Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಮಂತಾ ನಟನೆಗೆ ಬ್ರೇಕ್ ಕೊಡ್ತಾ ಇರೋದು ನಿಜನಾ..?

---Advertisement---

 

 

ನಾಗಚೈತನ್ಯ ಜೊತೆಗಿನ ಮದುವೆ ಸಂಬಂಧ ಮುರಿದುಕೊಂಡ‌ ಮೇಲೆಯೇ ಸಮಂತಾ ಹೆಚ್ಚು ಸುದ್ದಿಯಾಗಿದ್ದು. ಸದ್ಯ ಬಾಲಿವುಡ್, ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಇರುವ ನಟಿ ಸಮಂತಾ ಬಗ್ಗೆ ಒಂದಷ್ಟು ವಿಚಾರಗಳು ಹರಿದಾಡುತ್ತಿವೆ. ಒಂದು ವರ್ಷ ನಟನೆಯಿಂದ ದೂರ ಉಳಿಯಲಿದ್ದಾರೆ ಎನ್ನಲಾಗುತ್ತಿದೆ.

ಸಮಂತಾ ಸದ್ಯ ಸಿಟಾಡೆಲ್ ಹಾಗೂ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಮಧ್ಯೆ ಹಬ್ಬಿದ್ದ ಒಂದು ವರ್ಷ ಬ್ರೇಕ್ ತೆಗೆದುಕೊಳ್ಳುವ ಸುದ್ದಿಗೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಅದೆಲ್ಲಾ ಸುಳ್ಳು ಎಂಬ ವಿಚಾರವನ್ನು ಬಾಲಿವುಡ್ ನ ವೆಬ್ಸೈಟ್ ಒಂದು ಸುದ್ದಿ‌ ಮಾಡಿದೆ.

ಇನ್ನು ಸಮಂತಾ ಮಯೋಸೈಟಿಸ್‌ನಿಂದ ಬಳಸುತ್ತಿರೋದು ಗೊತ್ತೇ ಇದೆ. ಈ ಕಾರಣಕ್ಕೆ ಒಂದು ವರ್ಷ ಬ್ರೇಕ್ ಪಡೆದ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಲಿದ್ದಾರೆ ಅನ್ನೋ ವರದಿ ಹರಿದಾಡಿತ್ತು. ಡಿವೋರ್ಸ್ ಬಳಿಕ ಅನಾರೋಗ್ಯ ಹೀಗೆ ಜೀವನದಲ್ಲಿ ತೊಂದರೆ ಅನುಭವಿಸಿದ್ದರು. ಕೊನೆಗೂ ಇವೆಲ್ಲದರಿಂದ ಹೊರ ಬಂದು ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment