ಸುದ್ದಿಒನ್, ದಾವಣಗೆರೆ, ಫೆ. 27 : ಜಗಳೂರು ತಾಲೂಕಿನ ಕೊಡದ ಗುಡ್ಡ ಗ್ರಾಮದಲ್ಲಿ ಮಾರ್ಚ್ 04 ರಂದು ಬುಧುವಾರ ಸಾಯಂಕಾಲ 4.30 ರ ಸಮಯಕ್ಕೆ ಸರಿಯಾಗಿ ಮಹಾರಥೋತ್ಸವ ನಡೆಯಲಿದೆ.

ಜಾತ್ರೆಯ ಪ್ರಯುಕ್ತ ಕಾರ್ಯಕ್ರಮಗಳು ಫೆಬ್ರವರಿ 28 ರಂದು ಶನಿವಾರ ಕಂಕಣ ಧಾರಣೆ ಮಹೋತ್ಸವ ಹಾಗೂ ಮಾರ್ಚ್ 1 ಭಾನುವಾರ ಮಹಾ ಗಣರಾಧನೆ, 2 ರಂದು ಸೋಮವಾರ ಗಜ ವಾಹನ ಉತ್ಸವ, 3 ರಂದು ಮಂಗಳವಾರ ವೃಷಭ ವಾಹನೋತ್ಸವ, 4 ರಂದು ಬುದುವಾರ ಬೆಳಗ್ಗೆ 6 ಗಂಟೆಗೆ ಅಗ್ನಿ ಗುಂಡ ಮಹೋತ್ಸವ ಅಂದು ಸಂಜೆ 4:30 ಸಮಯಕ್ಕೆ ಮಹಾ ರಥೋತ್ಸವ ನಡೆಯಲಿದೆ. 6 ರಂದು ಶುಕ್ರವಾರ ಬೆಳಗ್ಗೆ ಓಕಳಿ ಕಾರ್ಯಕ್ರಮವಿರುತ್ತದೆ, ಇದೇ ಸಂದರ್ಭದಲ್ಲಿ ಮಾರ್ಚ್ 7 ರ ಶನಿವಾರದಿಂದ 18 ರ ಬುಧವಾರದವರೆಗೆ ಎತ್ತಿನ ಜಾತ್ರೆ ಮಾಡಲು ಕಮಿಟಿ ಅವರು ತೀರ್ಮಾನಿಸಿದ್ದಾರೆ ಆದ ಕಾರಣ ಎಲ್ಲಾ ರೈತ ಬಾಂಧವರು ಈ ಸದಾವಕಾಶವನ್ನು ಬಳಸಿಕೊಳ್ಳಲು ತಿಳಿಸಿದ್ದಾರೆ, ಹಾಗೂ ಜಾತ್ರೆಗೆ ಬರುವ ಪಾದಯಾತ್ರೆಗಳಿಗೆ ಮುಷ್ಟಿಗಳ ಹಳ್ಳಿ ಬಸವರಾಜಪ್ಪ ಇವರ ತೋಟದಲ್ಲಿ ಪ್ರಸಾದದ ವ್ಯವಸ್ಥೆಯು ಸಹ ಮಾಡಲಾಗಿದೆ, ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಭಕ್ತಾದಿಗಳಿಗೆ ಸಾರಿಗೆ ವ್ಯವಸ್ಥೆ ಅನುಕೂಲ ಇರುವದರಿಂದ ಸಾವಿರಾರು ಭಕ್ತರು ಸೇರುವ ನಿರೀಕ್ಷೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ, ಮೊಬೈಲ್ ಸಂಖ್ಯೆ 9972056239. .9880877058.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










