ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಊಟದ ಮೇಜಿನಿಂದ ಹಿಡಿದು ಶೌಚಾಲಯದವರೆಗೆ ಪ್ರತಿಯೊಂದು ಸ್ಥಳದಲ್ಲೂ ಫೋನ್ ಬಳಸುವುದು ಸಾಮಾನ್ಯವಾಗಿದೆ. ಆದರೆ, ನಾವೆಲ್ಲರೂ ಸದಾ ಕೈಯಲ್ಲಿ ಹಿಡಿದುಕೊಳ್ಳುವ ಈ ಸ್ಮಾರ್ಟ್ಫೋನ್ ಗಳು ಶೌಚಾಲಯದ ಸೀ ಟ್ಗಿಂತಲೂ ಹೆಚ್ಚು ಕೀಟಾಣುಗಳನ್ನು (ಬ್ಯಾಕ್ಟೀರಿಯಾ) ಹೊಂದಿರುತ್ತವೆ ಎಂಬ ಸತ್ಯ ಅನೇಕರಿಗೆ ತಿಳಿದಿಲ್ಲ.
ದುಬೈನ ಮೈಕ್ರೋಬಯಾಲಜಿಸ್ಟ್ ನೀತು ಸುರೇಶ್ ಕುಮಾರ್ ಅವರ ಪ್ರಕಾರ, ನಾವು ಫೋನ್ ಅನ್ನು ಪ್ರತಿಯೊಂದು ಸ್ಥಳಕ್ಕೂ ಕೊಂಡೊಯ್ಯುವುದರಿಂದ ಮತ್ತು ಅಡುಗೆ ಮಾಡುವಾಗ ಅಥವಾ ಊಟ ಮಾಡುವಾಗಲೂ ಅದನ್ನು ಸ್ಪರ್ಶಿಸುವುದರಿಂದ ಕೀಟಾಣುಗಳು ಸುಲಭವಾಗಿ ಹರಡುತ್ತವೆ. ಅರಿಝೋನಾ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಂಶೋಧನೆಯ ಪ್ರಕಾರ, ಮೊಬೈಲ್ ಫೋನ್ಗಳಲ್ಲಿ ಸಾಮಾನ್ಯ ಶೌಚಾಲಯದ ಸೀಟ್ಗಳಿಗಿಂತ 10 ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳಿರುತ್ತವೆ. ಹಾಗಾಗಿ, ಫೋನ್ನಿಂದ ರೋಗಾಣುಗಳು ಹರಡುವ ಅಪಾಯವನ್ನು ತಪ್ಪಿಸಲು ನಿಯಮಿತವಾಗಿ ಅದನ್ನು ಸ್ವಚ್ಛಗೊಳಿಸುವುದು ಅತ್ಯಗತ್ಯ.
ಫೋನ್ ಕೀಟಾಣು ಮುಕ್ತವಾಗಿಡಲು 6 ಪ್ರಮುಖ ಮಾರ್ಗಗಳು
ಮೊದಲನೆಯದಾಗಿ, ಫೋನ್ ಸುರಕ್ಷಿತ ಡಿಸ್ ಇನ್ ಫೆಕ್ಟೆಂಟ್ ವೈಪ್ ಗಳನ್ನು ಬಳಸಿ. ಫೋನ್ ಸ್ವಿಚ್ ಆಫ್ ಮಾಡಿ, ಅದರ ಸ್ಕ್ರೀನ್ ಹಾಗೂ ಕೇಸ್ ಅನ್ನು ವೈಪ್ನಿಂದ ಮೆಲ್ಲನೆ ಒರೆಸಿ. ಯಾವುದೇ ಕಾರಣಕ್ಕೂ ಪೋರ್ಟ್ ಗಳು ಅಥವಾ ರಂಧ್ರಗಳ ಒಳಗೆ ದ್ರವ ಹೋಗದಂತೆ ಎಚ್ಚರ ವಹಿಸಿ.

ಎರಡನೆಯದಾಗಿ, ಸ್ಯಾನಿಟೈಸರ್ ಅನ್ನು ಸೂಕ್ತವಾಗಿ ಬಳಸಿ. ಮೆದುವಾದ ಬಟ್ಟೆಯ ಮೇಲೆ ಸ್ವಲ್ಪ ಪ್ರಮಾಣದ ಹ್ಯಾಂಡ್ ಸ್ಯಾನಿಟೈಸರ್ ಹಾಕಿ ಫೋನ್ ಮೇಲ್ಮೈ ಒರೆಸಬಹುದು. ಯುವಿ-ಸಿ (UV-C) ಸ್ಯಾನಿಟೈಸರ್ ಬಳಸುವುದಾದರೆ ಕವರ್ ತೆಗೆದು ಪೂರ್ತಿ ಬೆಳಕು ಬೀಳುವಂತೆ ನೋಡಿಕೊಳ್ಳಿ.
ಮೂರನೆಯದಾಗಿ, ಫೋನ್ ಕೇಸ್ ಹಾಗೂ ಇಯರ್ ಫೋನ್ ಗಳಂತಹ ಪರಿಕರಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಸಿಲಿಕಾನ್ ಅಥವಾ ರಬ್ಬರ್ ಕೇಸ್ ಗಳನ್ನು ಸಾಬೂನು ನೀರಿನಿಂದ ತೊಳೆದು ಒಣಗಿಸಿ, ಹಾರ್ಡ್ ಕೇಸ್ಗಳನ್ನು ಆಲ್ಕೋಹಾಲ್ ವೈಪ್ಸ್ನಿಂದ ಒರೆಸಿ.
ನಾಲ್ಕನೆಯದಾಗಿ, ಅನಾರೋಗ್ಯಕರ ಅಭ್ಯಾಸಗಳನ್ನು ತಪ್ಪಿಸಿ. ಶೌಚಾಲಯದಲ್ಲಿ ಫೋನ್ ಬಳಸುವುದು, ರೆಸ್ಟೋರೆಂಟ್ ಮೇಜುಗಳ ಮೇಲೆ ಇಡುವುದು ಅಥವಾ ಅಶುಚಿಯಾದ ಕೈಗಳಿಂದ ಊಟ ಮಾಡುವಾಗ ಫೋನ್ ಮುಟ್ಟುವುದು ಬೇಡ. ಸಾರ್ವಜನಿಕ ಸ್ಥಳಗಳಲ್ಲಿ ವಾಯ್ಸ್ ಕಮಾಂಡ್ ಅಥವಾ ಹ್ಯಾಂಡ್ಫ್ರೀ ಬಳಸುವುದು ಒಳ್ಳೆಯದು.
ಐದನೆಯದಾಗಿ, ಕೈಗಳನ್ನು ನಿಯಮಿತವಾಗಿ ತೊಳೆಯಿರಿ. ಸಾರ್ವಜನಿಕ ಸಾರಿಗೆ ಬಳಕೆ, ಹಣದ ವಹಿವಾಟು ಅಥವಾ ಆಸ್ಪತ್ರೆ ಭೇಟಿಯ ನಂತರ ಕನಿಷ್ಠ 20 ಸೆಕೆಂಡುಗಳ ಕಾಲ ಸಾಬೂನಿನಿಂದ ಕೈ ತೊಳೆಯಿರಿ. ಸ್ವಚ್ಛವಾದ ಕೈಗಳು ಫೋನ್ಗೆ ಬ್ಯಾಕ್ಟೀರಿಯಾ ಹರಡುವುದನ್ನು ತಡೆಯುತ್ತವೆ.
ಆರನೆಯದಾಗಿ, ಸುಲಭವಾಗಿ ಒರೆಸಬಹುದಾದ ಸ್ಕ್ರೀನ್ ಪ್ರೊಟೆಕ್ಟರ್ ಹಾಗೂ ಕೇಸ್ಗಳನ್ನು ಬಳಸಿ. ಟೆಂಪರ್ಡ್ ಗ್ಲಾಸ್ ಮತ್ತು ಮೃದುವಾದ ಮೇಲ್ಮೈ ಹೊಂದಿರುವ ಕೇಸ್ಗಳನ್ನು ಆಲ್ಕೋಹಾಲ್ ವೈಪ್ಸ್ನಿಂದ ಸುಲಭವಾಗಿ ಸ್ವಚ್ಛಗೊಳಿಸಬಹುದು. ಸ್ಕ್ರೀನ್ ಪ್ರೊಟೆಕ್ಟರ್ನಲ್ಲಿ ಗೆರೆ ಬಿದ್ದರೆ ತಕ್ಷಣ ಬದಲಾಯಿಸಿ, ಏಕೆಂದರೆ ಆ ಗೆರೆಗಳಲ್ಲಿ ಕ್ರಿಮಿಗಳು ಶೇಖರಣೆಯಾಗುತ್ತವೆ.
ಪ್ರಯಾಣದ ನಂತರ ಅಥವಾ ಕಾಯಿಲೆಯಿಂದ ಬಳಲುತ್ತಿರುವವರ ಆರೈಕೆಯ ನಂತರ ಫೋನ್ ಅನ್ನು ಆಫ್ ಮಾಡಿ, ಕೇಸ್ ತೆಗೆದು ಸರಿಯಾಗಿ ಸ್ವಚ್ಛಗೊಳಿಸುವುದರಿಂದ ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ತಡೆಯಬಹುದು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












