Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಶ್ರೀರಾಮುಲು ಆರೋಪಕ್ಕೆ ಜನಾರ್ದನ ರೆಡ್ಡಿ ಫಸ್ಟ್ ರಿಯಾಕ್ಷನ್..!

---Advertisement---

ಬೆಂಗಳೂರು: ಜನಾರ್ದನ ರೆಡ್ಡಿ ಅವರು ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಆರೋಪ ಮಾಡಿದ್ದಾರೆ. ಆ ಸಂಬಂಧ ಇಂದು ಜನಾರ್ದನ ರೆಡ್ಡಿ ಅವರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ಕೊಟ್ಟಿದ್ದಾರೆ.

ಬಿಜೆಪಿಯಲ್ಲಿ ನಾನು ಪಾರ್ಲಿಮೆಂಟ್ರಿ ಚುನಾವಣೆಗೆ ಒಂದು ತಿಂಗಳ ಮುಂಚೆಯೇ ಸೇರ್ಪಡೆಯಾಗಿ ಕೆಆರ್ಪಿಪಿ ಪಕ್ಷವನ್ನು ನಾನು ವಿಲೀನ ಮಾಡಿರುವುದು ನಿಮಗೆಲ್ಕ ಗೊತ್ತೆ ಇದೆ. ಕೇವಲ 30 ದಿವಸಗಳು ಇದ್ದದ್ದು ಸಮಯ ನಂಗೆ. ಅದರಲ್ಲಿಯೂ ಕೂಡ ಇಡೀ ರಾಜ್ಯಾದ್ಯಂತ 18 ಪಾರ್ಲಿಮೆಂಟ್ ಕ್ಷೇತ್ರಗಳಲ್ಲಿ ನಾನು ಪ್ತಚಾರ ಮಾಡಿದ್ದೇನೆ. ಬಳ್ಳಾರಿಗೆ ಹೋಗಿ ಪ್ರಚಾರ ಮಾಡುವುದಕ್ಕೆ ಅವಕಾಶ ಇರಲಿಲ್ಲ ಅದು ಎಲ್ಲರಿಗೂ ಗೊತ್ತಿತ್ತು.

ಸುಪ್ರೀಂ ಕೋರ್ಟ್ ಅನುಮತಿ ಕೊಟ್ಟ ಬಳಿಕ ನಾನು ಬಳ್ಳಾರಿಗೆ ಹೋದ ತಕ್ಷಣ ಸಂಡೂರು ಉಪಚುನಾವಣೆ ಬಂತು. ಆ ಸಂದರ್ಭದಲ್ಲಿ ಪಕ್ಷದ ಹಿರಿಯರು, ಟಿಕೆಟ್ ವಿಚಾರವಾಗಿ ನನ್ನ ಬಳಿ ಮಾತನಾಡುವಂತಹ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ, ಡೆಲ್ಲಿ ನಾಯಕರು ಯಾರೇ ನನಗೆ ಕರೆ ಮಾಡಿದರು ಕೂಡ, ನಾನು ಹೇಳಿದ್ದು ಒಂದೇ ಮಾತು. ಪಕ್ಷ ಯಾರಿಗೆ ಟಿಕೆಟ್ ಕೊಟ್ರು ಕೂಡ ಅವರ ಪರವಾಗಿ, ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ, ಪಕ್ಷಕ್ಕೋಸ್ಕರ ದುಡಿತೀನಿ. ಪಕ್ಷ ಗೆಲ್ಲಿಸಲು ಪ್ರಾಮಾಣಿಕ ಕೆಲಸ ಮಾಡ್ತೀನಿ ಅಂತ ಹೇಳಿದ್ದೆ. ಹಾಗಾಗಿ ಬಂಗಾರು ಹನುಮಂತು ವಿಚಾರದಲ್ಲಿ ಟಿಕೆಟ್ ಸನ್ನ ಜನಾರ್ದನ ರೆಡ್ಡಿ ಅವರು ಕೊಡಿಸಿದರು ಎಂಬುದಲ್ಲ. ಅದು ರಿಸರ್ವೇಷನ್ ಸೀಟಾಗಿತ್ತು. ಪಕ್ಷ ಬಂಗಾರು ಹನುಮಂತುಗೆ ಟಿಕೆಟ್ ಕೊಡಬೇಕು ಅಂತ ನಿರ್ಧರಿಸಿದ್ದು. ಬಳಿಕ ಅಲ್ಲಿಯೇ ಇದ್ದು ನೀವೂ ಕೆಲಸ‌ಮಾಡಿ ಎಂದು ನನಗೆ ಹೇಳಿತ್ತು.‌ ಎಲ್ಲಾ ಹಿರಿಯರು ಪ್ರಚಾರ ಮಾಡಿದ್ರು. ಪ್ರಚಾರ ಆರಂಭವಾಗಿ ಮೂರು ದಿನ ಆದ್ಮೇಲೆ ಶ್ರೀರಾಮುಲು ಅವರು ತಡವಾಗಿ ಬಂದರು ಕೂಡ ಅವರು ಒಟ್ಟಿಗೆ ಕೆಲಸ ಮಾಡಿದರು.

ಶ್ರೀರಾಮುಲು ಅವರದ ವಿಚಾರದಲ್ಲಿ ಪಕ್ಷದ ವರಿಷ್ಠರಿಗೆ ಚಾಡಿ ಹೇಳುವಂತೆ ಅವಶ್ಯಕತೆ ನಂಗೆ ಇಲ್ಲ. ನಿನ್ನೆ ಶ್ರೀರಾಮುಲು ಅವರು ಮಾತಾಡುತ್ತಾ ನಮ್ಮ ಕುಟುಂಬಕ್ಕೆ ಹಾಗೂ ನನ್ನ ಬಗ್ಗೆ ಈ ರೀತಿ ಹೇಳಿ ಯಾಕೆ ಈ ರೀತಿ ಮಾಡ್ತಾರೆ ಗೊತ್ತಿಲ್ಲ ಅಂತ ಹೇಳಿದ್ರು. ನಿಮಗೆಲ್ಲ ಗೊತ್ತಿರುವಂತೆ ಜನಾರ್ದನ ರೆಡ್ಡಿ, ಶ್ರೀರಾಮುಲು ಬಗ್ಗೆ ಹೇಗೆ ಎಂಬುದು ಅಖಂಡ ಜಿಲ್ಲೆ ಬಳ್ಳಾರಿ ಜನತೆಗೆ ಗೊತ್ತು. ಬಳ್ಳಾರಿಯ ಪ್ರತಿಯೊಂದು ಮನೆಗೆ ಹೋದ್ರೆ ಶ್ರೀರಾಮುಲು ಅವರನ್ನು ಬೆಳೆಸಿದ್ದು ಜನಾರ್ದನ ರೆಡ್ಡಿ ಎಂಬುದನ್ನು ಹೇಳ್ತಾರೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...