ಬೆಂಗಳೂರು: ಸಿದ್ದರಾಮಯ್ಯ ಅವರ ಕ್ರೇಜ್ ರಾಜ್ಯದಲ್ಲಿ ಹೇಗಿದೆ ಅನ್ನೋದು ಎಲ್ಲರಿಗೂ ಗೊತ್ತು. ಹೈಕಮಾಂಡ್ ನಾಯಕರಿಗೂ ಗೊತ್ತಿದೆ. ಆ ಕಾರಣಕ್ಕಾಗಿಯೇ ಎರಡನೇ ಬಾರಿಗೆ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಅವರನ್ನ ಅಹಿಂದ ನಾಯಕ ಎಂದೇ ಕರೆಯುತ್ತಾರೆ. ಹೀಗಾಗಿಯೇ ಎಐಸಿಸಿ ಮಟ್ಟದಲ್ಲೂ ಅಹಿಂದ ನಾಯಜತ್ವದ ಜವಾಬ್ದಾರಿ ನಿಭಾಯಿಸ್ತಾ ಇದ್ದಾರೆ. ಇಷ್ಟು ವರ್ಷದ ರಾಜಕೀಯದಲ್ಲಿ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರಿಗೆ ಮೂಡ ಹಗರಣ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಇದಾದ ಮೇಲೆಯೇ ಸಿಎಂ ಬದಲಾವಣೆ ಚರ್ಚೆಗಳೆಲ್ಲಾ ಶುರುವಾಗಿದ್ದು. ಹೀಗಾಗಿ ಹಲವರು, ಸಿಎಂ ಸಿದ್ದರಾಮಯ್ಯ ಅವರ ವರ್ಚಸ್ಸು ಕಡಿಮೆ ಆಯ್ತು ಅಂತೆಲ್ಲಾ ಮಾತಾಡಿಕೊಂಡರು. ಇದೀಗ ತಮ್ಮ ವರ್ಚಸ್ಸು ಹಾಗೇ ಇದೆ ಅಂತ ತೋರಿಸುವ ಸಲುವಾಗಿ ಸಿಎಂ ಸಿದ್ದರಾಮಯ್ಯ ಅವರು ಹೊಸ ಯೋಜನೆ ಶುರು ಮಾಡಿದ್ದಾರೆ. ಅದರಲ್ಲೂ ಎಸ್ ಎಂ ಕೃಷ್ಣ ಅವರ ಹಾದಿಯನ್ನ ಅನುಸರಿಸುತ್ತಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಿಂದ ಸಿದ್ದರಾಮಯ್ಯ ಅವರಿಗೆ ಕ್ರೇಜ್ ಎಷ್ಟಿದೆ ಅನ್ನೋದು ಗೊತ್ತಾಗಿತ್ತು. ಇದೀಗ ಅದೇ ರೀತಿಯಾದ ಉತ್ಸವಗಳನ್ನ ಆಚರಿಸಿಕೊಳ್ಳುವುದಕ್ಕೆ ಯೋಜನೆ ರೂಪಿಸಿದ್ದಾರೆ. ಅದೇ ರೀತಿ ಹಾಸನದಲ್ಲಿ ಸಿದ್ದರಾಮೋತ್ಸವ 2.0 ಗೆ ಎಲ್ಲಾ ತಯಾರಿ ನಡೆದಿತ್ತು. ಆದರೆ ಒಂದಷ್ಟು ಚರ್ಚೆಗಳ ನಂತರ ಅದು ಜನಕಲ್ಯಾಣ ಸಮಾವೇಶವಾಗಿ ಬದಲಾಗಿತ್ತು.
ಈಗ ತಮ್ಮ ವರ್ಚಸ್ಸನ್ನ ತೋರಿಸುವುದಕ್ಕೆ ಬೇರೆ ಬೇರೆ ಪ್ಲ್ಯಾನ್ ರೆಡಿ ಮಾಡಿದ್ದಾರೆ. ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡು, ಜನರ ಸಮಸ್ಯೆಗಳನ್ನ ಆಲಿಸುವ ಮೂಲಕ ತಮ್ಮ ವರ್ಚಸ್ಸನ್ನು ಕಾಪಾಡಿಕೊಳ್ಳುವ ಯೋಜನೆ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











