Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಕಬೀರಾನಂದಾಶ್ರಮಕ್ಕೆ ಯಾವುದೆ ಜಾತಿ, ಧರ್ಮ ಇಲ್ಲ, ಎಲ್ಲರೂ ಸಮಾನರು : ಡಾ.ಬಸವಕುಮಾರ ಸ್ವಾಮೀಜಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಫೆ. 23 :
ಚಿತ್ರದುರ್ಗದಲ್ಲಿ ಜಾತಿಗೊಂದು ಮಠಗಳು ಇವೆ ಆದರೆ ಕಬೀರಾನಂದಾಶ್ರಮಕ್ಕೆ ಯಾವುದೆ ಜಾತಿ, ಧರ್ಮ ಇಲ್ಲದೆ ಎಲ್ಲರನ್ನು ಸಹಾ ಸಮಾನವಾಗಿ ನೋಡುವಂತ ಆಶ್ರಮ ಎಂದರೆ ಅದು ಕಬೀರಾನಂದಾಶ್ರಮವಾಗಿದೆ ಎಂದು ಚಿತ್ರದುರ್ಗದ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಡಾ.ಬಸವಕುಮಾರ ಶ್ರೀಗಳು ತಿಳಿಸಿದರು.

ನಗರದ ಕಬೀರಾನಂದ ಬಡಾವಣೆಯಲ್ಲಿನ ಕಬೀರಾನಂದಾಶ್ರಮದಲ್ಲಿ ನಿನ್ನೆಯಿಂದ ಪ್ರಾರಂಭವಾಗಿರುವ 95ನೇ ಶಿವರಾತ್ರಿ ಮಹೋತ್ಸವದ ಎರಡನೇ ದಿನವಾದ ಭಾನುವಾರ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಶಿವಲಿಂಗಾನಂದ ಶ್ರೀಗಳು ಮಾತೃ ಹೃದಯವನ್ನು ಹೊಂದಿದವರಾಗಿದ್ದಾರೆ. ತಾಯಿ ಹೃದಯವನ್ನು ಹೊಂದಿದವರು ಮಾರ ಸಂತರಾಗಲು ಸಾಧ್ಯವಿದೆ. ಎಲ್ಲರಿಗೂ ಸಹಾ ತಾಯಿ ಹೃದಯ ಬರುವುದಿಲ್ಲ, ಮಾನವರಾದವರು ಜೀವನದಲ್ಲಿ ಚಿಲ್ಲರೆ ವಿಷಯಗಳಿಗೆ ತಲೆಯನ್ನು ಕರಡಿಸಿಕೊಳ್ಳುತ್ತಾರೆ ಆದರೆ ಸಂತರಾದವರು ಮಾತ್ರ ಇದಕ್ಕೆ ಹೊರತು ಪಡಿಸಿ ದೊಡಡ್ ವಿಷಯಗಳಿಗೆ ಮಾತ್ರ ತೆಲೆಯನ್ನು ಕೆಡಿಸಿಕೊಂಡು ಅದರ ಪರಿಹಾರಕ್ಕೆ ಮುಂದಾಗುತ್ತಾರೆ ಎಂದರು.

 

ಚಿತ್ರದುರ್ಗದಲ್ಲಿ ನಡೆಯುವ ಶರಣ ಸಂಸ್ಕøತಿ ಉತ್ಸವ ಹಾಗೂ ಶಿವರಾತ್ರಿ ಮಹೋತ್ಸವ ಮಹತ್ವವನ್ನು ಪಡೆದಿದೆ. ಶ್ರೀಗಳ ನಡೆ-ನುಡಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಲ್ಲವೂ ಸಹಾ ಒಂದೇ ಆಗಿದೆ. ಇದರಿಂದ ಮಠಗಳು ಆಭೀವೃದ್ದಿಯನ್ನು ಹೊಂದಿದೆ. ಶ್ರೀಗಳು ಸರಳ ಹಾಗೂ ಸೌಮ್ಯವಾಗಿದ್ದಾರೆ. ನಮ್ಮ ಚಿತ್ರದುರ್ಗದಲ್ಲಿ ಜಾತಿಗೊಂದು ಮಠಗಳು ಎಲ್ಲವು ಅವರ ಜಾತಿಯಿಂದ ಪ್ರಗತಿಯನ್ನು ಸಾಧಿಸುತ್ತಿದ್ದಾರೆ ಆದರೆ ಕಬೀರಾನಂದಾಶ್ರಮ ಯಾವುದೇ ಜಾತಿ, ಧರ್ಮಕ್ಕೆ ಸೀಮತವಾಗದೆ ಎಲ್ಲರನ್ನು ಸಹಾ ಒಂದೂ ಗೂಡಿಸಿಕೊಂಡು ಎಲ್ಲರನ್ನು ತಮ್ಮ ತಕ್ಕೆಗೆ ತೆಗೆದುಕೊಂಡು ಮುನ್ನಡೆಸುತ್ತಿದ್ದಾರೆ ಎಂದ ಶ್ರೀಗಳು ಗುರುವಿನ ಮಾತನ್ನು ಕೇಳಿದಾಗ ಜೀವನದಲ್ಲಿ ಉದ್ದಾರವಾಗಲು ಸಾಧ್ಯವಿದೆ. ಇದು ನಮ್ಮ ಬದುಕಿನಲ್ಲಿ ಪ್ರಗತಿಯನ್ನು ಹೊಂದಲು ಸಾಧ್ಯವಿದೆ. ಶ್ರೀಗಳು ಈ ರೀತಿಯಾದ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ವಾರ ಪೂರ್ತಿ ಶಿವನ ಸ್ಮರಣೆಯನ್ನು ಮಾಡಲು ಅವಕಾಶವಾಗಿದೆ ಎಂದು ಬಸವ ಕುಮಾರ್ ಶ್ರೀಗಳು ತಿಳಿಸಿದರು.

 

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ನಾನು ಸಂಸದನಾಗಿದ್ದಾಗ ಇಲ್ಲದಿದ್ದಾಗಲೂ ಸಹಾ ಶ್ರೀಮಠ ನನ್ನನ್ನು ಉತ್ತಮವಾಗಿ ನೋಡಿಕೊಂಡಿದೆ ನನ್ನ ಹಾಗೂ ಮಠದ ಸಂಬಂಧ ಈಗಲೂ ಸಹಾ ಉತ್ತಮವಾಗಿದೆ, ಕಳೆದ 94 ವರ್ಷಗಳಿಂದ ನಿರಂತರವಾಗಿ ಈ ರೀತಿಯಾದ ಶಿವರಾತ್ರಿ ಮಹೋತ್ಸವ ನಡೆಸುತ್ತಾ ಬರಲಾಗಿದೆ. ಇಂದಿನ ದಿನಮಾನದಲ್ಲಿ ದೂರದರ್ಶನದಲ್ಲಿ ವೈಚಾರಿಕೆಗಿಂತ ಬೇರೆ ಬೇರೆ ಕಾರ್ಯಕ್ರಮಗಳು ಹೆಚ್ಚಾಗಿ ಪ್ರಚಾರವಾಗುತ್ತಿದೆ. ಇಂತಹ ಶಿವರಾತ್ರಿ ಮಹೋತ್ಸವಕ್ಕೆ ಜನ ಬರುವುದಿಲ್ಲ ಶ್ರೀಗಳು ಮಗುವಿನ ತಾಯಿ ಹೃದಯವನ್ನು ಹೊಂದಿದ್ದಾರೆ ಎಂದರು.

 

ಹಂಪಿಯ ಹೇಮಕೂಟದ ಶಿವರಾಮಾವಧೂತ ಆಶ್ರಮದ ಶ್ರೀ ವಿದ್ಯಾನಂದ ಭಾರತಿ ಶ್ರೀಗಳು ಮಾತನಾಡಿ, ಗುರುವಿನ ವಚನಾಮೃತಕ್ಕಿಂತ ಅಮೃತ ಬೇರ ಇಲ್ಲ, ಅಮೃತ ಎಂದರೆ ತಿನ್ನುವುದು, ಕುಡಿಯುವುದು ಅಲ್ಲ, ಇದು ಯಾವುದೇ ಒಂದು ವಸ್ತುವಿನಲ್ಲಿ ಇಲ್ಲ ಇದು ಇರುವುದು ಗುರುಗಳ ಅಮೃತ ವಾಣಿಯಲ್ಲಿದೆ. ಇದನ್ನು ಆಲಿಸುವುದರಿಂದ ಮುಕ್ತಿ ಸಿಗಲಿದೆ. ಗುರುವಿನಲ್ಲಿ ನಿಷ್ಠೆಯಿಂದ ಇದ್ದವರಿಗೆ ಮುಕ್ತಿ ಸಿಗಲಿದೆ. ಗುರುವಿನ ವಾಣಿಯನ್ನು ಆಲಿಸುವುದರಿಂದ ಮಾನವ ಜನ್ಮಕ್ಕೆ ಮುಕ್ತಿ ಸಿಗಲಿದೆ. ಗುರುವಿನಿಂದ ಕಲಿಯುವುದು ಹೆಚ್ಚಾಗಿದೆ. ಗುರುವಿನ ಗುಲಾಮನಾಗುವವರೆಗೂ ಮುಕ್ತಿ ದೂರಕುವುದಿಲ ಕತ್ತಲೆಯನ್ನು ಕಳೆಯುವುದು ಸೂರ್ಯ ಚಂದ್ರರಾದರೆ ಮಾನವನ ಜ್ಞಾನದ ಕತ್ತಲೆಯನ್ನು ಕಳೆಯುವುದು ಗುರುವಿನ ವಚನಾಮೃತವಾಗಿದೆ. ಗುರುಗಳು ವಚನವನ್ನು ಅಲಿಸಿದರೆ ದುಃಖ ದೂರವಾಗುತ್ತದೆ. ಪರಮಾತ್ಮನ ಸಂಗವನ್ನು ಗುರುವಿನ ಮೂಲಕ ಪಡೆಯಲು ಸಾಧ್ಯವಿದೆ ಎಂದು ತಿಳಿಸಿದರು.

 

ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಕೈಲಾಸನಾಥ್ ಶ್ರೀಗಳು, ಮಾಧವನಂದ ಶ್ರೀಗಳು ಮಾದಾರ ಚನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಶ್ರೀಗಳು, ಶಿವಲಿಂಗಾನಂದ ಶ್ರೀಗಳು ಅದಿಜಾಂಬವ ನಿಗಮದ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ್, ನಗರಸಭಾ ಆಧ್ಯಕ್ಷರಾದ ಶ್ರೀಮತಿ ಸುಮಿತ್ರ ರಾಘವೇಂದ್ರ, ಬಿಜೆಪಿ ಮುಖಂಡರಾದ ಶ್ರೀಮತಿ ರೇಖಾ, ಹೊದಿಗೆರೆ ರಮೇಶ್, ಜಿ.ಪಂ.ಮಾಜಿ ಅಧ್ಯಕ್ಷರಾದ ರಘುನಾಥ್, ಸೇರಿದಂತೆ ಇತರರು ಭಾಗವಹಿಸಿದ್ದರು.
ಸುಬ್ರಾಯ ಭಟ್ಟರು ವೇದ ಘೋಷ ಮಾಡಿದರೆ, ಶ್ರೀಮತಿ ಜ್ಯೋತಿ ಪ್ರಾರ್ಥಿಸಿದರೆ ಜೆಡಿಎಸ್, ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ್ ಸ್ವಾಗತಿಸಿದರು. ನಿವೃತ್ತ ಉಪನ್ಯಾಸಕರಾದ ಶ್ರೀಮತಿ ಸಿ.ಬಿ.ಶೈಲಾ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಸದ್ಗುರು ಕಬೀರಾನಂದಸ್ವಾಮಿ ವಿದ್ಯಾ ಪೀಠದ ಪ್ರಾಥಮಿಕ ಪ್ರೌಢ ಮತ್ತು ಅಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ನಾಳಿನ ಕಾರ್ಯಕ್ರಮಗಳ ವಿವರ :
ಫೆ. 24 ರ ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಜಗದ್ಗುರು ಡಾ.ನಿರ್ಮಲಾನಂದಸ್ವಾಮಿ, ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಬೆಂಗಳೂರಿನ ಗವಿಪುರಂನ ಶ್ರೀ ಭವಾನಿ ಪೀಠದ ಗೋಸಾಯಿಮಠದ ಪೀಠಾಧ್ಯಕ್ಷರಾದ ಶ್ರೀ ಮಂಜುನಾಥ ಭಾರತಿ ಶ್ರೀಗಳು ಹಾಗೂ ಉದಯಚಲದ ಶ್ರೀ ಸದ್ಗುರು ಸೇವಾಶ್ರಮ ಟ್ರಸ್ಟ್ನ ಶ್ರೀ ಶ್ರೀಕಾಂತಾನಂದ ಭಗವಾನ್ ಸರಸ್ವತಿ ಶ್ರೀಗಳು ವಹಿಸಲಿದ್ದಾರೆ. ಸಂಸದರಾದ ಗೋವಿಂದ ಕಾರಜೋಳ, ಐಜಿಪಿ ರವಿಕಾಂತೇಗೌಡ, ಅಪರ ಜಿಲ್ಲಾಧಿಕಾರಿಗಳಾದ ಕುಮಾರಸ್ವಾಮಿ, ನಗರಸಭೆಯ ಉಪಾಧ್ಯಕ್ಷರಾದ ಶ್ರೀಮತಿ ಶ್ರೀದೇವಿ ಚಕ್ರವರ್ತಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...