Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ದಾವಣಗೆರೆ ಚಿತ್ರಮಂದಿರದಲ್ಲಿ ಜಗ್ಗೇಶ್ ಸಿನಿಮಾ ನಿಲ್ಲಿಸಲು ಹೇಳಿ, ಪೋಸ್ಟರ್ ಮುಚ್ಚಿದ್ದೇಕೆ..?

---Advertisement---

 

 

ದಾವಣಗೆರೆ: ರಾಜ್ಯದಲ್ಲಿ ಚುನಾವಣಾ ಪ್ರಚಾರ ಅಬ್ಬರದಿಂದ ನಡೆಯುತ್ತಿದೆ. ಮೂರು ಪಕ್ಷಗಳು ಸಹ ಸ್ಟಾರ್ ಪ್ರಚಾರಕರೊಂದಿಗೆ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ನವರಸ ನಾಯಕ ಜಗ್ಗೇಶ್ ಕೂಡ ಬಿಜೆಪಿಯಲ್ಲಿ ಸ್ಟಾರ್ ಪ್ರಚಾರಕರಾಗಿ ಗುರುತಿಸಿಕೊಂಡಿದ್ದಾರೆ. ಈ ಮಧ್ಯೆ ಅವರ ನಟನೆಯ ರಾಘವೇಂದ್ರ ಸ್ಟೋರ್ ಸಿನಿಮಾ ಕೂಡ ರಿಲೀಸ್ ಆಗಿದೆ. ಅದ್ಭುತ ರೆಸ್ಪಾನ್ಸ್ ಪಡೆಯುತ್ತಿದೆ.

ಜಗ್ಗೇಶ್ ಅವರು ರಾಜ್ಯಸಭಾ ಸದಸ್ಯರು ಕೂಡ. ಸ್ಟಾರ್ ಪ್ರಚಾರಕರು ಕೂಡ ಆಗಿರುವ ಕಾರಣ ಅವರ ಸಿನಿಮಾದ ಮೇಲೆ ಚುನಾವಣಾ ಆಯೋಗ ಕಣ್ಣಿಟ್ಟಿದೆ. ದಾವಣಗೆರೆಯಲ್ಲಿರುವ ಗೀತಾಂಜಲಿ ಚಿತ್ರಮಂದಿರಕ್ಕೆ ಚುನಾವಣಾ ಆಯೋಗ ಭೇಟಿ ನೀಡಿ, ಸಿನಿಮಾ ನಿಲ್ಲಿಸುವಂತೆ ತಿಳಿಸಿದೆ. ಸಿನಿಮಾ ಪ್ರದರ್ಶನ‌ ಮಾಡದಂತೆ ಸೂಚಿಸಿದೆ.

ಆದರೆ ಚಿತ್ರಮಂದಿರದ ಮಾಲೀಕರು ಮಾತನಾಡಿದ ಮೇಲೆ ಸಮಸ್ಯೆ ಬಗೆಹರಿದಿದೆ. ಜಗ್ಗೇಶ್ ಅವರು ಸ್ಟಾರ್ ಪ್ರಚಾರಕರು ಅಷ್ಟೇ. ಅವರೇನು ಚುನಾವಣೆಯಲ್ಲಿ ನಿಂತಿಲ್ಲ ಎಂದ ಮೇಲೆ ಸಿನಿಮಾ ಪ್ರದರ್ಶನಕ್ಕೆ ಒಪ್ಪಿಗೆ ಸಿಕ್ಕಿದೆ. ಆದರೆ ಸಿನಿಮಾ ಪೋಸ್ಟರ್ ಮೇಲೆ ಆಯೋಗದ ಅಧಿಕಾರಿಗಳು ಬಿಳಿ ಹಾಳೆ ಅಂಟಿಸಿದ್ದಾರೆ. ಜಗ್ಗೇಶ್ ಮುಖ ಕಾಣದಂತೆ ಮಾಡಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment