ಸುದ್ದಿಒನ್, ಚಳ್ಳಕೆರೆ, ನವೆಂಬರ್. 01 : ತಾಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 71 ನೆ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಮಾಡಲಾಯಿತು. ಕನ್ನಡಾಂಬೆ ತಾಯಿ ಭುವನೇಶ್ವರಿಯನ್ನು ಪೂಜಿಸಿ ಪ್ರಾರ್ಥಿಸಿ ಗೌರವ ಸಲ್ಲಿಸಿ ಪುಷ್ಪ ನಮನ ಸಲ್ಲಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕರಾದ ರೇವಣ್ಣರವರು ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡ ಏಕೀಕರಣ ಚಳುವಳಿಯ ಬಗ್ಗೆ ಮಾಹಿತಿ ನೀಡಿದರು,ಕನ್ನಡ ಭಾಷೆ 2000 ವರ್ಷಗಳ ಇತಿಹಾಸ ಇರುವ ಭಾಷೆ ಕನ್ನಡ ಭಾಷೆ ಸಾಹಿತ್ಯ 8 ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ನಾಡು ನಮ್ಮ ಕನ್ನಡ ನಾಡು ಎಂದು ಹೇಳಿದರು.
ಸಹ ಶಿಕ್ಷಕಿಯಾದ ಆರ್. ಆಶಾ ಮಾತನಾಡಿ ನಮ್ಮ ಮಾತೃ ಭಾಷೆ ಕನ್ನಡದ ಮಹತ್ವ ವಿವರಿಸಿದರು. ಸಹ ಶಿಕ್ಷಕಿಯಾದ ಎಸ್ ಸುಶೀಲಮ್ಮ ಮಾತನಾಡಿ ಕನ್ನಡ ಭಾಷೆ ಬೆಳೆದು ಬಂದ ಹಾದಿ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ನಾಡಿನ ಮೇಲೆ ಹೇಗೆ ಬೆಳಕು ಚೆಲ್ಲಿತು ಎಂಬುದರ ಬಗ್ಗೆ ತಿಳಿಸಿಕೊಟ್ಟರು.
ನಂತರ ಶಾಲಾ ಮಕ್ಕಳಿಂದ ನಮ್ಮ ನಾಡು ನುಡಿ ಸಂಸ್ಕೃತಿಯ ಸಂದೇಶ ನೀಡುವ ದೇಶ ಭಕ್ತಿ ಗೀತೆಗಳು, ಕನ್ನಡ ಗೀತೆಗಳು ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂತನ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ದಾಸಯ್ಯ ಎನ್ ರವರು ವಹಿಸಿದ್ದರು ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ದೀಪ ಜಯಣ್ಣ ಉಪಸ್ಥಿತಿ ವಹಿಸಿದ್ದರು,ಸದಸ್ಯರಾದ ಶ್ರೀಮತಿ ಶಿಲ್ಪಾ ಎಸ್, ಅನಿತಮ್ಮ ಮೋಹನರೇಡ್ಡಿ, ಎ .ಟಿ ನಾಗರಾಜ್, ಮೋಹನ್ ಡಿ ಹಾಗೂ ಶಾಲಾ ಮಕ್ಕಳು ಮತ್ತು ಊರಿನ ಗ್ರಾಮಸ್ಥರು, ಮುಖಂಡರು ಯುವಕರು,ಮಹಿಳೆಯರು, ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾರ್ಯಕ್ರಮದಲ್ಲಿ 6 ನೆಯ ತರಗತಿ ವಿದ್ಯಾರ್ಥಿನಿ ವಿನುತ ಎಮ್ ಪ್ರಾರ್ಥಿಸಿದರು, ಸಹ ಶಿಕ್ಷಕಿಯಾದ ಎಸ್.
ಸುಶೀಲಮ್ಮ ರವರು ವೇದಿಕೆಯಲ್ಲಿ ಇರುವ ಎಲ್ಲ ಗಣ್ಯಮಾನ್ಯರನ್ನು ಸ್ವಾಗತಿಸಿದರು, ಶಾಲೆಯ ಸಹ ಶಿಕ್ಷಕರಾದ ಬಸವರಾಜ ಜಿ.ಟಿ ರವರು ಕಾರ್ಯಕ್ರಮವನ್ನು ನಿರೂಪಿಸಿದರು, ಶಿಕ್ಷಕಿಯಾದ ಶ್ರೀಮತಿ ಸುಪ್ರಿಯಾ ಜೆ ವಂದನಾರ್ಪಣೆ ಸಲ್ಲಿಸಿದರು. ಒಟ್ಟಾರೆಯಾಗಿ ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.











