Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕನ್ನಡ್ ಅಲ್ಲ ಕನ್ನಡ: ಅಂದು ಸುದೀಪ್.. ಇಂದು ರಾಹುಲ್

---Advertisement---

 

ಇವತ್ತಿನ ಸೋಷಿಯಲ್ ಮೀಡಯಾದಲ್ಲೆಲ್ಲಾ ಕೆ ಎಲ್ ರಾಹುಲ್ ಅವರ ವಿಡಿಯೋ ವೈರಲ್ ಆಗುತ್ತಿದೆ. ಕನ್ನಡ ಪ್ರೇಮವನ್ನು ಮೆರೆದ ಕೆ ಎಲ್ ರಾಹುಲ್ ಗೆ ಬಹುಪರಾಕ್ ಹಾಕುತ್ತಿದ್ದಾರೆ. ಅವರಿಗಿರುವ ಕನ್ನಡ ಪ್ರೇಮದ ಬಗ್ಗೆ ಕನ್ನಡಿಗರು ಹೆಮ್ಮೆಯಿಂದ ಕೊಂಡಾಡುತ್ತಿದ್ದಾರೆ. ಕನ್ನಡ್ ಎಂದವನಿಗೆ ಕನ್ನಡ್ ಅಲ್ಲ ಕನ್ನಡ ಎಂದು ತಿದ್ದಿದ ವಿಡಿಯೋ ವೈರಲ್ ಆಗಿದ್ದು, ರಾಹುಲ್ ಮತ್ತೊಮ್ಮೆ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.

 

ವಿಡಿಯೋದಲ್ಲಿ ಇರುವ ಸತ್ಯವೇನು..? ಕೆ ಎಲ್ ರಾಹುಲ್ ಬಳಿ ನಿಂತ ಡೈರೆಕ್ಷನ್ ಡಿಪಾರ್ಟ್ಮೆಂಟ್ ಹುಡುಗ ಕನ್ನಡ್ ಎಂದಿದ್ದಾರೆ. ಆಗ ಕೆ ಎಲ್ ರಾಹುಲ್ ಆ ಹುಡುಗನ ಮುಖ ನೋಡಿ ಏನು ಹೇಳಿದೆ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಅದನ್ನೆ ಉಚ್ಛರಿಸಿದ ಆ ಹುಡುಗ ಕನ್ನಡ್ ಎಂದಿದ್ದಾರೆ. ಆಗ ರಾಹುಲ್ ಆ ಪದವನ್ನು ತಿದ್ದಿದ್ದು, ಏ ಬಾಯ್ ಅದು ಕನ್ನಡ್ ಅಲ್ಲ ಕನ್ನಡ ಎಂದು ಹೇಳಿಕೊಟ್ಟು, ಮತ್ತೊಮ್ಮೆ ಉಚ್ಛರಿಸುವಂತೆ ಹೇಳಿದ್ದಾರೆ. ಸರಿಯಾಗಿ ಹೇಳುವಂತೆ ಹೇಳಿಕೊಟ್ಟಿದ್ದಾರೆ. ಈ ವಿಡಿಯೋ ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕನ್ನಡ ಪ್ರೇಮಕ್ಕೆ ಬಹುಪರಾಕ್ ಹಾಕಿದ್ದಾರೆ.

ಇನ್ನು ಮಾರ್ಚ್ 22ರಿಂದ ಐಪಿಎಲ್ ಶುರುವಾಗುತ್ತಿದೆ. ಅದರ ಪ್ರಮೋಷನ್ ವಿಡಿಯೋ ಇದಾಗಿದೆ ಎನ್ನಲಾಗುತ್ತಿದೆ. ಏನೇ ಆಗಲಿ ಪ್ರಮೋಷನ್ ವಿಚಾರಕ್ಕೂ ನಮ್ಮ ಕನ್ನಡವನ್ನೇ ತೆಗೆದುಕೊಂಡಿರುವುದು ಹೆಮ್ಮೆಯ ವಿಚಾರ. ಈ ಹಿಂದೆ ವಿಕ್ರಾಂತ್ ರೋಣ ಸಿನಿಮಾದ ಪ್ರಮೋಷನ್ ಸಮಯದಲ್ಲಿ ಕಿಚ್ಚ ಸುದೀಪ್, ಆ್ಯಂಕರ್ ಕನ್ನಡ್ ಎಂದಾಗ ಆ ಪದವನ್ನು ತಿದ್ದಿ, ಕನ್ನಡ್ ಅಲ್ಲ ಕನ್ನಡ ಎಂದು ಹೇಳಿಕೊಟ್ಟಿದ್ದರು. ಇದೀಗ ರಾಹುಲ್ ಅವರು ಅದೇ ರೀತಿ ನಡೆದುಕೊಂಡಿದ್ದು, ಇಬ್ಬರ ಕನ್ನಡ ಪ್ರೇಮಕ್ಕೆ ಕನ್ನಡಿಗರು ಹಾರ್ಟ್ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...