ಬೆಂಗಳೂರು: ಹ್ಯಾರೀಸ್ ಹಾಗೂ ನಲಪಾಡ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಲವು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇದರ ನಡುವೆ ಶ್ರೀಕಿ ಜೊತೆಗೆ ನಲಪಾಡ್ ಗೆ ನಂಟಿದೆ ಎಂಬ ಅನುಮಾನವೂ ಇದೆ. ಶ್ರೀಕಿ ಜೊತೆಗೆ ಪ್ರಭಾವಿ ನಾಯಕರ ಮಕ್ಕಳಿಗೆ ನಂಟಿರೋದು ನಿಜನಾ ಎಂಬ ಮಾತಿಗೆ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ನೀವೇಳಿದಂತೆ ಅದೇ ವಿಷಯ ಅಂತಾದ್ರೆ ಅದೆಲ್ಲವೂ ಹೊರಗಡೆ ಬರುತ್ತೆಮ ಯಾರ್ಯಾರು ಸಂಪರ್ಕದಲ್ಲಿದ್ದರು, ಇನ್ವಾಲ್ಮೆಂಟ್ ಏನಿದೆ ಎಂಬುದೆಲ್ಲವೂ ಹೊರಗಡೆ ಬರುತ್ತೆ. ಯಾರೇ ಮಾತನ್ನಾಡಿದ್ರು ಮಾತನ್ನಾಡೋದಕ್ಕೂ ತನಿಖೆಯಲ್ಲಿ ಆ ವಿಚಾರ ಹೊರಗೆ ಬರೋದಕ್ಕೂ ವ್ಯತ್ಯಾಸ ಇದೆ. ಅನೇಕ ಸಂದರ್ಭದಲ್ಲಿ ನಾವೆಲ್ಲಾ ಏನೇನೋ ಮಾತನ್ನಾಡಿರ್ತೀವಿ ರಾಜಕಾರಣವಾಗಿ ಮಾತನ್ನಾಡಿರ್ತೀವಿ. ಆದರೆ ಅದು ತನಿಖೆಯಲ್ಲಿ ಬರ್ಬೇಕಲ್ವಾ. ತನಿಖೆ ಆದ್ಮೇಲೆ ಬಿಜೆಪಿ ನಾಯಕರದ್ದು ಅಥವಾ ಇನ್ನ್ಯಾರದ್ದೋ, ನಮ್ಮ ಕಾಂಗ್ರೆಸ್ ನಾಯಕರದ್ದು, ಯಾರದ್ದೇ ಇರಲಿ ಅದು ಆಚೆ ಬಂದಾಗ ಗೊತ್ತಾಗುತ್ತೆ ಎಂದಿದ್ದಾರೆ.
ಬಿಜೆಪಿ ನಾಯಕರ ಸವಾಲಿನ ಬಗ್ಗೆ ಮಾತನ್ನಾಡಿ, ಅವರು ಹೇಳುವ ಪ್ರಕಾರ ಹೀಗೆ ದಾಳಿ ಮಾಡಿದ್ದಾರೆ, ಹೀಗಿಗೆ ಮಾಹಿತಿ ಸಿಗುತ್ತೆ ಅಲ್ವಾ. ಅದನ್ನು, ನಮ್ಮ ಎಸ್ಐಟಿ ವರದಿಯನ್ನು ಒಟ್ಟೊಟ್ಟಿಗೆ ಆಗುತ್ತೆ. ಹ್ಯಾರಿಸ್ ಅವರ ಇಬ್ಬರು ಮಕ್ಕಳ ಮೇಲೂ ಇಡಿ ದಾಳಿಯಾಗಿದೆ. ಹೊರಗಿನ ವಿಚಾರಗಳು ಏನು ತಿಳಿದಿಲ್ಲ. ಅದರ ತನಿಖೆ ಆದ್ಮೇಲೆ, ವರದಿ ಕೊಟ್ಮೇಲೆ ಯಾವ ವಿಚಾರಕ್ಕೆ ದಾಳಿಯಾಗಿದೆ ಎಂಬುದನ್ನ ಹೇಳುತ್ತಾರೆ. ಸಾಮಾನ್ಯವಾಗಿ ಅವರೇ ಪ್ರೆಸ್ ನೋಟ್ ರಿಲೀಸ್ ಮಾಡ್ತಾರೆ. ಅಲ್ಲಿ ತನಕ ನಾವೇನೋ ಹೇಳುವುದು ಸರಿಯಲ್ಲ ಎಂಬ ಮಾತನ್ನ ಹೇಳಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











