರಡಿಸಲಾಗಿದ್ದ ಪತ್ರವನ್ನು ಹಿಂಪಡೆದು, ಈಗ ಹೊಸದಾಗಿ ಒಟ್ಟು 84 ಹುದ್ದೆಗಳನ್ನು ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರ’ದ (KEA) ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕವೇ ಪಾರದರ್ಶಕವಾಗಿ ಭರ್ತಿ ಮಾಡಲು ನಿರ್ಧರಿಸಲಾಗಿದೆ.

Join WhatsApp

Join Now

Join Telegram

Join Now