ಶಿವಮೊಗ್ಗ; ಅದ್ಯಾಕೋ ಏನೋ ಕಾಂತಾರ 1 ಸಿನಿಮಾಕ್ಕೆ ಇರುವ ಕಂಟಕ ಕಡಿಮೆಯಾದಂತೆ ಕಾಣಿಸ್ತಾ ಇಲ್ಲ. ರಿಷಬ್ ಶೆಟ್ಟಿ ದೈವಕ್ಕೆ ವಿಶೇಷ ಪೂಜೆ ಸಲ್ಲಿಸಿದ್ರು ಕೂಡ ಅವಘಡಗಳು ನಡೆಯುತ್ತಲೆ ಇದಾವೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಸಹ ಕಲಾವಿದರೊಬ್ಬರ ದುರಂತ ಅಂತ್ಯವಾಗಿತ್ತು. ಇದೀಗ ಇನ್ನೊಬ್ಬ ಸಹ ಕಲಾವಿದನ ಅಂತ್ಯವಾಗಿದೆ. ಇದು ಚಿತ್ರತಂಡಕ್ಕೆ ದೊಡ್ಡ ಆಘಾತವನ್ನೇ ಉಂಟು ಮಾಡಿದೆ.
ವಿಜು ವಿ.ಕೆ ಎಂಬ ಕೇರಳದ ಕಲಾವಿದ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೇರಳದ ತ್ರುಶೂರ್ ಮೂಲದ ಸಹ ಕಲಾವಿದ ಇವರಾಗಿದ್ದಾರೆ. ಕಾಂತಾರ ಚಾಪ್ಟರ್ 1ರಲ್ಲಿ ಇವರು ಕೂಡ ಕೆಲಸ ಮಾಡಿದ್ದಾರೆ. ಹೀಗಾಗಿ ಸಿನಿಮಾದ ಕೆಲಸದ ನಿಮಿತ್ತ ಹೋಗಿದ್ದ ವಿಜು ಅವರು ಕೆಲಸ ಮುಗಿದ ಬಳಿಕ ಶಿವಮೊಗ್ಗದ ತೀರ್ಥಹಳ್ಳಿಯ ಹೋಂ ಸ್ಟೇನಲ್ಲಿ ತಂಗಿದ್ದರು. ಆದ್ರೆ ಬೆಳಗ್ಗೆ ಏಳುವಷ್ಟರಲ್ಲಿ ಸಾವನ್ನಪ್ಪಿದ್ದಾರೆ.
ಹೋಂ ಸ್ಟೇನಲ್ಲಿ ಮಲಗಿದ್ದ ವಿಜು ಅವರಿಗೆ ರಾತ್ರಿ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಜೊತೆಯಲ್ಲಿದ್ದವರು ತಕ್ಷಣವೇ ಅವರನ್ನ ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಜು ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿಯ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಹೋದಾಗ ವಿಜು ಇನ್ನಿಲ್ಲ ಎಂಬುದು ಗೊತ್ತಾಗಿದೆ. ಸದ್ಯ ವಿಜು ಮೃತದೇಹವನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಯಲ್ಲಿಯೇ ಇಡಲಾಗಿದೆ. ಈಗಾಗಲೇ ಕುಟುಂಬಸ್ಥರಿಗೂ ಮಾಹಿತಿಯನ್ನ ನೀಡಲಾಗಿದೆ. ಕುಟುಂಬಸ್ಥರು ಶಿವಮೊಗ್ಗದ ಕಡೆಗೆ ಹೊರಟಿದ್ದಾರೆ. ಸಹ ಕಲಾವಿದನ ದುರಂತ ಅಂತ್ಯವಾಗಿದ್ದು, ಇಡೀ ಕಾಂತಾರ ಚಿತ್ರತಂಡ ನೋವಲ್ಲಿದೆ. ಅಗಲಿದ ಸ್ನೇಹಿತನಿಗೆ ಕಣ್ಣೀರಿನ ವಿದಾಯ ಹೇಳಿದ್ದು, ಸಾಂತ್ವಾನ ಸೂಚಿಸಿದ್ದಾರೆ. ಇತ್ತೀಚೆಗಷ್ಟೇ ಕಾಂತಾರಾ 1 ಸಿನಿಮಾದಲ್ಲಿ ನಟಿಸಿದ್ದ ರಾಕೇಶ್ ನ ಕಳೆದುಕೊಂಡಿದ್ದು, ಆ ದುಃಖವೇ ಮಾಸಿಲ್ಲ. ಈಗ ನೋಡಿದ್ರೆ ಇನ್ನೊಬ್ಬ ಸಹಕಲಾವಿದನ ಸಾವಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











