ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 05 : ಬ್ಯೂಟಿ ಪಾರ್ಲರ್‍ಗೆ ಮಹಿಳೆಯರು ಆಕರ್ಷಿತರಾಗುವುದರಿಂದ ಹೆಚ್ಚು ಬೇಡಿಕೆಯಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಮೆದೆಹಳ್ಳಿ ರಸ್ತೆಯಲ್ಲಿ ಬುಧವಾರ ಗೋಲ್ಡನ್ ಐ ಫ್ಯಾಮಿಲಿ ಪಾರ್ಲರ್ ಸ್ಪಾ ಉದ್ಘಾಟಿಸಿ ಮಾತನಾಡಿದರು.
ಮದುವೆ ಹಾಗೂ ಶುಭ ಸಮಾರಂಭಗಳಲ್ಲಿ ಮಹಿಳೆಯರು ಬ್ಯುಟಿ ಪಾರ್ಲರ್‍ಗಳಿಗೆ ಹೋಗಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದು ಸಹಜ. ಇತ್ತೀಚಿನ ದಿನಗಳಲ್ಲಿ ಬ್ಯುಟಿ ಪಾರ್ಲರ್ ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ಶ್ಯಾಮಲ ಶಿವಪ್ರಕಾಶ್‍ರವರು ಆರಂಭಿಸಿರುವ ಈ ಪಾರ್ಲರ್ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸಿದರು.

ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಶಿವರಶ್ಮಿ ಅಕ್ಕ ಮಾತನಾಡಿ ದೇಹಕ್ಕಿಂತ ಮನಸ್ಸಿನ ಶೃಂಗಾರಕ್ಕೆ ಮಹಿಳೆಯರು ಹೆಚ್ಚಿನ ಒತ್ತು ಕೊಡಬೇಕು. ಭಾರತೀಯ ಮಹಿಳೆಯರ ನಿಜವಾದ ಶೃಂಗಾರವೆಂದರೆ ಶಾಂತಿ, ಸಮಾಧಾನ, ಮಧುರತೆ. ಇವೆಲ್ಲಾ ಇದ್ದರೆ ದೇವತೆಗಳಾಗಬಹುದು. ಸೌಂದರ್ಯಕ್ಕೆ ಹೇಗೆ ಒತ್ತು ಕೊಡುತ್ತೀರೋ ಅದೇ ರೀತಿ ಆಧ್ಯಾತ್ಮಿಕವಾಗಿ ಪವರ್‍ಫುಲ್ ಆಗಬೇಕೆಂದು ಮಹಿಳೆಯರಿಗೆ ಕರೆ ನೀಡಿದರು.
ಬ್ಯೂಟಿ ಪಾರ್ಲರ್‍ನ ಮಾಲೀಕರುಗಳಾದ ಶ್ಯಾಮಲ ಶಿವಪ್ರಕಾಶ್, ನಾಸಿಮ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಟಿವಿಎಸ್.ನಾಗಣ್ಣ,
ಜ್ಯೋತಿ ಲಕ್ಷ್ಮಣ್, ಅಮೃತ್‍ಗೌಡ, ಶಿವಮೊಗ್ಗದ ಮಾಜಿ ಕಾರ್ಪೊರೇಟರ್ ವಿಶ್ವಾಸ್, ಎಸ್.ಶಿವಪ್ರಕಾಶ್, ಈರಮ್ಮ, ಸುಜಿತ್, ಸುನಿತಾ ಮಲ್ಲಿಕಾರ್ಜುನ್, ನಗರಸಭೆ ಮಾಜಿ ಸದಸ್ಯ ರವಿಕುಮಾರ್, ಬಿಜೆಪಿ.ಮುಖಂಡರುಗಳಾದ ಲೋಕೇಶ್, ಸಂಪತ್‍ಕುಮಾರ್ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.











