ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 04 : ಅಂಜನಾ ನೃತ್ಯ ಕಲಾ ಕೇಂದ್ರ ಚಿತ್ರದುರ್ಗ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದೊಂದಿಗೆ ನೃತ್ಯ ನಾದ ನಮನ, ಗಾನ ಸರಸ್ವತಿ
ಎಸ್.ಜಾನಕಿಯವರಿಗೆ ನೃತ್ಯ ನಿವೇದನ ಹಾಗೂ ಕರ್ನಾಟಕ ಕಲಾಶ್ರಿ ಪ್ರಶಸ್ತಿ ಪುರಸ್ಕøತ ವಿದ್ವಾನ್ ಸಿ.ಆರ್.ಶಿವಪ್ರಕಾಶ್ರವರಿಗೆ ಗುರುವಂದನಾ ಕಾರ್ಯಕ್ರಮ ಆ.9 ರಂದು ಸಂಜೆ 6 ಗಂಟೆಗೆ ಹೊಳಲ್ಕೆರೆ ರಸ್ತೆಯಲ್ಲಿರುವ ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಕಬೀರಾನಂದಾಶ್ರಮದ ಶಿವಲಿಂಗಾನಂದಸ್ವಾಮಿ ಸಾನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಇವರುಗಳು ಪಾಲ್ಗೊಳ್ಳುವರು.
ಕೋಲಾರದ ವಿದುಷಿ ಶಿವಾನಿ ಮಣಿಕಂಠ ಮತ್ತು ತಂಡದವರಿಂದ ನೃತ್ಯ ವೈಭವ. ರೀತಿಷಾ ಸುಮುಖ್ ಮತ್ತು ಕು.ಪ್ರಣತಿ ಕಾರ್ ಕೋಗಿಲೆ ಸಿಸ್ಟರ್ಸ್ ಬೆಂಗಳೂರು ಇವರಿಂದ ಎಸ್.ಜಾನಕಿಯವರ ಕನ್ನಡ ಚಲನ ಚಿತ್ರಗೀತೆಗಳು. ಡಾ.ರಕ್ಷಿತಾ ಮತ್ತು ತಂಡದಿಂದ ಶಾಸ್ತ್ರೀಯ ನೃತ್ಯ ವೈವಿದ್ಯ, ವಿದುಷಿ ಪ್ರಜ್ಞಾ ಮತ್ತು ತಂಡದಿಂದ ನೃತ್ಯ ಮಾಲಿಕಾ, ವಿದುಷಿ ವೈಷ್ಣವಿ ಮರಡಿ ಮತ್ತು ತಂಡದಿಂದ ವಿಶೇಷ ಆಕರ್ಷಣೆ ನಟವರ ನೃತ್ಯ ರೂಪಕವಿರುತ್ತದೆ. ಕಲಾ ಪೋಷಕರು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಾರತೀಯ ಸಾಹಿತ್ಯ ನೃತ್ಯ ಪರಂಪರೆಯನ್ನು ಪ್ರೋತ್ಸಾಹಿಸುವಂತೆ ವಿದ್ವಾನ್ ಸಿ.ಆರ್.ಶಿವಪ್ರಕಾಶ್ ಡಾ.ನಂದಿನಿ ಶಿವಪ್ರಕಾಶ್ ಇವರುಗಳು ವಿನಂತಿಸಿದ್ದಾರೆ.











