Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಕಾಂತಾರ 1 ಸಹ ಕಲಾವಿದ ಶಿವಮೊಗ್ಗದ ಹೋಂ ಸ್ಟೇನಲ್ಲಿ ನಿಧನ..!

---Advertisement---

ಶಿವಮೊಗ್ಗ; ಅದ್ಯಾಕೋ ಏನೋ ಕಾಂತಾರ 1 ಸಿನಿಮಾಕ್ಕೆ ಇರುವ ಕಂಟಕ ಕಡಿಮೆಯಾದಂತೆ ಕಾಣಿಸ್ತಾ ಇಲ್ಲ. ರಿಷಬ್ ಶೆಟ್ಟಿ ದೈವಕ್ಕೆ ವಿಶೇಷ ಪೂಜೆ ಸಲ್ಲಿಸಿದ್ರು ಕೂಡ ಅವಘಡಗಳು ನಡೆಯುತ್ತಲೆ ಇದಾವೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಸಹ ಕಲಾವಿದರೊಬ್ಬರ ದುರಂತ ಅಂತ್ಯವಾಗಿತ್ತು. ಇದೀಗ ಇನ್ನೊಬ್ಬ ಸಹ ಕಲಾವಿದನ ಅಂತ್ಯವಾಗಿದೆ. ಇದು ಚಿತ್ರತಂಡಕ್ಕೆ ದೊಡ್ಡ ಆಘಾತವನ್ನೇ ಉಂಟು ಮಾಡಿದೆ.

ವಿಜು ವಿ.ಕೆ ಎಂಬ ಕೇರಳದ ಕಲಾವಿದ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೇರಳದ ತ್ರುಶೂರ್ ಮೂಲದ ಸಹ ಕಲಾವಿದ ಇವರಾಗಿದ್ದಾರೆ. ಕಾಂತಾರ ಚಾಪ್ಟರ್ 1ರಲ್ಲಿ ಇವರು ಕೂಡ ಕೆಲಸ ಮಾಡಿದ್ದಾರೆ. ಹೀಗಾಗಿ ಸಿನಿಮಾದ ಕೆಲಸದ ನಿಮಿತ್ತ ಹೋಗಿದ್ದ ವಿಜು ಅವರು ಕೆಲಸ ಮುಗಿದ ಬಳಿಕ ಶಿವಮೊಗ್ಗದ ತೀರ್ಥಹಳ್ಳಿಯ ಹೋಂ ಸ್ಟೇನಲ್ಲಿ ತಂಗಿದ್ದರು. ಆದ್ರೆ ಬೆಳಗ್ಗೆ ಏಳುವಷ್ಟರಲ್ಲಿ ಸಾವನ್ನಪ್ಪಿದ್ದಾರೆ.

ಹೋಂ ಸ್ಟೇನಲ್ಲಿ ಮಲಗಿದ್ದ ವಿಜು ಅವರಿಗೆ ರಾತ್ರಿ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಜೊತೆಯಲ್ಲಿದ್ದವರು ತಕ್ಷಣವೇ ಅವರನ್ನ ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಿಸಿದ್ದಾರೆ‌. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಜು ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿಯ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಹೋದಾಗ ವಿಜು ಇನ್ನಿಲ್ಲ ಎಂಬುದು ಗೊತ್ತಾಗಿದೆ. ಸದ್ಯ ವಿಜು ಮೃತದೇಹವನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಯಲ್ಲಿಯೇ ಇಡಲಾಗಿದೆ. ಈಗಾಗಲೇ ಕುಟುಂಬಸ್ಥರಿಗೂ ಮಾಹಿತಿಯನ್ನ ನೀಡಲಾಗಿದೆ. ಕುಟುಂಬಸ್ಥರು ಶಿವಮೊಗ್ಗದ ಕಡೆಗೆ ಹೊರಟಿದ್ದಾರೆ. ಸಹ ಕಲಾವಿದನ ದುರಂತ ಅಂತ್ಯವಾಗಿದ್ದು, ಇಡೀ ಕಾಂತಾರ ಚಿತ್ರತಂಡ ನೋವಲ್ಲಿದೆ. ಅಗಲಿದ ಸ್ನೇಹಿತನಿಗೆ ಕಣ್ಣೀರಿನ ವಿದಾಯ ಹೇಳಿದ್ದು, ಸಾಂತ್ವಾನ ಸೂಚಿಸಿದ್ದಾರೆ. ಇತ್ತೀಚೆಗಷ್ಟೇ ಕಾಂತಾರಾ 1 ಸಿನಿಮಾದಲ್ಲಿ ನಟಿಸಿದ್ದ ರಾಕೇಶ್ ನ ಕಳೆದುಕೊಂಡಿದ್ದು, ಆ ದುಃಖವೇ ಮಾಸಿಲ್ಲ. ಈಗ ನೋಡಿದ್ರೆ ಇನ್ನೊಬ್ಬ ಸಹಕಲಾವಿದನ ಸಾವಾಗಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment